Viral Video: ಬ್ರ್ಯಾಂಡ್‌ ಬೆಂಗಳೂರು ಅಂತಾ ಎದೆ ಬಡಿದುಕೊಳ್ಳೋ ಡಿಸಿಎಂ ಡಿಕೆಶಿ ನೋಡ್ಲೇಬೇಕಾದ ರಿಪೋರ್ಟ್‌!

By Santosh NaikFirst Published Oct 22, 2024, 4:08 PM IST
Highlights

ಬೆಂಗಳೂರಿನ ಹಲಸಹಳ್ಳಿಯಲ್ಲಿ ಗುಂಡಿ ತುಂಬಿದ ರಸ್ತೆಯಲ್ಲಿ ದಿವ್ಯಾಂಗ ಮಹಿಳೆಯೊಬ್ಬರು ಬಿದ್ದ ವಿಡಿಯೋ ವೈರಲ್‌ ಆಗಿದೆ. ಸ್ಥಳೀಯರು ಮಹಿಳೆಯ ನೆರವಿಗೆ ಧಾವಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬೆಂಗಳೂರಿನ ರಸ್ತೆಗಳ ಅಧ್ವಾನ ಸ್ಥಿತಿಯನ್ನು ಎತ್ತಿ ತೋರಿಸಿದೆ.

ಬೆಂಗಳೂರು (ಅ.22): ಮಾತೆತ್ತಿದರೆ ಬ್ರ್ಯಾಂಡ್‌ ಬೆಂಗಳೂರು, ಬ್ರ್ಯಾಂಡ್‌ ಬೆಂಗಳೂರು ಅಂತಾ ಎದೆ ಬಡಿದುಕೊಳ್ಳುವ ಡಿಸಿಎಂ ಡಿಕೆ ಶಿವಕುಮಾರ್‌ ಅವರು ನೋಡಲೇಬೇಕಾದ ಹಾಗ ಓದಲೇಬೇಕಾದ ರಿಪೋರ್ಟ್‌ ಇದು. ಬೆಂಗಳೂರಿನ ರಸ್ತೆಗಳು ಯಾವ ರೀತಿಯ ಅಧ್ವಾನ ಸ್ಥಿತಿಗೆ ಬಂದಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿದೆ ಈ ವಿಡಿಯೋ. ಸಿಲಿಕಾನ್‌ ಸಿಟಿ, ಎಲೆಕ್ಟ್ರಾನಿಕ್‌ ಸಿಟಿ ಅನ್ನೋ ಬೆಂಗಳೂರಿನಲ್ಲಿ ಒಂದೇ ಒಂದು ರಸ್ತೆಗಳು ನೆಟ್ಟಗಿಲ್ಲ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡಿದರೆ ಯಾವ ಕ್ಷಣದಲ್ಲಿ ಏನಾಗುತ್ತದೋ ಎಂದು ಜೀವ ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿದ್ದರೆ, ಇನ್ನೊಂದೆಡೆ, ರಾಜ್ಯದ ಗೃಹ ಸಚಿವ ಡಾ.ಜಿ ಪರಮೇಶ್ವರ್‌, ಮಳೆ ಬಂದ್ರೆ ನೀರನ್ನು ಮತ್ತೆ ಆಕಾಶಕ್ಕೆ ಹಾಕೋಕೆ ಆಗುತ್ತಾ ಅಂತಾ ಉಡಾಫೆಯ ಮಾತುಗಳಾಡ್ತಿದ್ದಾರೆ. ಇನ್ನು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್‌, ಬೆಂಗಳೂರಲ್ಲಿ ಮಾತ್ರವಲ್ಲ ದುಬೈನಲ್ಲೂ ಹೀಗೆ ಆಗುತ್ತೆ ಅಂತಾ ಹೇಳೋ ಮೂಲಕ ಇದನ್ನೆಲ್ಲಾ ಪ್ರಶ್ನೆ ಮಾಡೋ ವಿಚಾರವೇ ಅಲ್ಲ ಅಂತಾ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರಿನ ವರ್ತೂರಿನ ಹಲಸಹಳ್ಳಿಯಲ್ಲಿ ದಿವ್ಯಾಂಗ ಮಹಿಳೆಯೊಬ್ಬರು ಗುಂಡಿ ತುಂಬಿದ ರಸ್ತೆಯಲ್ಲಿ ಬಿದ್ದಿರುವ ವಿಡಿಯೋ ನೋಡಿದರೆ ಕರುಳು ಚುರಕ್‌ ಎನ್ನದೇ ಇರದು. ದಿವ್ಯಾಂಗ ಮಹಿಳೆಯೊಬ್ಬರು ತಮ್ಮ ಮಾಡಿಫೈಡ್‌ ಮಾಡಿದ ಸ್ಕೂಟರ್‌ನಲ್ಲಿ ಬರುವಾಗ ಗುಂಡಿ ತುಂಬಿದ ರಸ್ತೆಯಲ್ಲಿ ಆಯ ತಪ್ಪಿ ಬಿದ್ದಿದ್ದಾರೆ. ಇಡೀ ಗುಂಡಿ ಸಂಪೂರ್ಣವಾಗಿ ನೀರು ತುಂಬಿ ಹೋಗಿತ್ತು. ಗುಂಡಿಯಲ್ಲಿ ಬಿದ್ದ ಆಕೆಗೆ ಅಲ್ಲಿಂದ ಏಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಕೆಸರು ತುಂಬಿದ ನೀರಲ್ಲಿ ಬಿದ್ದ ಮಹಿಳೆ ಸಹಾಯಕ್ಕಾಗಿ ಅಂಗಲಾಚುತ್ತಿರುವುದು ಕಂಡಿದೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ನೀರಿನಲ್ಲಿ ಬಿದ್ದು ಅಲ್ಲಿಂದ ಮೇಲೆದ್ದು ಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದ ಮಹಿಳೆಯ ನೆರವಿಗೆ ಬಂದಿದ್ದಾರೆ. ಎರಡೂ ಕಾಲುಗಳ ಸ್ವಾಧೀನವಿಲ್ಲದ ಆಕೆಗೆ, ಅವರು ಬಳಸುತ್ತಿದ್ದ ನೆರವಿನ ಊರುಗೋಲು ಕೊಟ್ಟು ಅಲ್ಲಿಂದ ಏಳಿಸಿದ್ದಾರೆ.  ಮೂಲಸೌಕರ್ಯಗಳನ್ನು ನಿರ್ಮಿಸದೆ ತೆರಿಗೆದಾರರನ್ನು ಹಿಂಸಿಸುತ್ತಿರುವ  ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವನ್ನು ಸ್ಥಳೀಯ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

Latest Videos

ರೈಲ್ವೆಯ ಎಸಿ ಕೋಚ್‌ನಲ್ಲಿ ನೀಡುವ ಉಣ್ಣೆಯ ಹೊದಿಕೆ ತೊಳೆಯುವುದು ತಿಂಗಳಿಗೊಮ್ಮೆ ಮಾತ್ರ!

ಈ ವಿಡಿಯೋವಿಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ರಾಜ್ಯ ಸರ್ಕಾರಕ್ಕೆಕ ಹಿಡಿಶಾಪ ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ಎನಿಸಿಕೊಂಡವರು ಉಪಚುನಾವಣೆಯಲ್ಲಿ ಬ್ಯುಸಿ ಆಗಿದ್ದರೆ, ಬೆಂಗಳೂರಿನ ಜನ ಮಾತ್ರ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

Auto Kannadiga: ಪ್ರಯಾಣ ಮಾಡೋವಾಗ್ಲೆ ಕನ್ನಡ ಕಲಿಸುವ ಆಟೋ ಡ್ರೈವರ್‌ ಐಡಿಯಾಗೆ ನೆಟ್ಟಿಗರ ಮೆಚ್ಚುಗೆ

Watch: Person with disability gets injured after falling from scooty on pothole-ridden Halsahalli road near Varthur.

Varthur is considered one of luxurious localities of India’s silicone valley Bangalore. pic.twitter.com/FM21yxHRnz

— Janta Journal (@JantaJournal)
click me!