ಇದೀಗ, ಪರಿಸರ ಸ್ನೇಹಿ ನೀರಿನಲ್ಲಿ ಕರಗುವ ಕೈಚೀಲ! ಭಲೇ

Mar 1, 2021, 6:18 PM IST

ಬೆಂಗಳೂರು (ಮಾ. 01): ಪ್ಲಾಸ್ಟಿಕ್ ಬ್ಯಾಗ್‌ಗೆ ಪರ್ಯಾಯವಾಗಿ ನೀರಿನಲ್ಲಿ ಕರಗುವ ಪರಿಸರ ಸ್ನೇಹಿ ಕೈ ಚೀಲವನ್ನು ಎನ್ವಿ ಗ್ರೀನ್ ಎಂಬ ಸಂಸ್ಥೆ ಆವಿಷ್ಕರಿಸಿದೆ. ಎನ್ವಿ ಗ್ರೀನ್ ಎಂಬ ಸಂಸ್ಥೆ ಎಂಜಿ ರಸ್ತೆಯಲ್ಲಿ ನೂತನ ಕಚೇರಿ ತೆರೆದಿದೆ. ಕೇಂದ್ರ ಸಚಿವ ಸದಾನಂದ ಗೌಡ ಕಚೇರಿಗೆ ಚಾಲನೆ ನೀಡಿದ್ದಾರೆ.

ಸರ್ಫಿಂಗ್ ವೇಳೆ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವತಿ ರಕ್ಷಣೆಗೆ ರೋಚಕ ಕಾರ್ಯಾಚರಣೆ!

ಬಳಸಿದ ತ್ಯಾಜ್ಯ, ತರಕಾರಿಗಳಿಂದ ಈ ಕೈಚೀಲ ತಯಾರಿಸಲಾಗಿದೆ. ಜಾನುವಾರುಗಳು ತಿಂದರೂ ಯಾವುದೇ ತೊಂದರೆ ಇಲ್ಲ. ಬಿಸಿ ನೀರಿನಲ್ಲಿ ಕರಗಿಸಬಹುದು. ಬೆಂಕಿಯಲ್ಲಿ ಸುಡಬಹುದು. ಅರ್ಧ ಕೆಜಿಯಿಂದ 15 ಕೆಜಿ ವಸ್ತುಗಳನ್ನು ಇದರಲ್ಲಿ ತುಂಬಬಹುದಾಗಿದೆ.