ಬೆಂಗಳೂರು ವಿಶ್ವವಿದ್ಯಾಲಯವು 2024-25ನೇ ಸಾಲಿನ ಬಿಎ, ಬಿಎಸ್ಸಿ ಮತ್ತು ಬಿಕಾಂ ಪದವಿ (ಆನರ್ಸ್) ಕೋರ್ಸುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇನ್ನೊಂದೆಡೆ ಕೇಂದ್ರೀಯ ವಿವಿ ಕೋರ್ಸ್‌ಗಳಿಗೆ ಮೇ 15ರಿಂದ ಪ್ರವೇಶ ಪರೀಕ್ಷೆ ನಡೆಯಲಿದೆ.
ಬೆಂಗಳೂರು (ಏ.4): ಬೆಂಗಳೂರು ವಿಶ್ವವಿದ್ಯಾಲಯವು 2024-25ನೇ ಸಾಲಿನ ಬಿಎ, ಬಿಎಸ್ಸಿ ಮತ್ತು ಬಿಕಾಂ ಪದವಿ (ಆನರ್ಸ್) ಕೋರ್ಸುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ದ್ವಿತೀಯ ಪಿಯುಸಿಯಲ್ಲಿ ಕಲೆ/ವಾಣಿಜ್ಯ/ ವಿಜ್ಞಾನ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ 50ರಷ್ಟು ಅಂಕ (ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೇ.45) ಗಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳು ಗಳಿಸಿರುವ ಅಂಕಗಳ ಜೇಷ್ಠತಾ ಆಧಾರದ ಮೇಲೆ ನಿರ್ಧರಿಸಲಾಗುವುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಯೋಜಕರ ಕಚೇರಿ, ಸ್ನಾತಕ (ಹಾನರ್ಸ್) ಕಚೇರಿ, ಇತಿಹಾಸ ವಸ್ತು ಸಂಗ್ರಹಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿವಿ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವಿವಿಯ ವೆಬ್‌ಸೈಟ್ ಇಲ್ಲವೇ ಮೊ: 98442 73465ಗೆ ಕರೆ ಮಾಡಬಹುದು ಎಂದು ವಿವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
SSLC Result: ಮೇ 8ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸಾಧ್ಯತೆ
undefined
ರಾಜ್ಯದ 21 ನಗರಗಳಲ್ಲಿ ಆನ್‌ಲೈನ್ ಮೂಲಕ ನಡೆಯಲಿದೆ ಪರೀಕ್ಷೆ
ಕಲಬುರಗಿ: ಇಲ್ಲಿಗೆ ಸಮೀಪದ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್‍ಗಳಿಗೆ ಮೇ 15ರಿಂದ 24ರ ವರೆಗೆ ಆನ್‍ಲೈನ್ ವಿಧಾನದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪರೀಕ್ಷೆ ನಡೆಯುವ ನಗರಗಳ ಮಾಹಿತಿಯನ್ನು ಎನ್‍ಟಿಎ ವೆಬ್‍ಸೈಟಿನಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳು ಮೇ ಎರಡನೇ ವಾರದಲ್ಲಿ ಎನ್‍ಟಿಎ ವೆಬ್‍ಸೈಟ್ ಮೂಲಕ ಪ್ರವೇಶ ಪರೀಕ್ಷೆಯ ಹಾಲ್‍ಟಿಕೆಟ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗದಿದ್ದಲ್ಲಿ ಜೂ.30ರಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಬಿಬಿಎಂಪಿ ಪಾಲಿಕೆ ಶಾಲೆ-ಕಾಲೇಜುಗಳು ಕಾಲೇಜು ಶಿಕ್ಷಣ ಇಲಾಖೆಗೆ, ಅಂತಿಮ ಹಂತದ ಸಿದ್ಧತೆ
ಬಿ.ಟೆಕ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಬಿ.ಟೆಕ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಬಿ.ಟೆಕ್ ಮ್ಯಾಥಮೆಟಿಕಲ್ ಕಂಪ್ಯೂಟಿಂಗ್, ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಬಿಎಸ್ಸಿ ರಸಾಯನ ಶಾಸ್ತ್ರ, ಬಿ.ಎಸ್ಸಿ ಭೌತಶಾಸ್ತ್ರ, ಬಿ.ಎಸ್ಸಿ ಮನೋವಿಜ್ಞಾನ, ಬಿ.ಎಸ್ಸಿ ಭೂಗೋಳ, ಬಿ.ಬಿ.ಎ (ಸ್ವತಂತ್ರ), ಬಿ.ಎಸ್.ಡಬ್ಲ್ಯು, ಬಿ.ಎ ಅರ್ಥಶಾಸ್ತ್ರ, ಬಿ.ಎ ಇತಿಹಾಸ, ಬಿ.ಎ ಇಂಗ್ಲಿಷ್, ಬಿ.ಎಸ್ಸಿ ಭೂವಿಜ್ಞಾನ ವಿಷಯಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.
ಭಾರತದ ಹೊರಗಿನ 26 ನಗರಗಳು ಸೇರಿದಂತೆ ಒಟ್ಟು 380 ನಗರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದ್ದು, ಕರ್ನಾಟಕದ 21 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಕೋಲಾರ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ/ಮಣಿಪಾಲ ಬೀದರ್ ಮತ್ತು ವಿಜಯಪುರ ನಗರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
13 ಭಾಷೆಗಳಲ್ಲಿ ಪರೀಕ್ಷೆ: ಈ ಬಾರಿ 13 ಭಾಷೆಗಳಲ್ಲಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶವಿದ್ದು, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲೆಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.