ಅಭಿನಯದ ವೇಳೆ ವೇದಿಕೆ ಮೇಲೆ‌ ಕುಸಿದು ಬಿದ್ದು ಶಕುನಿ ಪಾತ್ರಧಾರಿ ಸಾವು!

By Govindaraj SFirst Published May 4, 2024, 11:09 AM IST
Highlights

ನಾಟಕದಲ್ಲಿ ಅಭಿನಯಿಸುವಾಗಲೇ ಕಲಾವಿದರೊಬ್ಬರು ವೇದಿಕೆ ಮೇಲೆ ಕುಸಿದು ಪ್ರಾಣ ಬಿಟ್ಟ ಘಟನೆ ನಡೆದಿದೆ. ಮೃತಪಟ್ಟವರು ದೇವನಹಳ್ಳಿ ತಾಲೂಕು ಅರದೇಶಹಳ್ಳಿಯ ನಿವಾಸಿಯಾದ ಎನ್.ಮುನಿಕೆಂಪಣ್ಣ ಎಂದು ತಿಳಿದು ಬಂದಿದೆ.

ಬೆಂಗಳೂರು (ಮೇ.04): ನಾಟಕದಲ್ಲಿ ಅಭಿನಯಿಸುವಾಗಲೇ ಕಲಾವಿದರೊಬ್ಬರು ವೇದಿಕೆ ಮೇಲೆ ಕುಸಿದು ಪ್ರಾಣ ಬಿಟ್ಟ ಘಟನೆ ನಡೆದಿದೆ. ಮೃತಪಟ್ಟವರು ದೇವನಹಳ್ಳಿ ತಾಲೂಕು ಅರದೇಶಹಳ್ಳಿಯ ನಿವಾಸಿಯಾದ ಎನ್.ಮುನಿಕೆಂಪಣ್ಣ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಯಲಹಂಕ ತಾಲೂಕಿನ ಸಾತನೂರು ಬಳಿ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯುತ್ತಿತ್ತು. 

ಈ ವೇಳೆ, ನಾಟಕದಲ್ಲಿ ಶಕುನಿಯ ಪಾತ್ರ ನಿರ್ವಹಿಸುತ್ತಿದ್ದ ಮುನಿಕೆಂಪಣ್ಣ ರಾತ್ರಿ 1.30ರ ಸುಮಾರಿಗೆ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ನಿವೃತ್ತ ಉಪನ್ಯಾಸಕರಾಗಿದ್ದ ಎನ್.ಮುನಿಕೆಂಪಣ್ಣ, ದೇನಹಳ್ಳಿಯಲ್ಲಿ 28 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇನ್ನು ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯ ಸಂಸ್ಕಾರದಕ್ಕೆ ಸಿದ್ದತೆ ಮಾಡಲಾಗಿಕೊಳ್ಳಲಾಗಿದೆ. ಸದ್ಯ ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. 

ಕಬ್ಬಿಣದ ರಾಡು ಬಿದ್ದು ಬಾಲಕ ಸಾವು: ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೇಲಿಂದ ಕಬ್ಬಿಣದ ರಾಡು ಬಿದ್ದು ಕೆಳಗೆ ನಿಂತಿದ್ದ ಬಾಲಕ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಸಮೀಪದ ಕಂಸಾಗಾರ ಗ್ರಾಮದಲ್ಲಿ ನಡೆದಿದೆ. ಮೈಸೂರಿನ ಗೌಸಿಯಾನಗರ ನಿವಾಸಿ ಕಲಿಂ ಪಾಷರ ಪುತ್ರ ಮಹಮದ್ ಪಾಷ (15) ಮೃತಪುಟ್ಟ ಬಾಲಕ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಈತ, ತನ್ನ ಚಿಕ್ಕಪ್ಪರಾದ ಮುಕ್ರಂ ಅಹಮದ್ ಮತ್ತು ಇಕ್ರಂ ಅಹಮದ್ ಅವರನ್ನು ನೋಡಿಕೊಂಡು ಹೋಗಲು ಕಂಸಾಗರ ಗ್ರಾಮಕ್ಕೆ ಬಂದಿದ್ದನು. 

ಬೆಂಗಳೂರು ರೇಸ್​ ಕೋರ್ಸ್​: ಎಫ್​ಐಆರ್‌ ರದ್ದಿಗೆ ಹೈಕೋರ್ಟ್ ನಕಾರ

ಮಹದೇಶ್ವರ ದೇವಸ್ಥಾನದ ಬಳಿ ಮೇಲ್ಛಾವಣಿಯ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಅಯತಪ್ಪಿದ ಕಬ್ಬಿಣ ರಾಡು ಕೆಳಗೆ ನಿಂತಿದ್ದ ಮಹಮದ್ ಪಾಷಾ ತಲೆಗೆ ಬಡಿದಿದೆ. ತೀವ್ರ ಗಾಯಗೊಂಡ ಬಾಲಕ ಮಹಮದ್ ಪಾಷಾ ನನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!