ಸ್ಯಾನಿಟೈಸರ್ ಬದಲು ರಸ್ತೆಗಳಲ್ಲಿ ನೀರನ್ನು ಸಿಂಪಡಿಸಿದ ಬಿಬಿಎಂಪಿ, ಇದೆಂಥಾ ಕಳ್ಳಾಟ..?

May 1, 2021, 12:47 PM IST

ಬೆಂಗಳೂರು (ಮೇ. 01): ಕೊರೊನಾ ತಡೆಗೆ ಸ್ಯಾನಿಟೈಸ್ ಮಾಡುತ್ತಿದೆ ಬಿಬಿಎಂಪಿ. ಇದರಲ್ಲೂ ಕಳ್ಳಾಟವಾಡುತ್ತಿದೆ. ನೀರು ಸಿಂಪಡಣೆ ಮಾಡಿ ಸ್ಯಾನಿಟೈಸ್ ಎನ್ನುತ್ತಿದೆ. ಕಂಠೀರವ ಸ್ಟೇಡಿಯಂ ಬಳಿಯ BWSSB ಯಿಂದ ನೀರು ತಂದು, ಅದಕ್ಕೆ ಸ್ಯಾನಿಟೈಸರ್ ಹಾಕದೇ ಹಾಗೆ ಸಿಂಪಡಣೆ ಮಾಡಿ ಕೈತೊಳೆದುಕೊಂಡಿದೆ.  ಈ ಬಗ್ಗೆ ಸಿಬ್ಬಂದಿಗಳನ್ನು ವಿಚಾರಿಸಿದರೆ, ಸಾರ್..ಕೆಲವೊಮ್ಮೆ ಕೆಮಿಕಲ್ ಕೊಡ್ತಾರೆ. ಕೆಲವೊಮ್ಮೆ ಕೊಡಲ್ಲ. ನೀರನ್ನೇ ನಗರದೆಲ್ಲೆಡೆ ಸಿಂಪಡಣೆ ಮಾಡಿ ಎಂದು ಹೇಳುತ್ತಾರೆ ಎಂದಿದ್ಧಾರೆ. 

ಮುಂದಿನ ತಿಂಗಳು ಹಸೆಮಣೆ ಏರಬೇಕಿದ್ದ ವರ ಕೋವಿಡ್‌ನಿಂದ ಸಾವು