ಅಭಿವೃದ್ಧಿ ನಮ್ಮ ಮೂಲಮಂತ್ರವಾಗಿದ್ದು, ಅದು ನಿತ್ಯ ನಿರಂತರವಾಗಿದೆ. ಕೋಮುಭಾವನೆ ಕೆರಳಿಸುವವರಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಅನ್ನು ಬೆಂಬಲಿಸಿ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಹೇಳಿದ ಸಚಿವ ಎಂ.ಬಿ.ಪಾಟೀಲ
ವಿಜಯಪುರ(ಮೇ.03): ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿವೃದ್ಧಿ ಎಂದರೆ ಅಸಡ್ಡೆ ಎಂದು ಸಚಿವ ಎಂ.ಬಿ.ಪಾಟೀಲ ವ್ಯಂಗ್ಯವಾಡಿದರು. ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರ ಮತ್ತು ಗುಣದಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು. ಅಭಿವೃದ್ಧಿ ನಮ್ಮ ಮೂಲಮಂತ್ರವಾಗಿದ್ದು, ಅದು ನಿತ್ಯ ನಿರಂತರವಾಗಿದೆ. ಕೋಮುಭಾವನೆ ಕೆರಳಿಸುವವರಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಅನ್ನು ಬೆಂಬಲಿಸಿ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಶಾಸಕ ಸಂಸದರಾದವರು ತಮ್ಮ ಅಧಿಕಾರವಧಿಯಲ್ಲಿ ಕನಿಷ್ಠ ಶೇ.80 ರಷ್ಟಾದರೂ ಕೆಲಸ ಮಾಡಬೇಕು. ಆದರೆ, ಶೂನ್ಯ ಅಭಿವೃದ್ಧಿ ಮಾಡಿರುವವರಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಕ್ರೀಯಾಶೀಲರಾಗಿದ್ದು, ಬಹುಭಾಷೆ ಬಲ್ಲವರಾಗಿದ್ದಾರೆ. ಇಂಥ ವಿದ್ಯಾವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಪಕ್ಷಕ್ಕೆ ಮುಜುಗರ: ಅರವಿಂದ ಲಿಂಬಾವಳಿ
ಈ ವೇಳೆ ಕಾಂಗ್ರೆಸ್ ಮುಖಂಡರಾದ ವಿ.ವಿ.ಅರಕೇರಿ, ಡಾ.ಶಂಕ್ರಯ್ಯ ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ವಿ.ಎಚ್.ಬಿದರಿ, ಅಕ್ಬರ ಬಿದರಿ, ಅರುಣ ಶಿರಬೂರ, ಬಾಬು ಗಡದಾನ, ಆಶಾ ಕಟ್ಟಿಮನಿ, ಶಂಕರಗೌಡ ಪಾಟೀಲ, ಟಿ.ಆರ್.ಪಚ್ಚೆಣ್ಣವರ, ಸುರೇಶಗೌಡ ಪಾಟೀಲ, ಪ್ರಕಾಶ ಸೊನ್ನದ, ಮೈಬೂಬಸಾಬ ರಾಂಪುರ, ಶಿವಪ್ಪ ಮಗಾರಿ, ಸುರೇಶ ಕುರಿ, ಗೋಪಾಲ ಬಾವಿಮನಿ ಮುಂತಾದವರು ಉಪಸ್ಥಿತರಿದ್ದರು.