ACB Raid:15 ಭ್ರಷ್ಟರಿಗೆ ಬೆವರಿಳಿಸಿದ ಎಸಿಬಿ, ರ್ಯಾಂಕಿಂಗ್ ಕೊಟ್ರೆ ಯಾರು ನಂ.1.? ಯಾರು ನಂ. 15?

Nov 27, 2021, 5:08 PM IST

ಬೆಂಗಳೂರು (ನ. 27): ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ 15 ಭ್ರಷ್ಟರ ಬೆವರಿಳಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ACB Raid) ಅಧಿಕಾರಿಗಳು ಒಟ್ಟು 72.57 ಕೋಟಿ ರು. ಮೌಲ್ಯದ ಆಸ್ತಿ-ಪಾಸ್ತಿಯನ್ನು ಪತ್ತೆ ಮಾಡಿದ್ದಾರೆ. 48 ಗಂಟೆಗಳ ಕಾಲ ಎಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕ  ಅಕ್ರಮ ಆಸ್ತಿ ದಂಗು ಬಡಿಸುತ್ತದೆ. 110 ಎಕರೆ ಕೃಷಿ ಜಮೀನು, 44 ಮನೆ, 48 ನಿವೇಶನ, 15 ಕಿಜಿ ಚಿನ್ನ, 25 ಕಾರು, 1.53 ಕೋಟಿ ಕ್ಯಾಶ್ ಸಿಕ್ಕಿದೆ. 

ಸೂಕ್ತ ದಾಖಲೆಗಳನ್ನು ಒದಗಿಸಿದರೆ ಮಾತ್ರ ಜಪ್ತಿ ಮಾಡಿರುವ ಚಿನ್ನಾಭರಣ, ನಗದು, ಇನ್ನಿತರೆ ವಸ್ತುಗಳನ್ನು ವಾಪಸ್‌ ನೀಡಲಾಗುತ್ತದೆ. ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. 500ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ 15 ಸರ್ಕಾರಿ ನೌಕರರ 68 ಸ್ಥಳಗಳ ಮೇಲೆ ಈ ಬೃಹತ್‌ ಶೋಧ ನಡೆಸಿದ್ದರು. ಹಾಗಾದರೆ ಈ ಭ್ರಷ್ಟರಲ್ಲಿ ನಂ. 1 ಭ್ರಷ್ಟ ಯಾರು..? ಯಾರ ಬಳಿ ಎಷ್ಟೆಲ್ಲಾ ಸಂಪತ್ತುಗಳಿವೆ..? ಇಲ್ಲಿದೆ ವರದಿ