ಕಾಂಗ್ರೆಸ್ ಪ್ರಣಾಳಿಕೆ ಹಿಂದೆ ವಿದೇಶಿ ಶಕ್ತಿ: ಕೇಂದ್ರ ಸಚಿವ ಅನುರಾಗ್ ಠಾಕೂ‌ರ್

Published : Apr 28, 2024, 08:45 AM IST
ಕಾಂಗ್ರೆಸ್ ಪ್ರಣಾಳಿಕೆ ಹಿಂದೆ ವಿದೇಶಿ ಶಕ್ತಿ: ಕೇಂದ್ರ ಸಚಿವ ಅನುರಾಗ್ ಠಾಕೂ‌ರ್

ಸಾರಾಂಶ

ಕಾಂಗ್ರೆಸ್ ಪ್ರಣಾಳಿಕೆಯನ್ನು ವಿದೇಶದ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ತಯಾರಿಸಿವೆ. ಅವರು ಕಾಂಗ್ರೆಸ್ ಸಿದ್ಧಾಂತವನ್ನು ಸಂಪೂರ್ಣ ಆಪೋಶನ ತೆಗೆದುಕೊಂಡು ರಾಷ್ಟ್ರವನ್ನು ನಾಶ ಮಾಡುವಂತಹ ಅಂಶಗಳನ್ನು ಸೇರಿಸಿವೆ: ಕೇಂದ್ರ ಸಚಿವ ಅನುರಾಗ್ ಠಾಕೂ‌ರ್ 

ಹಮೀರ್‌ಪುರ(ಏ.28):  ಕಾಂಗ್ರೆಸ್ ಪ್ರಣಾಳಿಕೆಯನ್ನು ವಿದೇಶಿ ಶಕ್ತಿಗಳು ತಯಾರಿಸಿ ದೇಶ ವನ್ನು ಧರ್ಮ ಮತ್ತು ಪ್ರಾಂತ್ಯಗಳ ಆಧಾರದಲ್ಲಿ ಒಡೆಯುವ ಹುನ್ನಾರ ಮಾಡಿವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂ‌ರ್ ಆರೋಪಿಸಿದ್ದಾರೆ.

ಶನಿವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪ್ರಣಾಳಿಕೆಯನ್ನು ವಿದೇಶದ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ತಯಾರಿಸಿವೆ. ಅವರು ಕಾಂಗ್ರೆಸ್ ಸಿದ್ಧಾಂತವನ್ನು ಸಂಪೂರ್ಣ ಆಪೋಶನ ತೆಗೆದುಕೊಂಡು ರಾಷ್ಟ್ರವನ್ನು ನಾಶ ಮಾಡುವಂತಹ ಅಂಶಗಳನ್ನು ಸೇರಿಸಿವೆ. ಪ್ರಮುಖವಾಗಿ ಆಸ್ತಿ ಮರುಹಂಚಿಕೆ ಹೆಸರಿನಲ್ಲಿ ಮುಸ್ಲಿಮರಿಗೆ ಚಿನ್ನ ಕೊಡುವುದು ಮತ್ತು ದೇಶವನ್ನು ಅಣುಬಾಂದ್ ನೊಂದಿಗೆ ಸಮಾಧಿ ಮಾಡುವ ಹುನ್ನಾರ ನಡೆಸಿವೆ ಎಂದು ತಿಳಿಸಿದರು.

ಮೋದಿಯಿಂದ ವಿಕಸಿತ ಭಾರತ: ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್

ಈ ನಡುವೆ ಪ್ರಣಾಳಿಕೆ ಹಿಂದೆ ವಿದೇಶಿ ಶಕ್ತಿ, ತುಕ್ಕೆ ಗ್ಯಾಂಗ್ ಇವೆ ಎಂಬ ಪದ ಬಳಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಠಾಕೂರ್ ವಿರುದ್ಧ ಕಾಂಗ್ರೆಸ್ ದೂರಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

KPSC Scam: ಹಣ ಕೊಟ್ಟವರಿಗೆ ಹುದ್ದೆ ಸೇಲ್, ದಿಲ್ಲಿಗೆ ಬಂದು ನ್ಯಾಯದ ನಾಟಕ ಆಡ್ತೀರಾ? ಡಿಕೆಶಿ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
BJP leaders Instagram activity: ಮೋದಿ ಕರೆ ಬೆನ್ನಲ್ಲೇ ಬಿಜೆಪಿ ನಾಯಕರು ಇನ್‌ಸ್ಟಾದಲ್ಲಿ ಫುಲ್ ಆ್ಯಕ್ಟಿವ್‌!