ಲೋಕಸಭಾ ಚುನಾವಣೆ 2024: ಮತ್ತೆ ಸಿಎಂ ಆಗ್ತಿದ್ದೆ, ಆದ್ರೂ ದಿಲ್ಲಿಗೆ ಹೊರಟಿರುವೆ, ಬಸವರಾಜ ಬೊಮ್ಮಾಯಿ

By Kannadaprabha NewsFirst Published Apr 28, 2024, 9:01 AM IST
Highlights

ಇದು ಪಕ್ಷದ ನಿರ್ಧಾರ. ಹಾಲಿ ಸಂಸದ ಶಿವಕುಮಾರ ಉದಾಸಿ ಇನ್ನೊಂದು ಅವಧಿ ಮುಂದುವರೆಯುವ ವಿಶ್ವಾಸವಿತ್ತು. ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ. ಹಾಗಾಗಿ ಪಕ್ಷದ ವರಿಷ್ಠರು ನನ್ನ ಸ್ಪರ್ಧೆಯನ್ನು ನಿರ್ಧರಿಸಿದರು. ನಾನೂ ಅಂದುಕೊಂಡಿರಲಿಲ್ಲ, ರಾಷ್ಟ್ರ ರಾಜಕಾರಣಕ್ಕೆ ಹೋಗುವ ಸದಾವಕಾಶ ಬರುತ್ತದೆಂದು, ಆದಾಗಿಯೇ ಒದಗಿ ಬಂದಿದೆ: ಬಸವರಾಜ ಬೊಮ್ಮಾಯಿ 

• ರಾಷ್ಟ್ರ ರಾಜಕಾರಣ ಪ್ರವೇಶ ತಮ್ಮ ಆಯ್ಕೆಯೇ ಅಥವಾ ಹೈಕಮಾಂಡ್ ಸೂಚನೆಯೋ?

ಇದು ಪಕ್ಷದ ನಿರ್ಧಾರ. ಹಾಲಿ ಸಂಸದ ಶಿವಕುಮಾರ ಉದಾಸಿ ಇನ್ನೊಂದು ಅವಧಿ ಮುಂದುವರೆಯುವ ವಿಶ್ವಾಸವಿತ್ತು. ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ. ಹಾಗಾಗಿ ಪಕ್ಷದ ವರಿಷ್ಠರು ನನ್ನ ಸ್ಪರ್ಧೆಯನ್ನು ನಿರ್ಧರಿಸಿದರು. ನಾನೂ ಅಂದುಕೊಂಡಿರಲಿಲ್ಲ, ರಾಷ್ಟ್ರ ರಾಜಕಾರಣಕ್ಕೆ ಹೋಗುವ ಸದಾವಕಾಶ ಬರುತ್ತದೆಂದು, ಆದಾಗಿಯೇ ಒದಗಿ ಬಂದಿದೆ.

• ಇಷ್ಟು ಬೇಗ ರಾಜ್ಯ ರಾಜಕಾರಣ ಬೇಸರವಾಯಿತೇ?

ಬೇಸರದ ಸಂಗತಿಯಲ್ಲ, ಇದು ರಾಜಕಾರಣದ ವಿಷಯ. ಇವತ್ತು ಇಡೀ ರಾಜಕೀಯ ಸನ್ನಿವೇಶ ಬದಲಾವಣೆಯ ಹಾದಿಯಲ್ಲಿದೆ. ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಭಾರೀ ಬದಲಾವಣೆ ಆಗುತ್ತಿವೆ. ಒಬ್ಬ ರಾಜಕಾರಣಿ ಸಮಯ ಅರಿತು ಸವಾಲು ಸ್ವೀಕಾರ ಮಾಡಿ ಮುನ್ನಡೆದಾಗ ಮಾತ್ರ ಯಶಸ್ವಿ ಆಗಬಲ್ಲ,

ಮುಸ್ಲಿಂ ಮೀಸಲು ಮುಂದುವರಿಸಿದ್ದು ಬೊಮ್ಮಾಯಿ ಸರ್ಕಾರ: ಸಿಎಂ ಸಿದ್ದರಾಮಯ್ಯ

• ಅಂದ್ರೆ, ಮತ್ತೊಮ್ಮೆ ರಾಜ್ಯದ ಸಿಎಂ ಆಗುವ ಕನಸಿತ್ತು ತಮಗೆ?

ಖಂಡಿತ, ಮತ್ತೆ ಸಿಎಂ ಆಗುವ ವಿಶ್ವಾಸವೂ ಇತ್ತು. ಸದ್ಯದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಇವತ್ತಿನ ರಾಜಕೀಯ ಸವಾಲಿಗೆ ಹೆಗಲುಗೊಟ್ಟಿದ್ದೇನೆ. ಈ ಹಿಂದೆ ಕೇಂದ್ರದಲ್ಲಿ ಇದ್ದ ವರನ್ನು ರಾಜ್ಯಕ್ಕೆ ಕಳುಹಿಸಿದ, ರಾಜ್ಯದಲ್ಲಿ ಇದ್ದವರನ್ನು ಕೇಂದ್ರಕ್ಕೆ ಕರೆಸಿಕೊಂಡ ಸಾಕಷ್ಟು ನಿದರ್ಶನಗಳಿವೆ. ಮುಂದೆಯೂ ಇಂಥ ಅವಕಾಶ ಬರಬಹುದು, ನೋಡೋಣ.

• ಹಿಂದೆ ತಾವು ವಿಧಾನಪರಿಷತ್, ವಿಧಾನಸಭೆ ಚುನಾವಣೆ ಎದುರಿಸಿದ್ದೀರಿ, ಈಗ ಲೋಕಸಭೆ ಏನು ವ್ಯತ್ಯಾಸ ಅನಿಸುತ್ತಿದೆ?

ಕ್ಷೇತ್ರ ವ್ಯಾಪ್ತಿಯಲ್ಲಿ ತುಂಬವ್ಯತ್ಯಾಸವಿದೆ. ಎಲ್ಲ ಮತದಾರರನ್ನು ತಲುಪುವುದೇ ಬಹುದೊಡ್ಡ ಸವಾಲು. ವಿಧಾನಪರಿಷತ್, ವಿಧಾನಸಭೆ ಸ್ಪರ್ಧೆ ವೇಳೆ ಸ್ಥಳೀಯವಾಗಿ ಜನತೆಯ ಬೇಕು-ಬೇಡಿಕೆ ಮತ್ತು ಮೂಲಸೌಕಯ್ಯ ಅಭಿವೃದ್ಧಿ ವಿಷಯಗಳು ಮುಖ್ಯವಾಗುತ್ತವೆ. ಲೋಕಸಭೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ವಿಷಯಗಳು, ದೇಶದ ಭದ್ರತೆ, ಧರ್ಮ ರಕ್ಷಣೆ ಇತ್ಯಾದಿ ಮುಖ್ಯವಾಗುತ್ತವೆ.

• ಸತತ 3 ಬಾರಿ ಬಿಜೆಪಿ ಗೆಲ್ಲಿಸಿ ಭ್ರಮನಿರಸನಗೊಂಡಿದ್ದೇವೆ ಎನ್ನುತ್ತಿದ್ದಾರೆ ಕ್ಷೇತ್ರದ ಮತದಾರರು. ಈಗ ಅವರಿಗೆ ತಮ್ಮ ಸಾಂತ್ವನ ಮತ್ತು ಭರವಸೆ ಏನು?

ಹೆದ್ದಾರಿ, ರೈಲು ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಜಾರಿಯಾಗಿವೆ. ಬೆಳೆ ವಿಮೆ ಪರಿಹಾರ ಅತಿ ಹೆಚ್ಚು ಸಿಗುತ್ತಿರು ವುದು ಗದಗ, ಹಾವೇರಿ ಜಿಲ್ಲೆಗಳ ರೈತರಿಗೆ ಮಾತ್ರ. ಹೀಗೆ ಕೇಂದ್ರದಹತ್ತು ಹಲವುಯೋಜನೆಗಳನ್ನು ಸಂಸದ ಶಿವಕುಮಾರ ಉದಾಸಿ ಈ ಕ್ಷೇತ್ರಕ್ಕೆ ತಂದಿದ್ದಾರೆ. ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಮಾಡಿದ್ದೇನೆ, ಎಲ್ಲೂ ಇಂಥ ಅಪಸ್ವರ ಕೇಳಿ ಬಂದಿಲ್ಲ,

• ನಿಮ್ಮನ್ನು ಏಕೆ ಈ ಕ್ಷೇತ್ರದ ಜನ ಆರಿಸಬೇಕು?

ನಾನು ಸಿಎಂ ಆಗಿದ್ದಾಗ ಪಿಎಂ ಮಿತ್ರ ಟೆಕ್ಸಟೈಲ್ಸ್ ಯೋಜನೆಗೆ ಮೂರು ಪ್ರಸ್ತಾವನೆಗಳನ್ನು ಕಳುಹಿಸಿದ್ದೆ. ಬರುವ ದಿನಗಳಲ್ಲಿ ಅವುಗಳನ್ನು ಸಾಕಾರ ಮಾಡುವ ಕನಸಿದೆ. ಹಾವೇರಿಯಲ್ಲಿ ಟಾ ಟಾ ಸ್ಟೀಲ್ ಸ್ಥಾಪನೆಗೆ ಯತ್ನಿಸಿದೆ. ಅದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿರೋಧಿಸಿದರು. ಗದಗಿನಲ್ಲಿ ಪೋಸ್ಕೋ ಸ್ಥಾಪಿಸಲು ಮುಂದಾದೆವು. ಅದಕ್ಕೂ ವಿರೋಧ ಮಾಡಿದರು. ಪ್ರತ್ಯೇಕ ಹಾಲು ಒಕ್ಕೂಟ, ಮೆಗಾ ಡೈರಿ ಸ್ಥಾಪಿಸಿ ಸಾವಿರಾರು ಕೈಗಳಿಗೆ ಉದ್ಯೋಗನೀಡಿ, ರೈತರಿಗೆ ಅನುಕೂಲಮಾಡಲಾಗಿದೆ. ಇಂಥ ಚಿಂತನೆಗಳೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ.

• ಹೆಚ್ಚಿನ ನೀರಿನ ಸೌಕಯ್ಯ ಇಲ್ಲದ ಗದಗಿನ ಬಗ್ಗೆ ತಮ್ಮ ಕನಸು?

ಆಹಾರ ಧಾನ್ಯ. ಮೆಣಸಿನಕಾಯಿ ಬೆಳೆಯುವ ಗದಗ ಜಿಲ್ಲೆ ಯಲ್ಲಿ ಫುಡ್ ಪ್ರೋಸೆಸಿಂಗ್ ಉದ್ಯಮ ಸ್ಥಾಪನೆಗೆ ಹೆಚ್ಚು ಅವಕಾಶವಿದೆ. ಅದರಂತೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸಂಸ್ಕರಣೆ, ಮೌಲ್ಯವರ್ಧಣೆ ಮತ್ತು ಉಪ ಉತ್ಪನ್ನಗಳ ಬಗ್ಗೆ ಹೆಚ್ಚು ಒತ್ತು ನೀಡುವ ಕನಸಿದೆ. ಇದರಿಂದ ಬಹುದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಆಗಲಿದೆ ಎಂದು ಭಾವಿಸಿರುವೆ.

• ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿ ವಿರುದ್ಧ ಅಸಮಾಧಾನಗೊಂಡ ಕುರುಬ ಸಮುದಾಯವನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಿ!

ಮೊದಲನೆಯದಾಗಿ ಈ ವಾದವೇ ಸರಿಯಿಲ್ಲ, ಕುರುಬ ಸಮು ದಾಯ ನಮ್ಮ ಜೊತೆಗೆ ನಿಂತಿದೆ. ಎರಡನೆಯದಾಗಿ ಈ ಕ್ಷೇತ್ರದ ಟಿಕೆಟ್ ನಾನು ಬಯಸಿದ್ದಲ್ಲ, ಸಾಮಾಜಿಕನ್ಯಾಯಪಾಲನೆಗಾಗಿ ಕಾಂತೇಶ ಅವರಗೇ ಟಿಕೆಟ್ ನೀಡುವಂತೆ ವರಿಷ್ಠರಿಗೆ ನಾನೇ ಮನವಿ ಮಾಡಿದ್ದೆ. ಮೇಲಾಗಿ ನಮ್ಮ ತಂದೆಯವರ ಜೊತೆ ಕುರುಬ ಸಮುದಾಯ ಹಿಂದಿನಿಂದಲೂ ಉತ್ತಮ ಸಂಬಂಧ ಹೊಂದಿತ್ತು. ಇಡೀ ಸಮುದಾಯ ನನ್ನ ಬೆಂಬಲಕ್ಕೆ ನಿಂತಿದೆ.

• ತಾವು ಸಿಎಂ ಆಗಿದ್ದವರು, ರಾಜ್ಯ ಬಿಜೆಪಿಯ ಮುಂಚೂಣಿ ನಾಯಕರಾಗಿದ್ದರೂ ರಾಜ್ಯದ ಬೇರೆಡೆ ಪ್ರಚಾರಕ್ಕೆ ಹೋಗದೇ ಕ್ಷೇತ್ರಕ್ಕೆ ಸೀಮಿತವಾಗಿದ್ದೀರಲ್ಲ, ಭಯವೆ?

ಈ ಮುಂಚೆಯೇ ರಾಜ್ಯದ ಬೇರೆ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಿ ಬಂದಿರುವೆ. ಈಗ ನನ್ನ ಕ್ಷೇತ್ರದ ಜನ ತಮ್ಮಲ್ಲಿಗೆ ಬರಬೇಕೆಂದು ಬಯಸುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬರಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ಜನ ಬಿಡು ತ್ತಿಲ್ಲ, ನಿತ್ಯ ಹತ್ತು ಹದಿನೈದು ಪಂಚಾಯತಿಗಳಿಗೆ ಹೋಗು ತ್ತಿದ್ದೇನೆ. ಹಾಗಾಗಿ ಬಿಡುವು ಇಲ್ಲದಂತಾಗಿದೆ.

• 134 ಬಹುಮತದ ಸರ್ಕಾರವನ್ನು ಅಲುಗಾಡಿಸುತ್ತಾ ರಿಸಲ್ಟ್?

ಹೌದು! ನಾನು 5 ವರ್ಷ ಮುಂದುವರೆಯಬೇಕೆಂದರೆ ಹೆಚ್ಚು ಲೀಡ್ ಕೊಟ್ಟು, ಹೆಚ್ಚು ಸ್ಥಾನ ಗೆಲ್ಲಿಸಿ ಎಂದು ಸ್ವತಃ ಸಿಎಂ ಸಿದ್ದ ರಾಮಯ್ಯ ಮತದಾರರಲ್ಲಿ ಗೋಗರೆಯುತ್ತಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನಾನೂ ಸಿಎಂ ಆಗುತ್ತೇನೆ ಎಂದು ಅವಕಾಶ ಸಿಕ್ಕಾಗಲೆಲ್ಲ ಹೇಳುತ್ತಿದ್ದಾರೆ. ಈ ಪೈಪೋಟಿ, ಗುಂಪು ಗಾರಿಕೆ ಫಲಿತಾಂಶದ ನಂತರ ಇನ್ನಷ್ಟು ಹೆಚ್ಚಾಗಲಿವೆ.

ಭಾರತದಲ್ಲಿ ಮುಸ್ಲಿಮರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ: ಬೊಮ್ಮಾಯಿ

• ಕಳಸಾ-ಬಂಡೂರಿ ಯೋಜನೆ (ಮಹದಾಯಿ) ವಿಷಯದಲ್ಲಿ ತಮ್ಮ ಕಾಳಜಿ ತುಂಬ ಇತ್ತು. ಈ ಚುನಾವಣೆಯಲ್ಲಿ ಎಲ್ಲೂ ಅದು ವ್ಯಕ್ತವಾಗುತ್ತಿಲ್ಲವಲ್ಲ?

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೂಕ್ತ ಪರವಾನಗಿ ಮೂಲಕ ನಾಲಾ ನಿರ್ಮಿಸಲಾಗಿತ್ತು. ಮುಂದೆ ಕಾಂಗ್ರೆಸ್ ಬಂದಾಗ ಆ ನಾಲಾಕ್ಕೆ ಅಡ್ಡಗೋಡೆ ನಿರ್ಮಿಸಿತು. ಟ್ರಿಬ್ಯುನಲ್ ಅಂತಿಮ ಆದೇಶ ಬಂದಾಗ ಅಧಿಸೂಚನೆ ಹೊರಡಿಸಿದ್ದೇವೆ. ಡಿಪಿಆರ್ ಮಂಜೂರು ಮಾಡಿಸಿದ್ದೇವೆ. ಈಗ ಎಂಒಎಫ್ ಕ್ಷೀಯರೆನ್ಸ್‌ಗೆ ಬಂದು ನಿಂತಿದೆ. ಗೋವಾ ಸರ್ಕಾರ ಮತ್ತೆ ತಕರಾರು ತೆಗೆದಿದ್ದು, ಕೋರಿಗೆ ಈಗಿನ ಕಾಂಗ್ರೆಸ್ ಸರ್ಕಾರ ಸರಿಯಾದ ಉತ್ತರ ನೀಡಿಲ್ಲ. ಹಾಗಾಗಿ ಯೋಜನೆ ವಿಳಂಬ ಆಗುತ್ತಿದೆ

• ಕಳೆದ ಬಾರಿಯಂತೆ ಈಗಲೂ ಮೋದಿ ಅಲೆ ಇದೆ ಅನಿಸುತ್ತಾ? ಈ ಬಾರಿ ರಾಜ್ಯದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ?

ಪ್ರಧಾನಿ ಮೋದಿ ಅವರ ಅಲೆ ಹಿಂದಿಗಿಂತ ಈಗ ಮತ್ತಷ್ಟು ಜೋರಾಗಿದೆ. ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವ ಜನತೆ ಬಿಜೆಪಿ ಪರವಾಗಿದ್ದಾರೆ. ಕಡಿಮೆ ಸೇರಿ 25 ಸ್ಥಾನಗಳನ್ನು ಗೆಲ್ಲುತ್ತೇವೆ. ಈ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ.

click me!