ಪ್ರಧಾನಿ ಮೋದಿ ಕರಿ ನಾಗರಹಾವು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ

By Kannadaprabha NewsFirst Published Apr 28, 2024, 9:28 AM IST
Highlights

2021ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದು ಗೊಳಿಸುವಂತೆ ಸಾವಿರಾರು ರೈತರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಮೋದಿ ಅದ್ಯಾವುದೂ ಮಾಡದೇ ರೈತರ ವಿರುದ್ಧ ಕರಿ ನಾಗರಹಾವಿನಂತೆ ಹಗೆ ಸಾಧಿಸುತ್ತಿದ್ದಾರೆ ಎಂದು ಕಿಡಿಕಾರಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ 

ಹೈದರಾಬಾದ್‌(ಏ.28):  ಪ್ರಧಾನಿ ನರೇಂದ್ರ ಮೋದಿ ಕರಿ ನಾಗರಹಾವಿದ್ದಂತೆ. ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕಾಯ್ದೆ ರದ್ದತಿಗೆ ಹೋರಾಟ ಮಾಡಿದ್ದ ರೈತರನ್ನು ಕಚ್ಚಲು ಮರಳಿ ಬರುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. 

ಜಹೀರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, 2021ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದು ಗೊಳಿಸುವಂತೆ ಸಾವಿರಾರು ರೈತರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಮೋದಿ ಅದ್ಯಾವುದೂ ಮಾಡದೇ ರೈತರ ವಿರುದ್ಧ ಕರಿ ನಾಗರಹಾವಿನಂತೆ ಹಗೆ ಸಾಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಪಕ್ಷದಲ್ಲಿದ್ದಾಗ ಸಿಎಂ ರೇವಂತ್‌ ರೆಡ್ಡಿ ಮೇಲೆ 25 ಪೊಲೀಸರಿಂದ ದಿನವಿಡೀ ನಿಗಾ!

2025ರ ವೇಳೆಗೆ ಮೀಸಲಾತಿಯನ್ನು ಬಿಜೆಪಿ ರದ್ದು ಮಾಡಲಿದೆ

ಮುಂದಿನ ದಿನಗಳಲ್ಲಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಿಜೆಪಿ ಯೋಜಿಸುತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಆರೋಪಿಸಿದ್ದರು. ಬಿಜೆಪಿ ತನ್ನ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ವರ್ಷವಾದ 2025 ರ ವೇಳೆಗೆ ಮೀಸಲಾತಿಯನ್ನು ರದ್ದುಗೊಳಿಸಲಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದರು. 

click me!