ಆರ್‌ಸಿಬಿಯ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗವೂ ಕೈಹಿಡಿದಿದ್ದು ಸನ್‌ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಮಾತ್ರ. 9ರಲ್ಲಿ ಕೇವಲ 2ರಲ್ಲಿ ಗೆದ್ದಿರುವ ತಂಡ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ಹಾದಿ ಮುಚ್ಚುವುದು ಖಚಿತ.
ಅಹಮದಾಬಾದ್(ಏ.28): ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿರುವ ಆರ್‌ಸಿಬಿ ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದ್ದು, ಸಂಘಟಿತ ಪ್ರದರ್ಶನ ನೀಡಿ ಮತ್ತೊಂದು ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ.
ಆರ್‌ಸಿಬಿಯ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗವೂ ಕೈಹಿಡಿದಿದ್ದು ಸನ್‌ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಮಾತ್ರ. 9ರಲ್ಲಿ ಕೇವಲ 2ರಲ್ಲಿ ಗೆದ್ದಿರುವ ತಂಡ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ಹಾದಿ ಮುಚ್ಚುವುದು ಖಚಿತ.
IPL 2024: ಲಖನೌ ಎದುರು ರಾಜಸ್ಥಾನ ರಾಯಲ್ಸ್‌ಗೆ ಭರ್ಜರಿ ಜಯ, ಪ್ಲೇ ಆಫ್ ಟಿಕೆಟ್ ಬಹುತೇಕ ಕನ್ಫರ್ಮ್
ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ವಿಲ್ ಜ್ಯಾಕ್ಸ್ ತಡವಾಗಿಯಾದರೂ ಲಯಕ್ಕೆ ಮರಳಿರುವುದು ತಂಡದ ಪ್ಲಸ್ ಪಾಯಿಂಟ್. ಇವರ ಜೊತೆ ನಾಯಕ ಫಾಫ್ ಡು ಪ್ಲೆಸಿಯೂ ಮಿಂಚಬೇಕಾದ ಅಗತ್ಯವಿದೆ. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಪವರ್ ಪ್ಲೇ ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದು, ಆ ನಂತರವೂ ಅದೇ ಲಯದಲ್ಲಿ ಬ್ಯಾಟ್ ಬೀಸಬೇಕಿದೆ.
ಅಸ್ಥಿರ ಆಟ: ಅತ್ತ ಗುಜರಾತ್ ಟೈಟಾನ್ಸ್ ಸ್ಥಿತಿ ಕೂಡಾ ಶೋಚನೀಯವಾಗಿದ್ದು, ಟೂರ್ನಿಯಲ್ಲಿ ಸತತವಾಗಿ ಎರಡು ಪಂದ್ಯ ಗೆದ್ದೇ ಇಲ್ಲ. 9ರಲ್ಲಿ 4 ಪಂದ್ಯದಲ್ಲಿ ಜಯಿಸಿರುವ ತಂಡಕ್ಕೆ ಪ್ಲೇ-ಆಫ್ ರೇಸ್‌ನಲ್ಲಿರಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಪ್ರಮುಖರಾದ ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಕಳಪೆ ಪ್ರದರ್ಶನ ನೀಡುತ್ತಿದ್ದು, ಬೌಲರ್‌ಗಳು ಮೊಚು ಕಳೆದುಕೊಂಡಿದ್ದಾರೆ. ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಮಿಂಚುತ್ತಿದ್ದರೂ, ಇತರರಿಂದ ಬೆಂಬಲ ಸಿಗದಿದ್ದರೆ ಮತ್ತೊಂದು ಸೋಲು ಕಟ್ಟಿಟ್ಟ ಬುತ್ತಿ.
ಟಿ20 ವಿಶ್ವಕಪ್ 2024, ಸೆಮಿಫೈನಲ್‌ಗೇರುವ 4 ತಂಡದ ಭವಿಷ್ಯ ನುಡಿದ ಯುವರಾಜ್!
ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ವಿಲ್ ಜ್ಯಾಕ್ಸ್, ರಜತ್ ಪಾಟೀದಾರ್, ಕ್ಯಾಮರೋನ್ ಗ್ರೀನ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಮಹಿಪಾಲ್ ಲೋಮ್ರಾರ್, ಕರ್ಣ್ ಶರ್ಮಾ, ಲಾಕಿ ಫರ್ಗ್ಯೂಸನ್. ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಗುಜರಾತ್ ಟೈಟಾನ್ಸ್:
ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ಶುಭ್‌ಮನ್ ಗಿಲ್(ನಾಯಕ), ಡೇವಿಡ್ ಮಿಲ್ಲರ್, ಅಝ್ಮತುಲ್ಲಾ ಓಮರ್‌ಝೈ, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಆರ್ ಸಾಯಿ ಕಿಶೋರ್, ನೂರ್ ಅಹಮದ್, ಮೋಹಿತ್ ಶರ್ಮಾ, ಸಂದೀಪ್ ವಾರಿಯರ್.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ