ಕೊರೊನಾಗೆ ಸದ್ಯದಲ್ಲೇ ಬರಲಿದೆ ಲಸಿಕೆ; ಹಂಚಿಕೆಗೆ ನಡೆದಿದೆ ಈ ರೀತಿ ಸಿದ್ಧತೆ

Nov 24, 2020, 4:21 PM IST

ಬೆಂಗಳೂರು (ನ. 24): ಕೋವಿಡ್ ಲಸಿಕೆ ಹಂಚಿಕೆ ಬಗ್ಗೆ ಪ್ರಧಾನಿ ಮೋದಿ 8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. 

ಮೋದಿ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಮಾತನಾಡಿದ್ದಾರೆ. ಸಿಎಂ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ.   ಕೊರೊನಾ ವಾರಿಯರ್ಸ್‌ಗೆ 2 ಕೋಟಿ ಲಸಿಕೆ ವಿತರಣೆ ಮಾಡಲಾಗುತ್ತದೆ. ಲಸಿಕೆ ವಿತರಣೆಗೆ ಜಿಲ್ಲಾ, ತಾಲ್ಲೂಕು ಹಾಗೂ ಬೂತ್ ಮಟ್ಟದಲ್ಲಿ ಸಮಿತಿ ಮಾಡಲಾಗುತ್ತದೆ. ಸ್ವಯಂ ಸೇವಕರ ನೇಮಕವನ್ನೂ ಮಾಡಲಾಗುತ್ತದೆ. ಆದ್ಯತೆ ಮೇರೆಗೆ 30 ಕೋಟಿ ಜನರಿಗೆ ಲಸಿಕೆ ಕೊಡುವ ಉದ್ದೇಶ ಇದೆ ಎಂದಿದ್ದಾರೆ. 

ಕೋವಿಡ್ ಲಸಿಕೆ ಸಂಗ್ರಹಕ್ಕೆ ಬೆಂಗಳೂರಿನಲ್ಲಿ ಹೀಗಿದೆ ವ್ಯವಸ್ಥೆ