ಬಿಗ್ ಬಾಸ್ ಕನ್ನಡ 11ರಲ್ಲಿ ಶೋಭಾ ಶೆಟ್ಟಿ ಮತ್ತು ಉಗ್ರಂ ಮಂಜು ನಡುವೆ ವಾಕ್ಸಮರ ನಡೆದಿದೆ. ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಶೋಭಾ ಅವರನ್ನು ಅನರ್ಹ ಎಂದು ಘೋಷಿಸಿದ ಮಂಜು, ಅಡುಗೆ ಮನೆ ವಿಚಾರವಾಗಿ ಚರ್ಚೆ ಮಾಡದೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ತಿಳಿಹೇಳಿಕೆ ನೀಡಿದ ಶೋಭಾ, ಮಂಜು ಅವರ ವಾದವನ್ನು ತಳ್ಳಿಹಾಕಿದರು.
ಬಿಗ್ ಬಾಸ್ ಕನ್ನಡ 11 ಮನೆಗೆ ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಅವರ ನಿಜವಾದ ಆಟ ಮೊದಲ ದಿನವೇ ಶುರುವಾಗಿದೆ. ನಾಮಿನೇಶನ್ ಪ್ರಕ್ರಿಯೆ ಮುಗಿದ ನಂತರ 51 ನೇ ದಿನ ವಾರದ ಟಾಸ್ಕ್ ಆಡಲು ಎರಡು ತಂಡಗಳನ್ನು ರಚನೆ ಮಾಡಲು ಬಿಗ್‌ಬಾಸ್ ನಿರ್ಧರಿಸಿ ಒಂದು ತಂಡಕ್ಕೆ ಮನೆಯ ಕ್ಯಾಪ್ಟನ್ ಭವ್ಯಾ ಅವರನ್ನು ನಾಯಕಿಯನ್ನಾಗಿ ನೇಮಿಸಿದರು. ಎರಡನೇ ತಂಡಕ್ಕೆ ಕ್ಯಾಪ್ಟನ್ ನೇಮಿಸಲು ಹೊಸದಾಗಿ ಮನೆಗೆ ಬಂದಿರುವ ಶೋಭಾ ಶೆಟ್ಟಿ ಮತ್ತು ರಜತ್ ಅವರಲ್ಲಿ ಅರ್ಹತೆ ಇರುವ ಒಬ್ಬರನ್ನು ಆಯ್ಕೆ ಮಾಡಬೇಕೆಂದು ಸ್ಪರ್ಧಿಗಳಿಗೆ ತಿಳಿಸಿದರು.
ಮೊದಲಿಗೆ ಉಗ್ರಂ ಮಂಜು ಅವರು ಹೋಗಿ ಶೋಭಾ ಶೆಟ್ಟಿ ಅನರ್ಹ ಮತ್ತು ರಜತ್ ಅವರು ಅರ್ಹ ಎಂದು ಕಾರಣ ನೀಡಿದರು. 50 ನೇ ದಿನ ನಡೆದ ನಾಮಿನೇಶನ್ ಪ್ರಕ್ರಿಯೆಯಲ್ಲಿ ಶೋಭಾ ಅವರ ಹೇಳಿಕೆಗಳು ರಜತ್ ಅವರ ಮೇಲೆ ಪ್ರಭಾವ ಬೀರುತ್ತಿತ್ತು. ನಿಮಗೆ ಪರಿಚಯ ಇದ್ದ, ಮನೆಯಲ್ಲಿ ಹತ್ತಿರವಾದ ಸ್ಪರ್ಧಿಗಳನ್ನು ನೀವು ಸೇವ್ ಮಾಡಿದ್ರಿ ಅಂತ ಅನ್ನಿಸುತ್ತೆ ಅಂತ ಶೋಭಾ ಅವರಿಗೆ ಮಂಜು ಹೇಳಿದ್ರು.
undefined
ಇದಾದ ನಂತರ ಅಡುಗೆ ಮನೆಯ ವಿಷ್ಯದಲ್ಲಿ ಮಾತನಾಡಿದ ಮಂಜು, ಹೊಸದಾಗಿ ಬಂದ ನಿಮಗೆ ಅಡುಗೆ ಮನೆಯ ಉಸ್ತುವಾರಿ ಕೊಟ್ಟಿರಬಹುದು. ಆದರೆ ನೀವು ಚರ್ಚೆ ಮಾಡದೆ, ಯಾರಿಗೆ ಅಡುಗೆ ಬರುತ್ತದೆ ಎಂಬುದನ್ನು ಕೇಳದೆ ನಿರ್ಧಾರಗಳನ್ನು ತೆಗೆದುಕೊಂಡಿರಿ, ಮನೆಯ ನಿಯಮಗಳ ಬಗ್ಗೆ ಅಲ್ಲಾಡಿಸಲು ಯಾರೂ ಹೋಗುವುದಿಲ್ಲ ಅದು ಶೋಭಾ ಅವರು ಮಾಡಿದರು ಎಂದರು.
ಇದಕ್ಕೆ ಸ್ಪಷ್ಟನೆ ಕೇಳಿದ ಶೋಭಾ, ಅಲ್ಲಾಡಿಸಿದ್ದು ಅಂದ್ರೆ ಏನೂ, ನಾನು ಇಲ್ಲಿ ಯಾರಿಗೂ ಈ ಕೆಲಸ ವಹಿಸಿಲ್ಲ. ಯಾವ ಡಿಪಾರ್ಟ್‌ಮೆಂಟ್ ಚೇಂಜ್ ಮಾಡಿಲ್ಲ. ಮಾಡಿದ್ರೆ ಹೇಳಿ ಎಂದು ಮನೆಯವರ ಬಳಿ ಕೇಳಿದ್ರು. ನಾನು ನಿನ್ನೆಯಿಂದ ರಜತ್ ಅವರ ಬಳಿ ನಮಗೆ ಕೊಟ್ಟಿರುವ ಕಿಚನ್ ಡಿಪಾರ್ಟ್‌ಮೆಂಟ್ ಬಗ್ಗೆ ಮಾತನಾಡಿದ್ದೇನೆ ಹೊರತು ಬೇರೆ ಏನೂ ಹೇಳಿಲ್ಲ.
ಮಧ್ಯೆ ಮಂಜು ಬಾಯಿ ಹಾಕಿದಾಗ ನಾನು ಮುಗಿಸುವವರೆಗೂ ಮಾತನಾಡಬೇಡಿ ಎಂದು ಶೋಭಾ ಖಡಕ್ ಆಗಿ ಹೇಳಿದರು. ಇದಕ್ಕೆ ಮಂಜು ಇದು ವಾದ-ವಿವಾದ ಇದೆಯಾ? ಎಂದು ಕೇಳಿದರು. ಅದಕ್ಕೆ ಮಾತನಾಡಿದ ಶೋಭಾ, ಬಿಗ್‌ಬಾಸ್ ಈ ಬಗ್ಗೆ ಮಾತನಾಡುವಂತಿಲ್ಲ ಎಂದರೆ ಖಂಡಿತಾ ನಾನು ಸೈಲೆಂಟ್ ಆಗಿ ಕುಳಿತುಕೊಳ್ಳುತ್ತೇನೆ. ನಿಮ್ಮ ಮಾತು ಕೇಳಲು ನಾನು ಬಂದಿಲ್ಲ. ಅಲ್ಲಾಡಿಸಿದ್ದಕ್ಕೆ ಅಲ್ಲಾಡಿಸಿದ್ದಕ್ಕೆ ಹೇಳ್ತೀರಲ್ಲ. ಏನು ಅಲ್ಲಾಡಿಸಿದೆ? ಎಂದು ಪ್ರಶ್ನಿಸಿದರು.
ಶೋಭಾ ಅವರೇ ಕಿಚನ್ ಡಿಪಾರ್ಟ್ಮೆಂಟ್ ಬಿಗ್‌ಬಾಸ್ ನಿಮಗೆ ಅಂತ ಕೊಟ್ಟಾಗ ಅಡುಗೆ ಯಾರು ಮಾಡಬೇಕು, ಕ್ಲೀನಿಂಗ್ ಯಾರು ಮಾಡಬೇಕು ಅಂತ ಕೊಟ್ಟಾಗ ಬೇರೆಯವರು ಯಾಕೆ ಡಿಸೈಡ್ ಮಾಡಬೇಕು ಎಂಬುದು ಮಂಜು ಕೇಳಿದರು.
ಇದಕ್ಕೆ ಅಲ್ಲೇ ಸ್ಪಷ್ಟನೆ ಕೊಟ್ಟ ಶೋಭಾ, 1 ನಿಮಿಷ ಸೈಲೆಂಟ್ ಆಗಿರಿ ಯಾರತ್ರ ಡಿಸ್ಕಸ್ ಮಾಡಿದೆ ಎಂಬುದು ನಿಮ್ಮ ಪ್ರಶ್ನೆ, ಕ್ಯಾಪ್ಟನ್ ಭವ್ಯಾ ಅವರೇ, ನಿಮ್ಮತ್ರ ಬಂದು ಯಾರು ಅಡುಗೆ ಮಾಡಬೇಕು ಎಂದು ಕೇಳಿದ್ನಾ? ಎಂದಾಗ ಭವ್ಯಾ ಇಲ್ಲ ಅಂದರು. ನಿಮ್ಮತ್ರ ಬಂದು ಕೇಳಿದ್ನಾ ಅಂತ ಶೋಭಾ ಕೇಳಿದ್ದಕ್ಕೆ ರಜತ್ ಹೌದು ಅಂದರು. ಯಾರತ್ರ ನಾನು ಚರ್ಚಿಸಬೇಕಿತ್ತು? ರಜತ್ ಅವರತ್ರ ನಾನು ಅದನ್ನೇ ಮಾಡಿದ್ದೇನೆ ಎಂದು ಶೋಭಾ ಖಡಕ್ ಆಗಿಯೇ ಹೇಳಿದ್ರು.
ಮಂಜು ಅವರೇ ನಿಮಗೆ ಕ್ಲಾರಿಟಿ ಅನ್ನೋದಿಲ್ಲ. ನಾನು ನಿಮ್ಮ ಅಭಿಪ್ರಾಯ ತೆಗೆದುಕೊಳ್ಳುತ್ತೇನೆ. ಇದು ನೀವು ಸ್ಟೋರಿ ಕ್ರಿಯೇಟ್ ಮಾಡಿರುವುದು. ಇಲ್ಲಿರುವ ಯಾರಿಗೂ ನಾನು ಯಾವುದೇ ಕೆಲಸ ವಹಿಸಿಲ್ಲ. ಇಷ್ಟೊತ್ತು ನಾನು ನೀವು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ. ಈಗ ನಾನು ಹೇಳುವುದನ್ನು ನೀವು ಕೇಳಿಸಿಕೊಳ್ಳಿ. ಬಿಗ್ಬಾಸ್ ಮಾತನಾಡಬೇಡ ಅಂದರೆ ನಾನು ಗೌರವ ಕೊಟ್ಟು ಕುಳಿತುಕೊಳ್ಳುತ್ತೇನೆ. ನಿಮಗಲ್ಲ. ಇಲ್ಲಿರುವ ಯಾರಾದ್ರೂ ಒಬ್ಬರು ನಾನು ಕೆಲಸ ವಹಿಸಿದ್ದೇನೆ ಎಂದು ಹೇಳಲಿ ಸಾಕು.
ನೀವು ಅನರ್ಹ ಎಂದು ಕೊಟ್ಟಿದ್ದಕ್ಕೆ ನಾನು ತಲೆ ಕಡೆಸಿಕೊಳ್ಳುವುದಿಲ್ಲ. ಆದರೆ ರೀಸನ್ ಸರಿಯಾಗಿ ಕೊಡಿ. ನಿಮಗೆ ಕ್ಲಾರಿಫಿಕೇಶನ್ ಅನ್ನೋದೆ ಇಲ್ಲ. ಇಷ್ಟೊತ್ತು ನಾನು ನೀವು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಎಂದರೆ ನೀವು ಕೇಳಿಸಿಕೊಳ್ಳಿ. ಅದು ನಾನು ನಿಮಗೆ ಕೊಟ್ಟಿರುವ ಗೌರವ. ನೀವು 10 ಫೋಟೋ ಇಡಿ. ನಾನು ತಲೆ ಕೆಡಿಸಿಕೊಳ್ಳಲಾರೆ. ಏಕೆಂದರೆ ನನಗೆ ಗೊತ್ತು ನನ್ನ ಕ್ಯಾಪಾಸಿಟಿ.
ಇಷ್ಟೇಲ್ಲ ಹೇಳಿದರು ಮಂಜುಗೆ ತಮ್ಮ ಸಮರ್ಥನೆಯಾಗಲಿ. ಶೋಭಾ ಮಾತಿಗೆ ಸರಿಯಾದ ಟಕ್ಕರ್ ಕೊಡಲು ಆಗಲೇ ಇಲ್ಲ. ಇಷ್ಟು ದಿನ ಮನೆ ಮಂದಿ ಮುಂದೆ ಕಿರುಚಾಡುತ್ತಿದ್ದ, ಅರಚಾಡುತ್ತಿದ್ದ ಉಗ್ರಂ ಮಂಜು ಅವರು ಶೋಭಾ ಅವರ ಮುಂದೆ ತನ್ನ ಉಗ್ರ ರೂಪ ತಾಳದೆ ಅಂಡು ಸುಟ್ಟ ಬೆಕ್ಕಿನಂತಾಗಿದ್ದಂತೂ ಸುಳ್ಳಲ್ಲ.
ಗೌತಮಿಗೆ ಚಾಟಿ ಬೀಸಿದ ಶೋಭಾ:
ಇನ್ನು ಯಾವಾಗಲೂ ಪಾಸಿಟಿವ್ ಎಂದೇ ಹೇಳಿಕೊಂಡು ತಿರುಗಾಡುತ್ತಿರುವ ಗೌತಮಿ ಅವರು ಶೋಭಾ ಶೆಟ್ಟಿ ಅವರನ್ನು ಅನರ್ಹ ಎಂದರು. ನನ್ನ ಮುಖವಾಡ ಕಳಚುತ್ತೇನೆ ಎಂದು ಹೇಳಿದ್ದೀರಿ. ಟೀಂಗೆ ಬಂದ್ರೆ ಆ ಪ್ರಯತ್ನದಲ್ಲೇ ಇರ್ತೀರಿ ಹೊರತು ನನ್ನ ಪಾಸಿಟಿವ್ ಬಗ್ಗೆ ನೋಡುವುದಿಲ್ಲ. ನನ್ನ ನೆಗೆಟಿವ್ ನೋಡುತ್ತೀರಿ ಎಂದಾದರೆ ತಂಡದ ನಾಯಕನಿಗೆ ಇರಬೇಕಾದ ಗುಣ ಅಲ್ಲ ಅನ್ನಿಸುತ್ತೆ ಎಂದರು.
ಇದಕ್ಕೆ ಉತ್ತರಿಸಿದ ಶೋಭಾ ಹಾಗ್ರಾದ್ರೆ ನೀವು ಮುಖವಾಡ ಕಳಚಿಡುತ್ತೇನೆ ಎಂದು ಭಯ ಪಡುತ್ತಿದ್ದೀರಾ? ನೀವು ಪಾಸಿಟಿವ್ ಆಗಿದ್ರೆ, ಜೆನ್ಯೂನ್ ಆಗಿದ್ರೆ ತಂಡಕ್ಕೆ ಬರೋದಿಕ್ಕೆ ನಿಮಗ್ಯಾಗೆ ಭಯ.
ಶೋಭಾ:ಅಂದ್ರೆ ಮುಖವಾಡ ಕಳುತ್ತೇನೆಂದು ಭಯಪಡುತ್ತಿದ್ದೀರಾ?
ಗೌತಮಿ:ನೂರಲ್ಲ 200 ದಿನ ಇದ್ರೂ ಅದು ಸಾಧ್ಯ ಇಲ್ಲ. ನಾನು ಇರೋದೆ ಹೀಗೆ. ನಾನೆಷ್ಟು ಪಾಸಿಟಿವ್ ಆಗಿರ್ತಿನೋ, ಪಾಸಿಟಿವ್ ವಾತಾವರಣದಲ್ಲಿ ಇರೋದಿಕ್ಕೆ ಇಷ್ಟಪಡ್ತೀನಿ.
ಶೋಭಾ: ನೀವು ಅಂತೀರಿ ಅಷ್ಟೇ ಆದ್ರೆ ನಿಮ್ಮಲ್ಲಿರೋದೆಲ್ಲ ನೆಗೆಟಿವ್. ನಾನು ಹೊರಗಡೆಯಿಂದ ನೋಡಿದನ್ನು ಹೇಳ್ತಿರೋದು. ಪಾಸಿಟಿವ್ ನಿಮಗೆ ಇಲ್ವೇ ಇಲ್ಲ ಇರೋದೆಲ್ಲ ನೆಗೆಟಿವೇ.
ಗೌತಮಿ:ಪಾಸಿಟಿವಿಟಿ ನನಗೋಸ್ಕರ ಇಟ್ಟುಕೊಂಡಿದ್ದೀನಿ. ಯಾರಿಗೋ ತೋರಿಸಬೇಕೆಂದು ಅಲ್ಲ.
ಶೋಭಾ: ಮತ್ಯಾಕೆ ಎಲ್ಲರ ಹತ್ರ ಹೋಗಿ ಪಾಸಿಟಿವಿಟಿ ಅಂತ ಹೇಳೋದ್ಯಾಕೆ.
ಗೌತಮಿ: ನಾನು ಯಾರಿಗೂ ಆ ರೀತಿ ಹೇಳಿಲ್ಲ. ನನ್ನ ಇಬ್ಬರೂ ಪ್ರೆಂಡ್ಸ್ ಗೆ ಮಾತ್ರ.
ಶೋಭಾ: ತುಂಬಾ ಜನಕ್ಕೆ ಹೇಳಿದ್ದೀರಿ ಎಪಿಸೋಡ್ ನಲ್ಲಿ ಇದೆಯಲ್ಲ.
ಗೌತಮಿ: ಅದು ಗುಡ್ ಬಿಹೇವಿಯರ್ ಹಾಗೆ ನೋಡಿದ್ರೆ,
ಶೋಭಾ: ಹಾಗಾದ್ರೆ ನೀವು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿದ್ದೀರಾ?
ಈ ಪ್ರಕ್ರಿಯೆ ಮುಗಿದ ಬಳಿಕ ಮಂಜು ಮತ್ತು ಗೌತಮಿ ಶೋಭಾ ಬಗ್ಗೆ ಮಾತನಾಡಿಕೊಂಡರು. ನಾನು ಅವರ ಟೀಂ ಹೋದ್ರೆ ಆಡೋದೆ ಇಲ್ಲ ಅಂತ ಗೌತಮಿ ಹೇಳಿದ್ರು. ಅಂತು ಇಂತೂ ಇಂದಿನ ಎಪಿಸೋಡ್ ನಲ್ಲಿ ಯಾರೆಲ್ಲ ಮೆರೆದಾಡಿದ್ದಾರೋ ಅವರಿಗೆ ಶೋಭಾ ಶೆಟ್ಟಿ ಸರಿಯಾಗಿಯೇ ಟಕ್ಕರ್ ಕೊಟ್ಟಿದ್ದಾರೆ. ಕಳೆದ ಸೀಸನ್ ನಲ್ಲಿದ್ದ ಸಂಗೀತಾ ಶೃಂಗೇರಿ ಅವರನ್ನೇ ಮೀರಿಸುವಂತ ಹಂತದಲ್ಲಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇಂತಹ ಒಂದು ಕ್ಯಾಂಡಿಡೇಟ್ ಇರಬೇಕಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.