ಕೇವಲ 21 ದಿನಗಳಲ್ಲಿ ರಾಜ್ಯದಲ್ಲಿ 3855 ಕೊರೋನಾ ಕೇಸ್ ದಾಖಲು..!

Jun 6, 2020, 10:46 AM IST

ಬೆಂಗಳೂರು(ಜೂ.06): ಕೊರೋನಾ ಹೆಮ್ಮಾರಿ ರಾಜ್ಯದಲ್ಲಿ ಈಗ ಅಸಲಿ ಆಟ ಶುರು ಮಾಡಿದೆ. ಮಾರ್ಚ್‌ 06ರಂದು ರಾಜ್ಯದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿತ್ತು. ಇದಾದ ಒಂದು ತಿಂಗಳಿಗೆ ಅಂದರೆ ಏಪ್ರಿಲ್ 06ಕ್ಕೆ ಸೋಂಕಿತರ ಸಂಖ್ಯೆ 163 ಆಗಿತ್ತು. ಇದೀಗ ಜೂನ್ 06ರ ವೇಳೆಗೆ 5 ಸಾವಿರದ ಹೊಸ್ತಿಲಿಗೆ ಬಂದು ನಿಂತಿದೆ.

ರಾಜ್ಯದಲ್ಲಿ ಒಂದು ಸಾವಿರ ಸೋಂಕಿತರನ್ನು ತಲುಪಲು ಕೊರೋನಾಗೆ 70 ದಿನಗಳು ಬೇಕಾಗಿದ್ದವು. ನಂತರದ ಕೇವಲ 21 ದಿನಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 3855 ಕೋವಿಡ್ 19 ಪ್ರಕರಣಗಳು ಪತ್ತೆಯಾಗುವ ಮೂಲಕ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

ಮೋದಿ ಸರ್ಕಾರದ ಸಾಧನೆ ಮನೆ ಮನೆಗೆ; ಇಂದಿನಿಂದ ಬಿಜೆಪಿ ‘ಮನೆ ಮನೆ ಅಭಿಯಾನ’

ಇನ್ನು ಕಳೆದ ಏಳು ದಿನಗಳಲ್ಲಿ 2054 ಮಂದಿಗೆ ಕೊರೋನಾ ಸೋಂಕು ಅಂಟಿದೆ. ಶುಕ್ರವಾರ ಒಂದೇ ದಿನ ದಾಖಲೆಯ 515 ಕೊರೋನಾ ಕೇಸ್‌ಗಳು ದಾಖಲಾಗಿದ್ದವು. ಈ ವಾರದಲ್ಲೇ ದಿನಂಪ್ರತಿ ಸೋಂಕಿತರ ಸಂಖ್ಯೆ ಸಾವಿರ ತಲುಪುತ್ತಾ ಎನ್ನುವ ಆತಂಕ ಶುರುವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.