ರಾತ್ರಿ ಗಂಡಸರು ಮಾಡಲೇಬಾರದ ಕೆಲಸಗಳಿವು! ಅತೃಪ್ತ ಆತ್ಮಗಳ ಕಾಟ ಶುರುವಾಗುತ್ತೆ!

First Published | May 1, 2024, 5:25 PM IST

ಧಾರ್ಮಿಕ ನಂಬಿಕೆಯ ಪ್ರಕಾರ, ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಕೆಲವು ವಿಷಯಗಳನ್ನು ಮಾಡಬಾರದು, ಅವುಗಳನ್ನು ಮಾಡೊದರಿಂದ ಹಾನಿಯಾಗುತ್ತದೆ. ಪುರುಷಗುವ ಸಾಧ್ಯತೆ ಇದೆ. ರಾತ್ರಿಯ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಅದರಿಂದ ಭೂತಪ್ರೇತಗಳು ಭಾಧಿಸುತ್ತವೆ ಅನ್ನೋದನ್ನು ನೋಡೋಣ. 
 

ಹಿಂದೂ ಧರ್ಮದಲ್ಲಿ, (Hindu Dharma) ಎಲ್ಲದರ ಶುಭ ಮತ್ತು ಅಶುಭ ಪರಿಣಾಮಗಳನ್ನು ಹೇಳಲಾಗಿದೆ. ಒಬ್ಬ ವ್ಯಕ್ತಿಯು ಕೆಲವು ಕೆಲಸಗಳನ್ನು ಸರಿಯಾದ ಸಮಯದಲ್ಲಿ ಮಾಡಿದರೆ, ಅವನು ಅದರ ಶುಭ ಫಲಿತಾಂಶವನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ, ಕೆಲವು ತಪ್ಪುಗಳು ಜೀವವನ್ನೇ ಹಾಳು ಮಾಡಬಹುದು. 
 

ಇಂದು ನಾವು ಜ್ಯೋತಿಷ್ಯದಲ್ಲಿ ಬರೆದಿರುವ ಆ 5 ವಿಷಯಗಳ ಬಗ್ಗೆ ನಿಮಗೆ ಹೇಳಲಿದ್ದೇವೆ, ಇದನ್ನು ಪುರುಷರು ರಾತ್ರಿಯಲ್ಲಿ ಎಂದಿಗೂ ಮಾಡಬಾರದು, ಒಂದು ವೇಳೆ ಮಾಡಿದರೆ ಅವನ ಜಾತಕದಲ್ಲಿನ ಗ್ರಹಗಳ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಅವರು ಬಯಸದಿದ್ದರೂ ಸಹ ಅವರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಷ್ಟೇ ಅಲ್ಲ, ಅತೃಪ್ತ ಆತ್ಮಗಳಿಂದ ಸಮಸ್ಯೆ ಎದುರಾಗಬಹುದು. ಹಾಗಿದ್ರೆ ರಾತ್ರಿ ಹೊತ್ತು ಏನನ್ನು ಮಾಡಬಾರದು ನೋಡೋಣ… 
 

Tap to resize

ಶಿಳ್ಳೆ ಹೊಡೆಯುವುದು
ಜ್ಯೋತಿಷ್ಯದ ಪ್ರಕಾರ, ಪುರುಷರು ರಾತ್ರಿಯಲ್ಲಿ ಶಿಳ್ಳೆ (whistle) ಹೊಡೆಯಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಗೆ ಹೆಚ್ಚುತ್ತದೆ, ಇದು ಅವರ ಆರೋಗ್ಯ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
 

ಮಲಗುವುದು
ಪುರುಷರು ಎಂದಿಗೂ ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬಾರದು (sleeping). ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಉಗುರು ಕಚ್ಚುವುದು
ಪುರುಷರು ರಾತ್ರಿಯಲ್ಲಿ ಎಂದಿಗೂ ಉಗುರುಗಳನ್ನು ಕಚ್ಚಬಾರದು (nail biting). ಸೂರ್ಯಾಸ್ತದ ನಂತರ ಉಗುರುಗಳನ್ನು ಕತ್ತರಿಸುವವರ ದುರಾದೃಷ್ಟವು ಬಲಗೊಳ್ಳುತ್ತದೆ ಎಂದು ಧರ್ಮಗ್ರಂಥಗಳು ಹೇಳುತ್ತವೆ.

ಸುಗಂಧ ದ್ರವ್ಯ ಬಳಸಬೇಡಿ
ಪುರುಷರು ರಾತ್ರಿ 12 ಗಂಟೆ ನಂತರ ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ (perfume) ಹಚ್ಚಿ ಮನೆಯಿಂದ ಹೊರಬರಬಾರದು. ಯಾಕಂದ್ರೆ ಈ ಹೊತ್ತಲ್ಲೆ ಅತೃಪ್ತ ಆತ್ಮಗಳು ಇಂತಹ ಪುರುಷರತ್ತ ಆಕರ್ಷಿತವಾಗುತ್ತವೆ. ಇದರಿಂದ ತೊಂದರೆ ತಪ್ಪಿದ್ದಲ್ಲ. 
 

ಸ್ಮಶಾನ
ಪುರುಷರು ಮುಂಜಾನೆ 2 ರಿಂದ ರಾತ್ರಿ 3 ರವರೆಗೆ ಸ್ಮಶಾದ (cemetary) ಬಳಿಗೆ ಹೋಗಲೇಬಾರದು. ಇದು ಅವರ ಮೇಲೆ ನಕಾರಾತ್ಮಕ ಶಕ್ತಿಗಳ ಪರಿಣಾಮ ಬೀರಬಹುದು.

Latest Videos

click me!