ಶಾರ್ವರಿಯನ್ನು ಮನೆ ಕೆಲಸಕ್ಕೆ ಹಚ್ಚಿಸಿದ್ದಾನೆ ಮಹೇಶ. ಇದನ್ನು ನೋಡಿ ಸೀರಿಯಲ್ ಪ್ರೇಮಿಗಳು ಏನು ಹೇಳ್ತಿದ್ದಾರೆ ನೋಡಿ...
ವಿಲನ್ ಶಾರ್ವರಿ ಮನೆಕೆಲಸದವಳಾಗಿದ್ದಾಳೆ. ಇದು ಕನಸಂತೂ ಅಲ್ಲವೇ ಅಲ್ಲ, ನಿಜವಾಗಿಯೂ ಮನೆಗೆಲಸ ಮಾಡುತ್ತಿದ್ದಾಳೆ. ಕಸ ಗುಡಿಸಿ, ನೆಲ ಒರೆಸುತ್ತಿದ್ದಾಳೆ. ಹಾಗಂತ ಅವಳಿಗೇನೂ ಬುದ್ಧಿ ಬಂದಿಲ್ಲ, ಅದು ಬರುವುದೂ ಇಲ್ಲ. ಆದರೆ ಆಕೆಯ ಬಹುದೊಡ್ಡ ರಹಸ್ಯವನ್ನು ಮನೆಯವರಿಂದ ಮುಚ್ಚಿಟ್ಟಿರೋ ಪತಿ ಮಹೇಶ್, ಪತ್ನಿಗೆ ಬುದ್ಧಿ ಕಲಿಸುತ್ತಿದ್ದಾನೆ. ಒಡವೆ, ಭರ್ಜರಿ ಸೀರೆಯುಟ್ಟು ಪಾರ್ಟಿಗೆ ಹೋಗಲು ರೆಡಿಯಾಗಿದ್ದ ಪತ್ನಿಗೆ ಅವೆಲ್ಲವನ್ನೂ ಬಿಚ್ಚಿಸಿ ಮನೆ ಕೆಲಸಕ್ಕೆ ಹಚ್ಚಿಸಿದ್ದಾನೆ. ಈಕೆ ಇಲ್ಲ ಅನ್ನುವ ಹಾಗೆಯೇ ಇಲ್ಲ. ಹಾಗೊಂದು ವೇಳೆ ಮಾಡಿಬಿಟ್ರೆ ತನ್ನ ಕೊಲೆ ರಹಸ್ಯವನ್ನು ಗಂಡ ಎಲ್ಲಿ ಮನೆಯವರ ಎದುರು ಬಾಯಿ ಬಿಡುವನೋ ಎನ್ನುವ ಭಯ ಇದೆಯಲ್ಲ! ಅದಕ್ಕಾಗಿಯೇ ಕತ್ತಿ ಮಸೆಯುತ್ತಲೇ ಮನೆ ಕೆಲಸ ಮಾಡುತ್ತಿದ್ದಾಳೆ.
ಇದನ್ನು ನೋಡಿ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಇದೆಲ್ಲಾ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಮಧ್ಯೆ ಬಂದ ಮಹೇಶ್, ಶಾರ್ವರಿ ಹರಕೆ ಹೊತ್ತಿದ್ದಾಳೆ ಎಂದಿದ್ದಾನೆ. ಅದೆಲ್ಲಾ ಏನೂ ಇಲ್ಲ ಎಂದು ಶಾರ್ವರಿ ಹೇಳಿದ್ದಾಳೆ. ಸುಮ್ಮನೇ ಮಾಡುತ್ತಿದ್ದೇನೆ, ಮಾಡೋಣ ಎನ್ನಿಸಿತು ಎಂದಿದ್ದಾಳೆ. ಮನೆಯವರಿಗೋ ಸಂದೇಹ. ನಿಮ್ಮನ್ನು ಹೀಗೆಲ್ಲಾ ನೋಡಲು ಆಗಲ್ಲ ಚಿಕ್ಕಮ್ಮ, ನೀವು ರಾಣಿ ಥರ ಇರಬೇಕು ಎಂದಿದ್ದಾನೆ ಅಭಿ. ಆದರೆ ಮಹೇಶ್ ಒಪ್ಪಬೇಕಲ್ಲ, ಇಲ್ಲಾ ಅವಳ ಇಚ್ಛೆಯಂತೆ ಮಾಡುತ್ತಿದ್ದಾಳೆ, ನೀನೇ ಹೇಳು ಎಂದಿದ್ದಾನೆ. ಬೇರೆ ವಿಧಿಯಿಲ್ಲದೇ ಶಾರ್ವರಿ ನಾನೇ ಇಚ್ಛೆಯಿಂದ ಮಾಡುತ್ತಿದ್ದೇನೆ ಎಂದಿದ್ದಾಳೆ. ಮುಂದೇನಾಗುತ್ತೆ ನೋಡಬೇಕಿದೆ.
ಮುದ್ದೆ ತಿನ್ನೋದು ಅಂದ್ರೆ ಸುಮ್ನೇನಾ? ಎಲ್ಲರಿಗೂ ಬರಲ್ಲ ಬಿಡಿ! ಪುಟ್ಟಕ್ಕ ಹೇಳಿಕೊಡ್ತಾಳೆ ನೋಡಿ...
ಆದರೆ ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ಮಹೇಶನ ಕಥೆ ಮುಗಿಯಿತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಶಾರ್ವರಿ ತನ್ನ ಸ್ವಾರ್ಥಕ್ಕಾಗಿ ಯಾವ ಮಟ್ಟಿಗೆ ಬೇಕಾದರೂ ಹೋಗುವ ಹೆಣ್ಣು. ಇಂಥ ಹೆಣ್ಣುಗಳ ಐಕಾನ್ ಈಕೆ. ಮಹೇಶ್ ಯಾವ ಸಮಯದಲ್ಲಿಯಾದರೂ ತನ್ನ ವಿರುದ್ಧ ತಿರುಗಿ ಬೀಳಬಹುದು ಎನ್ನುವುದು ಗೊತ್ತಿದೆ, ಅಷ್ಟೇ ಅಲ್ಲದೇ ಈ ರೀತಿ ತನ್ನಿಂದ ಕೆಲಸ ಮಾಡಿಸಿಕೊಳ್ತಿರೋದು ಅವಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಗಂಡ ಆದ್ರೇನಂತೆ, ಅವನ ಜೀವ ತೆಗೆಯಲೂ ಹಿಂಜರಿಯದ ಹೆಣ್ಣು ಶಾರ್ವರಿ. ಅದಕ್ಕಾಗಿಯೇ ಮಹೇಶಾ ನಿನ್ನ ಕಥೆ ಮುಗಿಯಿತು, ಇನ್ನೊಮ್ಮೆ ಹಾಸಿಗೆ ಹಿಡಿಯಲು ರೆಡಿಯಾಗು ಎಂದು ಶ್ರೀರಸ್ತು ಶುಭಮಸ್ತು ಅಭಿಮಾನಿಗಳು ಹೇಳುತ್ತಿದ್ದಾರೆ.
ಅಷ್ಟಕ್ಕೂ, ಕೊನೆಗೂ ಶಾರ್ವರಿಯ ರಹಸ್ಯ ಬಯಲಾಗಿದೆ. ಗಂಡನ ಅಣ್ಣ ಮಾಧವ್, ಆತನ ಮೊದಲ ಪತ್ನಿ ಸುಮತಿ ಮತ್ತು ಮಕ್ಕಳನ್ನು ಸರ್ವನಾಶ ಮಾಡಲು ಭೀಕರ ಆ್ಯಕ್ಸಿಡೆಂಟ್ ಮಾಡಿರುವ ವಿಷಯ ಇದೀಗ ಗಂಡ ಮಹೇಶ್ ಮುಂದೆ ಶಾರ್ವರಿ ಒಪ್ಪಿಕೊಂಡಿದ್ದಾಳೆ. ಆದರೆ ಅಚ್ಚರಿಯ ವಿಷಯ ಏನೆಂದರೆ, ಈಕೆ ಆ್ಯಕ್ಸಿಡೆಂಟ್ ಮಾಡಿಸಿದ್ದು, ಮಾಧವ್ ಪತ್ನಿ ಸುಮತಿಗೆ ಮನೆಯಲ್ಲಿ ಎಲ್ಲರೂ ರಿಸ್ಪೆಕ್ಟ್ ಕೊಡುತ್ತಾರೆ ಎನ್ನುವ ಕಾರಣಕ್ಕಂತೆ! ಅವಳ ಮುಂದೆಯೇ ತಲೆಬಾಗಿ ಎಲ್ಲರೂ ಮರ್ಯಾದೆ ಕೊಡುತ್ತಾರೆ, ನಾನೂ ಆ ಮನೆಯ ಸೊಸೆ. ಆದರೆ ನನಗೆ ಯಾರೂ ಮರ್ಯಾದೆ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿಸಿದೆ ಎಂದು ಎಷ್ಟು ಸಲೀಸಾಗಿ ಹೇಳಿದ್ದಾಳೆ! ಇದೀಗ ಅದರ ಸೇಡನ್ನು ಮಹೇಶ್ ಪತ್ನಿ ವಿರುದ್ಧ ತೀರಿಸಿಕೊಳ್ಳುತ್ತಿದ್ದಾನೆ.
ಗ್ಯಾಸ್ಟ್ರಿಕ್ ಸಮಸ್ಯೆಯೆ? ಮಾತ್ರೆ ಬೇಡ... ಕಷಾಯ ಮಾಡಿ ತೋರಿಸಿದ್ದಾರೆ ಖ್ಯಾತ ವೈದ್ಯ ಡಾ.ಕಿಶೋರ್...