ಭಾರತದ ಕಾಮಿಡಿಯನ್‌ಗಳಲ್ಲಿ ಕಪಿಲ್ ಶರ್ಮಾ ಹೆಸರು ಎಲ್ಲರಿಗೂ ಪರಿಚಿತ. ಅತ್ಯಂತ ಜನಪ್ರಿಯವಾಗಿರುವ ಕಪಿಲ್ ಶರ್ಮಾ ಒಂದು ಸಂಚಿಕೆ ವಿಧಿಸುವ ಶುಲ್ಕ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ.
ಕಾಮಿಡಿಯನ್ ಮತ್ತು ನಟ ಕಪಿಲ್ ಶರ್ಮಾ ಅವರ ಗ್ರೇಟ್ ಇಂಡಿಯನ್ ಕಪಿಲ್ ಶೋ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಶೋಗಾಗಿ ಕಪಿಲ್ ಚಾರ್ಜ್ ಮಾಡುವ ಹಣ ಎಷ್ಷು ಗೊತ್ತಾ?
26
ಕಪಿಲ್ ಶರ್ಮಾ 5 ಸಂಚಿಕೆಗೆ 26 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರಂತೆ. ಅಂದರೆ ಇದು ಪ್ರತಿ ಸಂಚಿಕೆಗೆ 5 ಕೋಟಿಗಿಂತಲೂ ಸ್ವಲ್ಪ ಹೆಚ್ಚು.
36
ಅರ್ಚನಾ ಪುರಾನ್ ಸಿಂಗ್:
ನಟಿ ಅರ್ಚನಾ ಪುರಾಣ್ ಸಿಂಗ್ ಅವರಿಗೆ ಪ್ರತಿ ಸಂಚಿಕೆಗೆ 10 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ವರದಿಗಳು ಹೇಳುತ್ತವೆ.
46
ಸುನಿಲ್ ಗ್ರೋವರ್:
ಕಾಮಿಡಿಯನ್ ಸುನಿಲ್ ಗ್ರೋವರ್ ಅವರು ಸುಮಾರು 7 ವರ್ಷಗಳ ಭಿನ್ನಾಭಿಪ್ರಾಯದ ನಂತರ ಕಪಿಲ್ ಶರ್ಮಾ ಜೊತೆ ಮತ್ತೆ ಒಂದಾಗಿದ್ದಾರೆ. ಸುನಿಲ್ ಅವರು ಪ್ರತಿ ಸಂಚಿಕೆಗೆ 25 ಲಕ್ಷ ವೇತನ ಪಡೆಯುತ್ತಾರಂತೆ.
56
ಅದೇ ಸಮಯದಲ್ಲಿ ಕೃಷ್ಣ ಅಭಿಷೇಕ್, ಕಿಕು, ಶಾರದಾ ಮತ್ತು ರಾಜು ಠಾಕೂರ್ ಅವರು ಪ್ರತಿ ಸಂಚಿಕೆಗೆ ಕ್ರಮವಾಗಿ 10 ಲಕ್ಷ ರೂ, 7 ಲಕ್ಷ ಮತ್ತು 6 ಲಕ್ಷ ರೂಗಳ ದೊಡ್ಡ ಮೊತ್ತ ಪಡೆಯುತ್ತಾರೆ.
66
ಪ್ರತಿ ಶನಿವಾರ ರಾತ್ರಿ ನೆಟ್‌ಫ್ಲಿಕ್ಸ್ 'ಗ್ರೇಟ್ ಇಂಡಿಯನ್ ಕಪಿಲ್ ಶೋ' ಕಾರ್ಯಕ್ರಮದ ಹೊಸ ಸಂಚಿಕೆಯನ್ನು ರಿಲೀಸ್ ಮಾಡುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.