110 ವರ್ಷದ ಹಿರಿಯಜ್ಜಿ ಕೊರೊನಾದಿಂದ ಗುಣಮುಖ..!

Aug 2, 2020, 11:21 AM IST

ಬೆಂಗಳೂರು (ಆ. 02): ಕೊರೊನಾ ಬಗ್ಗೆ ನೆಗೆಟಿವ್ ಸುದ್ದಿಗಳ ನಡುವೆಯೇ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಕೊರೊನಾದಿಂದ 110 ವರ್ಷದ ವೃದ್ಧೆಯೊಬ್ಬರು ಗುಣಮುಖರಾಗಿದ್ದಾರೆ. ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯಜ್ಜಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 28 ನೇ ತಾರೀಖು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಕೊರೊನಾ ನೆಗೆಟಿವ್ ಬಂದಿದ್ದು ಅಜ್ಜಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. 

ಕರುನಾಡಿನಲ್ಲಿ ಕೊರೊನಾ ಅಟ್ಟಹಾಸ ಇನ್ನೆಷ್ಟು ದಿನ..?