ಕಾಂಗ್ರೆಸ್‌ಗೆ ವಿರೋಧ ಪಕ್ಷವಾಗುವ ಅರ್ಹತೆಯೂ ಇಲ್ಲ: ವಿಶ್ವೇಶ್ವರ ಹೆಗ್ಡೆ ಕಾಗೇರಿ ವಾಗ್ದಾಳಿ

By Ravi JanekalFirst Published Apr 26, 2024, 6:11 PM IST
Highlights

ಕಾಂಗ್ರೆಸ್ ಪಕ್ಷ ಅಮಾವಾಸ್ಯೆಯ ದಿನ ರಾತ್ರಿ ಕಾಣುವ ಬಾವಿ ಇದ್ದಂತೆ. ಮತದಾನದ ದಿನ ಹಗಲಿನಲ್ಲಿ ಯಾರೂ ಬಾವಿಗೆ ಬೀಳಬೇಡಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ಕಾರವಾರ, ಉತ್ತರಕನ್ನಡ (ಏ.26): ಕಾಂಗ್ರೆಸ್ ಪಕ್ಷ ಅಮಾವಾಸ್ಯೆಯ ದಿನ ರಾತ್ರಿ ಕಾಣುವ ಬಾವಿ ಇದ್ದಂತೆ. ಮತದಾನದ ದಿನ ಹಗಲಿನಲ್ಲಿ ಯಾರೂ ಬಾವಿಗೆ ಬೀಳಬೇಡಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ಇಂದು ಶಿರಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲುವುದು ಖಚಿತವಾಗಿ ಕಾಂಗ್ರೆಸ್‌ಗೆ ಹತಾಶೆಯಾಗಿದೆ. ಗೆಲ್ಲುವುದು ಬಿಡಿ ಈ ಬಾರಿಯೂ ಅಧಿಕೃತವಾಗಿ ವಿರೋಧಪಕ್ಷವಾಗುವ ಅರ್ಹತೆಯೂ ಸಿಗುವುದಿಲ್ಲ. ಕಾಂಗ್ರೆಸ್‌ಗೆ ವಿರೋಧ ಪಕ್ಷವಾಗುವ ನೈತಿಕತೆಯೂ ಇಲ್ಲ ಎಂದು ಹರಿಹಾಯ್ದರು.

ಲೋಕಸಭಾ ಚುನಾವಣೆ 2024: ಉತ್ತರ ಕನ್ನಡ ಅಖಾಡಲ್ಲಿ ಹೊಸ ಮುಖಗಳ ತೀವ್ರ ಹಣಾಹಣಿ..!

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 10 ವರ್ಷದಲ್ಲಿ ಜನರ ವಿಶ್ವಾಸ ಗಳಿಸಿಕೊಂಡಿದ್ದಕ್ಕೆ  ಕಾಂಗ್ರೆಸ್ ಹತಾಶ ಸ್ಥಿತಿಗೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ 28 ಸ್ಥಾನದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ನೀಡುವುದಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮರ ಓಲೈಕೆ ಉದ್ದೇಶದಿಂದ ಕೂಡಿದೆ. ಅಷ್ಟೇ ಅಲ್ಲದೆ ದಲಿತರಿಗೆ ನೀಡಿದ ಮೀಸಲಾತಿಯಲ್ಲಿ ಕ್ರಿಶ್ಚಿಯನ್‌ ಸಮುದಾಯಕ್ಕೆ ನೀಡಲು ಮುಂದಾಗಿದೆ. ಕಾಂಗ್ರೆಸ್‌ನ ಈ ನಿರ್ಧಾರ ಖಂಡನೀಯ ಎಂದರು.

ಕರ್ನಾಟಕ Election 2024 Live: ಕ್ಷಣ ಕ್ಷಣದ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಪರೇಶ್ ಮೇಸ್ತ ಹತ್ಯೆಯಾದ ಸಂದರ್ಭದಲ್ಲಿ ಹೇಮಂತ ನಿಂಬಾಳ್ಕರ ಐಜಿ ಆಗಿದ್ದರು. ಆ ಸಂದರ್ಭದಲ್ಲಿ ಹತ್ಯೆ ಘಟನೆಯನ್ನು ವಿರೋಧಿಸಿ ಸಾವಿರಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಆಗ ಪ್ರತಿಭಟನೆ ನಡೆಸಿದ ಸಾವಿರಾರು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂದು ಗಂಭೀರ ಆರೋಪ ಮಾಡಿದರು.

ರಾಜೀವನಗರದಲ್ಲಿ ನಕಲಿ ಮತದಾನ ಆರೋಪ; ಉಡುಪಿ ಜಿಲ್ಲಾಧಿಕಾರಿ ಹೇಳಿದ್ದೇನು?

ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಸುಳ್ಳು ಪ್ರಕರಣಗಳನ್ನು ಬಿಜೆಪಿ ಸರ್ಕಾರದಲ್ಲಿ ವಾಪಸ್ಸು ಪಡೆದಿದ್ದೇವೆ. ಹೇಮಂತ್ ನಿಂಬಾಳ್ಕರ್ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸಿರುವ ಪರಿಣಾಂ ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಕಾರಣವಾಯಿತು. ಹೇಮಂತ ನಿಂಬಾಳ್ಕರ್ ಈ ಚುನಾವಣೆಯಲ್ಲೂ ಹಸ್ತಕ್ಷೇಪ  ಮಾಡಿರೋ ಬಗ್ಗೆ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಜನರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಅಂತಾ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿದರು.

click me!