Vikrant Rona: ರಾ ರಾ ರಕ್ಕಮ್ಮ ಹಾಡಿಗೆ ಮೈಚಳಿ ಬಿಟ್ಟು ಕುಣಿದ ಮಕ್ಕಳು

Jun 5, 2022, 6:10 PM IST

ಬಹುನಿರೀಕ್ಷಿತ ವಿಕ್ರಾಂತ್​ ರೋಣ (Vikrant Rona) ಸಿನಿಮಾ ಫುಲ್ ಹವಾ ಮಾಡುತ್ತಿದ್ದು, ಪ್ರೇಕ್ಷಕರು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.  ಅದರಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳು  ಮೊದಲು ಸಿನಿಮಾ ರಿಲೀಸ್  ಆಗಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ವಿಕ್ರಾಂತ್​ ರೋಣ ಪ್ಯಾನ್​ ಇಂಡಿಯಾ ಸಿನಿಮಾ ಸುಮಾರು 10ಕ್ಕೂ ಹೆಚ್ಚು ಭಾಷೆ ಗಳಲ್ಲಿ ರಿಲೀಸ್ ಆಗಲಿದೆ.

ರಾ ರಾ ರಕ್ಕಮ್ಮ...ಮಗಳು ಹಿತಾ ಜೊತೆ ಸಿಹಿ ಕಹಿ ಚಂದ್ರು ಸಖತ್ ಸ್ಟೆಪ್

 ವಿಕ್ರಾಂತ್ ರೋಣನ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಜೋರಾಗ್ತಿದೆ. ಅದರಲ್ಲೂ ‘ರಾ ರಾ ರಕ್ಕಮ್ಮ’ (Ra Ra Rakkamma) ಹಾಡು ಭಾರೀ ಸದ್ದು ಮಾಡುತ್ತಿದ್ದು, ಪಡ್ಡೆ ಹುಡುಗರ ನಿತ್ಯದ ಬಾಯಿಪಾಠದಂತೆ ಆಗಿದೆ. ಈ ಹಾಡಿಗೆ ಸ್ಟೆಪ್​ ಹಾಕದವರೇ ಇಲ್ಲ. ಸ್ಯಾಂಡಲ್​ವುಡ್​ ಸ್ಟಾರ್​ಗಳು ಕೂಡ ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಇದೀಗ ಚಿಕ್ಕಮಕ್ಕಳು ಸಹ ಸೊಂಟ ಬಳುಕಿಸಿದ್ದಾರೆ.