Apr 15, 2021, 11:05 AM IST
KGF-2ಗಾಗಿ ಕಳೆದ ಕೆಲವು ವರ್ಷಗಳಿಂದ ಕೂದಲು, ಗಡ್ಡ ಬಿಟ್ಟ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ್ದು ಸುಳ್ಳಲ್ಲ. ಚಿತ್ರದ ಶೂಟಿಂಗ್ ಮುಗಿದರೂ ತಮ್ಮ ಗಡ್ಡ-ಮೀಸೆಗೆ ನಿರ್ದೇಶಕ ಪ್ರಶಾಂತ ನೀಲ್ ಅಣತಿಯಂತೆ ಇನ್ನೂ ಗುಡ್ ಬೈ ಹೇಳಿಲ್ಲ ಇವರು. ಆದರೆ, ಈಗ ಇನ್ನೊಂದು ಫ್ಯಾಷನ್ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಕ್ರಿಕೆಟಿಗ ಎಂ.ಎಸ್.ಧೋನಿ ಮತ್ತು ಬಾಲಿವುಡ್ ಸ್ಟಾರ್ ನಟರಿಗೆ ಹೇರ್ ಸ್ಟೈಲಿಸ್ಟ್ ಆಗಿ ಕಾರ್ಯ ನಿರ್ವಹಿಸುವ ಆಲಿಂ ಹಕೀಂ ಅವರಿಂದ ರಾಕಿ ಬಾಯ್ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್ ಅವರ ಹೊಸ ಹೇರ್ ಸ್ಟೈಲ್ ಮತ್ತೊಂದು ಟ್ರೆಂಡ್ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ. ಯಶ್ ಹೊಸ ಹೇರ್ ಸ್ಟೈಲ್ ಹೇಗಿದೆ? ಹೇಗೆ ಕಾಣಿಸುತ್ತಿದ್ದಾರೆ. ನೋಡಿ ಈ ವೀಡಿಯೋ.