ಮುಸ್ಲಿಮರಿಗೆ ಮತದ ಹಕ್ಕು ಬೇಡ: ಚಂದ್ರಶೇಖರ ಶ್ರೀ ವಿವಾದಾತ್ಮಕ ಹೇಳಿಕೆ

By Kannadaprabha News  |  First Published Nov 27, 2024, 9:13 AM IST

ರಾಜಕಾರಣಿಗಳು ಎಲ್ಲವನ್ನೂ ವೋಟಿಗಾಗಿ ಮಾಡುತ್ತಾರೆ, ಮುಸಲ್ಮಾನರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಿದರೆ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಹೀಗಾಗಿ ಮುಸ್ಲಿಮರಿಗೆ ಮತದಾನದ ಶಕ್ತಿ ಇಲ್ಲದಂತೆ ಕಾನೂನು ಮಾಡಬೇಕು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ


ಬೆಂಗಳೂರು(ನ.27):  ರೈತರ ಭೂಮಿಯನ್ನು ವಕ್ಫ್‌ ಕಬಳಿಸುತ್ತಿದೆ ಎಂದು ದೂರಿ ಭಾರತೀಯ ಕಿಸಾನ್ ಸಂಘದಿಂದ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 'ರೈತ ಘರ್ಜನಾ ರ್‍ಯಾಲಿ' ನಡೆಯಿತು. 

ವಿವಿಧೆಡೆಯಿಂದ ಪಾಲ್ಗೊಂಡಿದ್ದ ಮಠಾಧೀಶರು ವಕ್ಫ್‌ ತೊಲಗಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಮುಸ್ಲಿಮರ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 

Tap to resize

Latest Videos

ಭಿನ್ನರಿಗೆ ಯಡಿಯೂರಪ್ಪ ವಾರ್ನಿಂಗ್‌: ಯತ್ನಾಳ್‌ ಟೀಂ ವಿರುದ್ಧ ಬಿಎಸ್‌ವೈ ಕಿಡಿ

ಪ್ರತಿಭಟನೆ ವೇಳೆ ಚಂದ್ರಶೇಖರನಾಥರು ಮಾತನಾಡಿ, 'ರಾಜಕಾರಣಿಗಳು ಎಲ್ಲವನ್ನೂ ವೋಟಿಗಾಗಿ ಮಾಡುತ್ತಾರೆ, ಮುಸಲ್ಮಾನರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಿದರೆ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಹೀಗಾಗಿ ಮುಸ್ಲಿಮರಿಗೆ ಮತದಾನದ ಶಕ್ತಿ ಇಲ್ಲದಂತೆ ಕಾನೂನು ಮಾಡಬೇಕು. ಪಾಕಿಸ್ತಾನದಲ್ಲಿ ಬೇರೆಯವರಿಗೆ (ಅನ್ಯ ಧರ್ಮೀಯರು) ಮತದಾನ ಮಾಡುವ ಅಧಿಕಾರವಿಲ್ಲ. ಅದೇ ರೀತಿ ಭಾರತದಲ್ಲೂ ಅವರಿಗೆ ಮತದಾನದ ಹ ಅವರಿಗೆ ಮತದಾನದ ಹಕ್ಕು ಇಲ್ಲದೇ ಇರುವ ರೀತಿ ಮಾಡಿದರೆ ಆಗೆ ಅವರ ಪಾಡಿಗೆ ಅವರು ಇರುತ್ತಾರೆ. ಆಗ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ' ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಲ್ಪಸಂಖ್ಯಾತರನ್ನು ಖುಷಿಪಡಿಸಲು ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುವುದು ಸರಿ ಯೇ? ಅಧಿಕಾರ ಶಾಶ್ವತವಲ್ಲ. ರೈತನ ಕಣ್ಣೀರು ಒರೆಸುವ ಕೆಲಸ ಮಾಡುವುದು ಮುಖ್ಯ. ಕಾಂಗ್ರೆಸ್‌ನವರು ರೈತರಿಗೆ ತೊಂದರೆ ಕೊಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಎಲ್ಲರೂ ಬೀದಿಗಿಳಿದು ಹೋರಾಟ ಮಾಡಿದಾಗ ಮಾತ್ರ ಎಚ್ಚರಿಕೆ ಕೊಟ್ಟಂತಾಗುತ್ತದೆ. ಹೋರಾಟ ಗಟ್ಟಿಯಾಗಿ ಮುಂದುವರೆಸದಿದ್ದರೆ ಭಂಡ ಸಿಎಂ, ಭಂಡ ಕಾಂಗ್ರೆಸ್‌ ಸರ್ಕಾರ ಎಚ್ಚೆತ್ತುಕೊಳ್ಳಲು ಸಾಧ್ಯವಾಗಲ್ಲ ಎಂದರು. 

ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಶ್ರೀ ರಮಾನಂದ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಅರಸಿಕೆರೆ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ, ಭಾರತೀಯ ಕಿಸಾನ್ ಸಂಘ-ಕರ್ನಾಟಕಪ್ರದೇಶದ ರಾಜ್ಯಾಧ್ಯಕ್ಷ ಬೀಮಸೇನ್ ಕೋಕರೆ, ಸಂಘದ ಪ್ರಾಂತ ಪ್ರಧಾನ ಕಾರ್ಯದರ್ಶಿ ಪಿ.ಎಲ್. ಸೋಮಶೇಖ‌ರ್ ಇದ್ದರು.

ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್? ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಕಲಬುರಗಿ: ಇಲ್ಲಿ ಯಾರೂ ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ, ಟೆನ್ಶನ್ ಎಂದು ಪರೋಕ್ಷವಾಗಿ ಬಿಎಸ್ ವೈ-ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದರು.

ಅನುಮತಿ ರಹಿತ ಪ್ರವಾಸ: ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ದೆಹಲಿಗೆ ದೂರು

ಕಲಬುರಗಿಯಲ್ಲಿ ನಡೆದ ವಕ್ಫ ವಿರುದ್ಧದ ಹೋರಾಟದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ವಕ್ಪ್‌ ವಿರುದ್ಧದ ಹೋರಾಟ ಅಧಿಕಾರ, ಅಂತಸ್ತು, ಹುದ್ದೆ ಮೇಲೆ ಕಣ್ಣಿಟ್ಟು ಆರಂಭಿಸಿದ್ದಲ್ಲ. ಇಲ್ಲಿ ಹೋರಾಟದಲ್ಲಿ ಭಾಗಿಯಾಗಿರೋರು ಯಾರೂ ಸ್ವಾರ್ಥಕ್ಕಾಗಿ ಬಂದಿಲ್ಲ.ವಕ್ಪ್‌ ವಿರುದ್ಧ ಜನಜಾಗೃತಿ ಹೋರಾಟ, ಪ್ರಧಾನಿ ಬೆಂಬಲಿಸಿ ಹೋರಾಟ ಮಾಡುತ್ತಿದ್ದೇವೆ.ನಾವು ಮುಖ್ಯಮಂತ್ರಿ ಆಗುವುದಕ್ಕೋಸ್ಕರ ಹೋರಾಟ ಮಾಡುತ್ತಿಲ್ಲ. ನಾವು ವಕ್ಫ್ ವಿರುದ್ಧ ಜನ ಜಾಗೃತಿ ಗಾಗಿ ಹೋರಾಟ ಮಾಡುತ್ತಿದ್ದೇವೆ ಹೊರತು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ. ಯಾವುದೇ ಕುಟುಂಬವನ್ನು ಮುಗಿಸಲು ನಾವು ಹೋರಾಟ ಮಾಡುತ್ತಿಲ್ಲ. 

ನಮ್ಮ ಟೀಂ ಇರೋರೇ ಮುಂದಿನ ಸಿಎಂ:

ಯಡಿಯೂರಪ್ಪ ಏನಾದ್ರೂ ಹೇಳಲಿ, ವಿಜಯೇಂದ್ರ ಏನಾದ್ರೂ ಹೇಳಲಿ,ಮಾಧ್ಯಮದವರು ಏನಾದ್ರೂ ಬರೆದುಕೊಳ್ಳಲಿ. ಅದಕ್ಕೆ ನಾನು ಉತ್ತರ ಕೊಡುವುದಿಲ್ಲ. ನನ್ನ ಬಗ್ಗೆ ಕಠಿಣ ಕ್ರಮ ಕೈಗೊಳ್ತೇವೆ ಅಂತಾರೆ ಯಾಕೆ ಕೈಗೊಳ್ತಿರಾ? ನಾವು ವಾಲ್ಮೀಕಿ ಹಗರಣದ ಕುರಿತು ಪಾದಯಾತ್ರೆ ಮಾಡೋಣ ಅಂದೇವು. ಅನೌನ ಅವರು ಬರೀ 14 ಪ್ಲಾಟ್ ಕಡೆ ಹೋದ್ರು. ನಮ್ಮ ಹೋರಾಟ ಈಗ ವಕ್ಪ್ ವಿರುದ್ದವೇ ಹೊರತು ಯಾರ ವಿರುದ್ದವೂ ಅಲ್ಲ. ನಾವು ಕಲಬುರಗಿ ಬಳಿಕ ಬೆಳಗಾವಿಯಲ್ಲಿ ಬೃಹತ್ ಹೋರಾಟ ಮುಗಿಸಿ ದೆಹಲಿಗೆ ಹೋಗ್ತೆವೆ. ಡಿ. 3-4 ರಂದು ದೆಹಲಿಗೆ ಹೋಗಿ ವಕ್ಪ್ ವಿರುದ್ದ ವರದಿ ನೀಡ್ತೇವೆ ಎಂದರು. ಇದೇ ವೇಳೆ ಮುಂದೆ ನಮ್ಮ ಈ ತಂಡದಲ್ಲಿದ್ದವರೇ ಸಿಎಂ ಆಗೋದು ಗ್ಯಾರೆಂಟಿ ಎನ್ನುವ ಮೂಲಕ ಮುಂದಿನ ಬಿಜೆಪಿ ಸಿಎಂ ಕುರಿತು ಹೊಸ ಚರ್ಚೆ ಹುಟ್ಟುಹಾಕಿದರು.

click me!