ವಿಶ್ವ ಚೆಸ್ ಚಾಂಪಿಯನ್‌ಶಿಪ್‌: 2ನೇ ಸುತ್ತಲಿ ಡ್ರಾ ಸಾಧಿಸಿದ ಡಿ.ಗುಕೇಶ್

By Naveen Kodase  |  First Published Nov 27, 2024, 9:42 AM IST

ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಡಿ.ಗುಕೇಶ್ 2ನೇಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಸಿಂಗಾಪುರ: ಇಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಡಿ.ಗುಕೇಶ್ 2ನೇಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಮೊದಲ ಸುತ್ತಿನಲ್ಲಿ ಸೋತು ನಿರಾಸೆ ಅನುಭವಿಸಿದ್ದ ಗುಕೇಶ್, ಮಂಗಳವಾರ ಕಪ್ಪು ಕಾಯಿಗಳೊಂದಿಗೆ ಆಡಿದರು. 

23 ನಡೆಗಳ ಬಳಿಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಉಭಯ ಆಟಗಾರರು ನಿರ್ಧರಿಸಿದರು. 2 ಸುತ್ತುಗಳ ಮುಕ್ತಾಯಕ್ಕೆ ಗುಕೇಶ್ 0.5 ಅಂಕ ಹೊಂದಿದ್ದು, ಲಿರೆನ್ 1.5 ಅಂಕ ಕಲೆಹಾಕಿದ್ದಾರೆ. ಮೊದಲು 7.5 ಅಂಕ ತಲುಪುವ ಆಟಗಾರ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ. 2ನೇ ಸುತ್ತಿನ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಗುಕೇಶ್, 'ಕಪ್ಪು ಕಾಯಿಗಳೊಂದಿಗೆ ಆಡಿ, ವಿಶ್ವ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಡ್ರಾ ಸಾಧಿಸುವುದು ಸುಲಭದ ಮಾತಲ್ಲ. ಈ ಫಲಿತಾಂಶದ ಬಗ್ಗೆ ನನಗೆ ಸಮಾಧಾನವಿದೆ' ಎಂದರು. ಪಂದ್ಯದಲ್ಲಿ ಒಟ್ಟು 14 ಸುತ್ತುಗಳು ಇರಲಿವೆ.

Tap to resize

Latest Videos

ಪ್ರೊ ಕಬಡ್ಡಿ: ಯೋಧಾಸ್‌ ವಿರುದ್ಧ ಗೆದ್ದ ತಲೈವಾಸ್‌

ನೋಯ್ಡಾ: 11ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ತಮಿಳ್‌ ತಲೈವಾಸ್‌ ಗೆಲುವಿನ ಲಯಕ್ಕೆ ಮರಳಿದೆ. ಮಂಗಳವಾರ ನಡೆದ ಯು.ಪಿ.ಯೋಧಾಸ್‌ ವಿರುದ್ಧದ ಪಂದ್ಯದಲ್ಲಿ ತಲೈವಾಸ್‌ 40-26ರ ಗೆಲುವು ಸಾಧಿಸಿತು. ಆದರೂ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದಿದೆ. ಯೋಧಾಸ್‌ 8ನೇ ಸ್ಥಾನದಲ್ಲಿದೆ. ದಿನದ 2ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು 39-39ರಲ್ಲಿ ಟೈಗೆ ತೃಪ್ತಿಪಟ್ಟವು. ಡೆಲ್ಲಿ 3ನೇ ಸ್ಥಾನಕ್ಕೇರಿದ್ದು, ಪಾಟ್ನಾ 6ನೇ ಸ್ಥಾನ ಪಡೆದಿದೆ.

ಐಪಿಎಲ್ ಹರಾಜಿನ ಬಳಿಕ ಯಾವ ತಂಡ ಬಲಿಷ್ಠ? ಇಲ್ಲಿದೆ 10 ತಂಡಗಳ ಕಂಪ್ಲೀಟ್ ಮಾಹಿತಿ

ಬೆಂಗಳೂರಿನಲ್ಲಿ ನಾಳೆಯಿಂದ 3 ದಿನ ಪರಿಕ್ರಮ ಫುಟ್ಬಾಲ್

ಬೆಂಗಳೂರು: ಪರಿಕ್ರಮ ಸ್ಲಂ ಮಕ್ಕಳಿಗೆ ಶಿಕ್ಷಣ ಹಾಗೂ ಶೋಷಿತ ಮಕ್ಕಳ ಮೇಲಿನ ಅಸಮಾನತೆ ನಿವಾರಣೆಗೆ ಕಾರ್ಯಾಚರಿಸುತ್ತಿರುವ ಕ್ಯೂಮ್ಯಾನಿಟಿ ಈ ಬಾರಿಯೂ ಫುಟ್ಬಾಲ್ ಲೀಗ್ ಆಯೋಜನೆಗೆ ಸಜ್ಜಾಗಿದೆ. 12ನೇ ಆವೃತ್ತಿ ಅಂಡ‌ರ್-16 ಲೀಗ್ ನ.28ರಿಂದ 30ರ ವರೆಗೆ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯ ಲಿದೆ. 

ಮಂಗಳವಾರ ಲೀಗ್ ಆಯೋಜನೆ ಸಂಬಂಧ ಪರಿಕ್ರಮ ಫೌಂಡೇಶನ್ ಸುದ್ದಿಗೋಷ್ಠಿ ನಡೆಸಿ, 'ಸಮಾನತೆ ಕಪ್' ಹಾಗೂ ಜೆರ್ಸಿ ಅನಾವರಣಗೊಳಿಸಿತು. ಈ ಬಾರಿ ಲೀಗ್‌ನಲ್ಲಿ ಕರ್ನಾಟಕ, ಅಸ್ಸಾಂ, ಗೋವಾ ಹಾಗೂ ರಾಜಸ್ಥಾನದ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಸುದ್ದಿಗೋಷ್ಠಿ ಯಲ್ಲಿ ಪರಿಕ್ರಮ ಫೌಂಡೇಶನ್ ಸಂಸ್ಥಾಪಕಿ ಶುಕ್ಲಾ ಬೋಸ್, ರಾಜ್ಯ ಫುಟ್ಬಾಲ್ ಸಂಸ್ಥೆ ಸಹ ಕಾರ್ಯದರ್ಶಿ ಅಸ್ಲಂ ಉಪಸ್ಥಿತರಿದ್ದರು.

ಆರ್‌ಸಿಬಿ ಫ್ಯಾನ್ಸ್‌ ಭಾವನೆಗಳ ಜೊತೆ ಆಟವಾಡಿದ ಬೆಂಗಳೂರು ಫ್ರಾಂಚೈಸಿ!

ಇಂದಿನಿಂದ ಕಿರಿಯರ ಏಷ್ಯಾಕಪ್ ಹಾಕಿ: ಭಾರತಕ್ಕೆ ಥಾಯ್ಲೆಂಡ್ ಚಾಲೆಂಜ್

ಮಸ್ಕಟ್ (ಒಮಾನ್): ಕಿರಿಯ ಪುರುಷರ ಏಷ್ಯಾಕಪ್ ಹಾಕಿ ಟೂರ್ನಿ ಬುಧವಾರದಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಭಾರತಕ್ಕೆ ಥಾಯ್ಲೆಂಡ್ ಎದುರಾಗಲಿದೆ. ಭಾರತ ತಂಡ 'ಎ' ಗುಂಪಿನಲ್ಲಿ ಕೊರಿಯಾ, ಜಪಾನ್, ಚೈನೀಸ್ ತೈಪೆ ಹಾಗೂ ಥಾಯ್ಲೆಂಡ್ ಜೊತೆ ಸ್ಥಾನ ಪಡೆದಿದೆ. 

ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಇನ್ನುಳಿದ 5 ತಂಡಗಳಾದ ಪಾಕಿಸ್ತಾನ, ಮಲೇಷ್ಯಾ, ಬಾಂಗ್ಲಾದೇಶ, ಒಮಾನ್ ಹಾಗೂ ಚೀನಾ 'ಬಿ' ಗುಂಪಿನಲ್ಲಿವೆ. ಭಾರತ ಈ ಟೂರ್ನಿಯಲ್ಲಿ 2004, 2008, 2015, 2023ರಲ್ಲಿ ಚಾಂಪಿಯನ್ ಆಗಿದೆ. ಕಳೆದ ವರ್ಷ ಫೈನಲಲ್ಲಿ ಭಾರತ ತಂಡ ಪಾಕ್ ವಿರುದ್ಧ ಗೆದ್ದು ಟ್ರೋಫಿ ಎತ್ತಿಹಿಡಿದಿತ್ತು.
 

click me!