ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಇರುವುದಿಲ್ಲ ಎಂದು ಕೇಳಿ ಖುಷಿ ಆಯ್ತು ಎಂದ ನಟಿ. ಚಿತ್ರಾಲ್ ರಿಯಾಕ್ಷನ್‌ಗೆ ನೆಟ್ಟಿಗರು ಶಾಕ್....
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಇದುವರೆಗೂ 10 ಸೀಸನ್‌ಗಳನ್ನು ಪೂರೈಸಿ 11ನೇ ಸೀಸನ್ ಅತಿ ಹೆಚ್ಚು ಟಿಆರ್‌ಪಿಯಲ್ಲಿ ನಡೆಯುತ್ತಿದೆ. ಆರಂಭದಿಂದಲೂ ಬಿಗ್ ಬಾಸ್ ರಿಯಾಲಿಟಿ ಶೋ ಜೊತೆ ನಿಂತವರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಸ್ಪರ್ಧಿಗಳಿಗೆ ಏನೂ ಸಮಸ್ಯೆ ಆಗದಂತೆ ನೋಡಿಕೊಂಡು, ನ್ಯಾಯ ಕೊಡಿಸಿ ಧ್ವನಿ ಎತ್ತುವವರು ಕಿಚ್ಚ ಸುದೀಪ್, ಹೀಗಾಗಿ ವೀಕೆಂಡ್ ಬಂದರೆ ಸಾಕು ಸುದೀಪ್‌ರನ್ನು ನೋಡಲು ಅಭಿಮಾನಿಗಳು ಕಾಯುತ್ತಾರೆ. ಆದರೆ ಸುದೀಪ್ ನೇತೃತ್ವದಲ್ಲಿ ಮೂಡಿ ಬರುವ ಕೊನೆಯ ಬಿಗ್ ಬಾಸ್ ಸೀಸನ್ ಇದು ಆಗಲಿದೆ. ಈ ವಿಚಾರದ ಬಗ್ಗೆ ಖ್ಯಾತ ನಟಿ, ಬಾಡಿ ಬಿಲ್ಡರ್ ಚಿತ್ರಾಲ್ ರಿಯಾಕ್ಟ್ ಮಾಡಿದ್ದಾರೆ.
'ಜನ ಹೇಗೆ ಆಗಿದ್ದಾರೆ ಅಂದ್ರೆ ಕರ್ನಾಟಕದಿಂದ ಒಲಿಂಪಿಕ್ಸ್‌ಗೆ ಯಾರು ಹೋಗಿದ್ದಾರೆ ಅನ್ನೋದು ಗೊತ್ತಿಲ್ಲ ಆದರೆ ಬಿಗ್ ಬಾಸ್ ಸ್ಪರ್ಧಿಗಳು ಯಾರು? ವೈಲ್ಡ್ ಕಾರ್ಡ್ ಎಂಟ್ರಿ ಯಾರು ಹೋದರು ಅದೆಲ್ಲಾ ಗೊತ್ತಿದೆ. ಯುವ ಜನತೆ ಆ ರೀತಿ ಆಗಿದ್ದಾರೆ. ನನಗೆ ಅದನ್ನು ಮೀರಿದ ಮೆಚ್ಯುರಿಟಿ ಇದೆ ಹೀಗಾಗಿ ನಾನು ಅದರ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋಗೆ ನಾನು ಹೋಗದೇ ಇರುವುದು ಒಳ್ಳೆಯದಾಯಿತ್ತು ಏಕೆಂದರೆ ಅಲ್ಲಿ ಸುಮ್ಮ ಸುಮ್ಮನೆ ಜಗಳ ಆಡುವವರು ಬೇಕು ನಾನು ರಿಯಲ್ ಆಗಿ ಇರುತ್ತೇನೆ. ನಾನು ಹೋಗದೇ ಇರುವುದೇ ಒಳ್ಳೆಯದಾಯಿತ್ತು ಯಾಕೆ ಎಂದರೆ ನನ್ನ ವ್ಯಕ್ತಿತ್ವವನ್ನು ಯಾರೋ ಎಡಿಟರ್ ಕೈಯಲ್ಲಿ ಕೊಟ್ಟು ಬಿಟ್ಟು ಗೊಂಬೆಯಂತಾಗಲು ನನಗೆ ಇಷ್ಟವಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚಿತ್ರಾಲ್ ಮಾತನಾಡಿದ್ದಾರೆ.
'ನನಗೆ ಈ ವಿಷಯ ಕೇಳಿ ತುಂಬಾ ಖುಷಿ ಆಯ್ತು ಏಕೆಂದರೆ ಇಂತಹ ಒಂದು ರಿಯಾಲಿಟಿ ಇಲ್ಲದೆ ಇರುವ ಶೋವನ್ನು ಅಂತಹ ತೂಕ ಇರುವಂತಹ ವ್ಯಕ್ತಿ ಹೋಸ್ಟ್ ಮಾಡಬಾರದು. ಸಂಪೂರ್ಣ ಶೋ ಸುದೀಪ್ ಅವಲಂಬಿಸಿದೆ. ಸುದೀಪ್ ಸರ್‌ಗಾಗಿಯೇ ಎಷ್ಟೋ ಜನ ಶೋ ನೋಡುತ್ತಿದ್ದಾರೆ. ಸುದೀಪ್ ಸರ್ ಒಳ್ಳೆ ಶೋಗಳನ್ನು ಪ್ರಚಾರ ಮಾಡಬೇಕು. ಇದು ಕೆಟ್ಟ ಶೋ ಅಂತಾ ನಾನು ಹೇಳುತ್ತಿಲ್ಲ ಆದರೆ ಮಾನಸಿಕವಾದ ಭಾವನೆಗಳ ಜೊತೆ ಆಟವಾಡುವ ಶೋ ಇದು. ಇಂತಹ ಶೋ ಅವರಿಗೆ ಬೇಡ. ಹೀಗಾಗಿ ಅವರು ಮುಂದಿನ ಸೀಜನ್‌ಗಳನ್ನು ನಡೆಸಿಕೊಡುವುದಿಲ್ಲ ಅಂತಾ ಹೇಳಿರುವುದು ಕೇಳಿ ನನಗೆ ಖುಷಿ ಆಯ್ತು' ಎಂದು ಚಿತ್ರಾ ಹೇಳಿದ್ದಾರೆ.
ನನಗೆ ಸರಿ ಅನಿಸಿದ್ದು ಮಾಡ್ತೀನಿ ಅಷ್ಟೇ; 'ಮಲ್ಲ' ಚಿತ್ರದಲ್ಲಿ ಬೋಲ್ಡ್ ಆಗಿದ್ದಕ್ಕೆವಿವಾದ