
ಬೆಂಗಳೂರು: 2025ರ ಐಪಿಎಲ್ ಹರಾಜಿನಲ್ಲಿ ಹಲವು ಯುವ ಆಟಗಾರರು ಬಿಕರಿಯಾಗಿದ್ದು, ಈ ಪೈಕಿ ಇಬ್ಬರು ಆಟಗಾರರು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ₹3.4 ಕೋಟಿಗೆ ಪಂಜಾಬ್ ತಂಡಕ್ಕೆ ಬಿಕರಿಯಾದ ದೆಹಲಿಯ ಸರ್ಕಾರಿ ಶಾಲೆ ಶಿಕ್ಷಕರ ಪುತ್ರ ಪ್ರಿಯಾನ್ಶ್ ಆರ್ಯಾ ಹಾಗೂ ₹30 ಲಕ್ಷಕ್ಕೆ ಆರ್‌ಸಿಬಿ ಪಾಲಾದ ಉತ್ತರ ಪ್ರದೇಶದ ಸ್ವಸ್ತಿಕ್ ಛಿಕಾರ, ದೇಶಿ ಕ್ರಿಕೆಟ್‌ನಲ್ಲಿ ‘ಸಿಕ್ಸರ್ ಮಷಿನ್’ಗಳೆಂದೇ ಕರೆಸಿಕೊಳ್ಳುತ್ತಿರುವ ಆಟಗಾರರು.
ಪ್ರಿಯಾನ್ಶ್ 2024ರ ಡೆಲ್ಲಿ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಕೇವಲ 10 ಇನ್ನಿಂಗ್ಸಲ್ಲಿ 608 ರನ್ ಚಚ್ಚಿದ್ದರು. ಒಂದೇ ಓವರಲ್ಲಿ 6 ಸೇರಿ ಟೂರ್ನಿಯಲ್ಲಿ 43 ಸಿಕ್ಸರ್ ಸಿಡಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು. ಐಪಿಎಲ್ ಹರಾಜು ಶುರುವಾಗುವ ಹಿಂದಿನ ದಿನ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಉ.ಪ್ರದೇಶ ವಿರುದ್ಧ 43 ಎಸೆತದಲ್ಲಿ 102 ರನ್ ಸಿಡಿಸಿದ್ದರು.
ಇನ್ನು, ಸ್ವಸ್ತಿಕ್ 2024ರ ಉ.ಪ್ರದೇಶ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ 1 ಶತಕ, 5 ಅರ್ಧಶತಕದೊಂದಿಗೆ 499 ರನ್ ಕಲೆಹಾಕಿ ಎಲ್ಲರ ಗಮನ ಸೆಳೆದಿದ್ದರು. ಈ ಇಬ್ಬರ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಇಬ್ಬರ ಮೇಲೂ ಭಾರಿ ನಿರೀಕ್ಷೆ ಇಡಲಾಗಿದೆ.
ಐಪಿಎಲ್ ಹರಾಜಿನ ಬಳಿಕ ಯಾವ ತಂಡ ಬಲಿಷ್ಠ? ಇಲ್ಲಿದೆ 10 ತಂಡಗಳ ಕಂಪ್ಲೀಟ್ ಮಾಹಿತಿ
ಕರ್ನಾಟಕದ 13 ಆಟಗಾರರು ಬಿಕರಿ
ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ 13 ಆಟಗಾರರು ವಿವಿಧ ತಂಡಗಳ ಪಾಲಾದರು. ರಾಜ್ಯದ ಆಟಗಾರರ ಪಟ್ಟಿ ಇಲ್ಲಿದೆ.
ಆಟಗಾರ ತಂಡ ಮೊತ್ತ (ಕೋಟಿ ರು.ಗಳಲ್ಲಿ)
ಕೆ.ಎಲ್.ರಾಹುಲ್ ಡೆಲ್ಲಿ 14
ಪ್ರಸಿದ್ಧ್ ಕೃಷ್ಣ ಗುಜರಾತ್ 9.5
ಅಭಿನವ್ ಮನೋಹರ್ ಹೈದ್ರಾಬಾದ್ 3.2
ದೇವದತ್ ಪಡಿಕ್ಕಲ್ ಆರ್‌ಸಿಬಿ 2
ವಿ. ವೈಶಾಖ್ ಪಂಜಾಬ್ 1.8
ಮನೀಶ್ ಪಾಂಡೆ ಕೆಕೆಆರ್ 0.75
ಕರುಣ್ ನಾಯರ್ ಡೆಲ್ಲಿ 0.5
ಮನೋಜ್ ಭಾಂಡಗೆ ಆರ್‌ಸಿಬಿ 0.3
ಶ್ರೇಯಸ್ ಗೋಪಾಲ್ ಚೆನ್ನೈ 0.3
ಮನ್ವಂತ್ ಕುಮಾರ್ ಡೆಲ್ಲಿ 0.3
ಲುವ್ನಿತ್ ಸಿಸೋಡಿಯಾ ಕೆಕೆಆರ್ 0.3
ಕೆ.ಎಲ್.ಶ್ರೀಜಿತ್ ಮುಂಬೈ 0.3
ಪ್ರವೀಣ್ ದುಬೆ ಪಂಜಾಬ್ 0.3
ಆರ್‌ಸಿಬಿ ಫ್ಯಾನ್ಸ್ ಭಾವನೆಗಳ ಜೊತೆ ಆಟವಾಡಿದ ಬೆಂಗಳೂರು ಫ್ರಾಂಚೈಸಿ!
ಆರ್‌ಸಿಬಿ ತಂಡ ಕೂಡಿಕೊಂಡ ಆಟಗಾರರಿವರು
ಆಟಗಾರ ಮೊತ್ತ
ಜೋಶ್ ಹೇಜಲ್‌ವುಡ್ 12.5
ಫಿಲ್ ಸಾಲ್ಟ್ 11.5
ಜಿತೇಶ್ ಶರ್ಮಾ 11.0
ಭುವನೇಶ್ವರ್ ಕುಮಾರ್ 10.75
ಲಿಯಾಮ್ ಲಿವಿಂಗ್‌ಸ್ಟೋನ್ 8.75
ರಸಿಖ್ ದಾರ್ 6.0
ಕೃನಾಲ್ ಪಾಂಡ್ಯ 5.75
ಟಿಮ್ ಡೇವಿಡ್ 3.0
ಜೇಕಬ್ ಬೆಥ್‌ಹೆಲ್ 2.6
ಸುಯಶ್ ಶರ್ಮಾ 2.6
ನುವಾನ್ ತುಷಾರ 1.6
ರೊಮಾರಿಯೋ ಶೆಫರ್ಡ್ 1.5
ಸ್ವಪ್ನಿಲ್ ಸಿಂಗ್ 0.5
ಮಾನೋಜ್ ಭಾಂಡಗೆ 0.3
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.