James: ಜೇಮ್ಸ್ ನೋಡಲು ಕೌಂಟರ್ ಮುಂದೆ ಮುಗಿಬಿದ್ದ ಅಭಿಮಾನಿಗಳು

Mar 17, 2022, 2:43 PM IST

ಬೆಂಗಳೂರು (ಮಾ. 17): ಇಂದು ಅಪ್ಪು ಅವರ ಹುಟ್ಟುಹಬ್ಬ, ಜೇಮ್ಸ್ ಜಾತ್ರೆ, ಥಿಯೇಟರ್‌ಗಳಲ್ಲಿ ಅಭಿಮಾನಿಗಳ ಅಭಿಮಾನ ಮುಗಿಲು ಮುಟ್ಟುವಂತಿದೆ. ಕೊಪ್ಪಳದಲ್ಲಿ ಕೌಂಟರ್‌ ಮುಂದೆ ಮುಗಿಬಿದ್ದು ಟಿಕೆಟ್ ಖರೀದಿಸಿದ್ದಾರೆ. ಬೆಂಗಳೂರಿನ ವೀರಭದ್ರೇಶ್ವರ ಥಿಯೇಟರ್‌ನಲ್ಲಿ ಲಕ್ಕಿ ಡಿಪ್ ಮೂಲಕ ಅಭಿಮಾನಿಗಳಿಗೆ ಚಿನ್ನದ ನಾಣ್ಯವನ್ನು ಗಿಫ್ಟ್ ಆಗಿ ಕೊಡಲಾಗಿದೆ. ಥಿಯೇಟರ್ ಹೊರಗೆ ಅಭಿಮಾನಿಗಳಿಗೆ ತಿಂಡಿ, ಊಟ, ಸಂಜೆಯ ಸ್ನ್ಯಾಕ್ಸ್ ವ್ಯವಸ್ಥೆ ಮಾಡಲಾಗಿದೆ.