Dec 23, 2021, 3:08 PM IST
ಧ್ರುವ ಸರ್ಜಾ-ಪ್ರೇರಣ.. ರೋಮಿಯೋ ಜ್ಯೂಲೆಟಯೆಟ್ ತರ ಲವ್ ಮಾಡಿ, ಯಶ್ ರಾಧಿಕಾರ ಹಾಗೆ ತಮ್ಮ ಪ್ರೀತಿಗೆ ಕಂಕಣ ಕಟ್ಟಿ ಈಗ ಸತಿ ಪತಿಗಳಾಗಿ ಸುಃಖ ಸಂಸಾರ ನಡೆಸುತ್ತಿರೋ ಜೋಡಿ.. ಬಾಲ್ಯದ ಗೆಳತಿಯನ್ನೇ 14 ವರ್ಷ ಪ್ರೀತಿಸಿ ಆ ಪ್ರೀತಿಗೆ ಕಿಂಚಿತ್ತು ಕಳಂಕ ಬರದೇ ಕಾಪಾಡಿಕೊಂಡು ಅದ್ಧೂರಿಯಾಗೆ ಪ್ರಾರಣಾರ ಕೈ ಹಿಡಿದಿದ್ರು ಈ ಅದ್ಧೂರಿ ಹುಡುಗ.. ಈಗ ತನ್ನ ಪತ್ಬಿಯ ಹುಟ್ಟುಹಬ್ಬವನ್ನೂ ಅಷ್ಟೇ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ.
ಈ ವಾರ ಬೆಳ್ಳಿತೆರೆ ಮೇಲೆ ಬಡವ ರಾಸ್ಕಲ್-ರೈಡರ್ ಜರ್ನಿ.!
ಧ್ರುವ ಸರ್ಜಾ ಅವರು 2019ರಲ್ಲಿ ತಮ್ಮ ಬಾಲ್ಯದ ಗೆಳತಿ ಪ್ರೇರಣ ಅವರನ್ನು ಮದುವೆಯಾಗುತ್ತಾರೆ. ಪ್ರತಿ ವರ್ಷ ತನ್ನ ಪತ್ನಿಯ ಹುಟ್ಟುಹಬ್ಬವನ್ನ ಚಂದವಾಗಿಸೋ ಧ್ರುವ, ಪ್ರತಿ ಭಾರಿಯೂ ವಿಶೇಷ ಉಡುಗೊರೆ ಕೊಟ್ಟು ತನ್ನ ಪತ್ನಿಯನ್ನ ಖುಷಿ ಪಡಿಸ್ತಾರೆ ಆಕ್ಷನ್ ಪ್ರಿನ್ಸ್. ಅದೇ ರೀತಿ ಈ ಭಾರಿ ಕೂಡ ತನ್ನ ಅರ್ಧಾಂಗಿ ಪ್ರೇರಣಾಗೆ ಧ್ರುವ ಸರ್ಜಾ ವಿಶೇಷ ಉಡುಗೊರೆಯೊಂದನ್ನ ಕೊಟ್ಟಿದ್ದಾರೆ. ಆರು ಲಕ್ಷ ಬೆಲೆ ಬಾಳೋ ನೆಕ್ಲೆಸ್ ಒಂದನ್ನ ಪ್ರೇರಣಾ ಬರ್ತ್ಡೇಗೆ ಧ್ರುವ ಗಿಫ್ಟ್ ಆಗಿ ಕೊಟ್ಟಿದ್ದಾರೆ..