ನಮ್ಮ ಬೆಂಗಳೂರಿನ ಬೆಡಗಿಯಾಗಿರುವ ಪ್ರಿಯಾಂಕಾ ಮೋಹನ್ (Priyanka Mohan)ಒಂದ್ ಕಥೆ ಹೇಳ್ಲಾ ಎನ್ನುವ ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು, ಸದ್ಯ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸದ್ದು ಮಾಡ್ತಿದ್ದಾರೆ. ಡಾನ್ ಮತ್ತು ಡಾಕ್ಟರ್ ನಂತಹ ಸಿನಿಮಾ ಮೂಲಕ ತಮಿಳು ಪ್ರೇಕ್ಷಕರ ಮನ ಗೆದ್ದ ಪ್ರಿಯಾಂಕಾ ಮೋಹನ್, ತಮ್ಮ ಸುಂದರವಾದ ತ್ವಚೆಯ ರಹಸ್ಯವನ್ನು ತಿಳಿಸಿದ್ದಾರೆ. ನಿಮಗೂ ಪ್ರಿಯಾಂಕ ಮೋಹನ್ ರಂತಹ ಸುಂದರವಾದ ತ್ವಚೆ ಬೇಕಂದ್ರೆ ನೀವಿದನ್ನ ಟ್ರೈ ಮಾಡಬಹುದು.
ಚರ್ಮದ ಸೌಂದರ್ಯಕ್ಕೆ ಕ್ಲೆನ್ಸರ್
ಪ್ರಿಯಾಂಕಾ ಮೋಹನ್ ಅವರ ಚರ್ಮದ ಆರೈಕೆಯಲ್ಲಿ ಕ್ಲೆನ್ಸರ್ ಅತ್ಯಗತ್ಯ. ಈ ಕ್ಲೆನ್ಸರ್ ಚರ್ಮದಿಂದ ಕೊಳೆ ಮತ್ತು ಧೂಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
ಸ್ಕಿನ್ ಟೋನಿಂಗ್
ಕ್ಲೆನ್ಸರ್ ಹಚ್ಚಿದ ನಂತರ ಚರ್ಮಕ್ಕೆ ಟೋನಿಂಗ್ (skin toning) ಹಚ್ಚುತ್ತಾರೆ. ಅವು ಚರ್ಮದ ಪಿಎಚ್ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ಅಲ್ಲದೆ, ಇದು ಚರ್ಮವನ್ನು ಎಲ್ಲಾ ರೀತಿಯ ಸಮಸ್ಯೆಗಳಿಂದ ದೂರವಿರಿಸುತ್ತದೆ.
ಮಾಯಿಶ್ಚರೈಸರ್
ಟೋನಿಂಗ್ ಬಳಿಕ ಪ್ರಿಯಾಂಕಾ ಮಾಯಿಶ್ಚರೈಸರ್ (Moisturiser) ಬಳಕೆ ಮಾಡ್ತಾರೆ. ಅವು ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತವೆ. ಅವರು ದಿನಕ್ಕೆ ಎರಡು ಬಾರಿ ಮಾಯಿಶ್ಚರೈಸರ್ ಅಪ್ಲೈ ಮಾಡೋದಾಗಿ ತಿಳಿಸಿದ್ದಾರೆ.
ಸನ್ ಸ್ಕ್ರೀನ್
ಮನೆಯಿಂದ ಹೊರಹೋಗುವಾಗ ಸನ್ಸ್ಕ್ರೀನ್ (Sunscreen) ಬಳಸೋದನ್ನು ಮರೆಯೋದಿಲ್ಲ ಪ್ರಿಯಾಂಕಾ ಮೋಹನ್. ಸೂರ್ಯನ ಹಾನಿಕಾರಕ ವಿಕಿರಣದಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಯಲು ಅವು ಸಹಾಯ ಮಾಡುತ್ತವೆ. ಸನ್ ಸ್ಕ್ರೀನ್ ಬಳಕೆಯಿಂದ ಚರ್ಮವು ಯಾವಾಗಲೂ ಯಂಗ್ ಆಗಿ ಕಾಣಿಸುತ್ತೆ.
Priyanka Mohan
ನ್ಯಾಚುರಲ್ ಫೇಸ್ ಪ್ಯಾಕ್
ಪ್ರಿಯಾಂಕಾ ಮೋಹನ್ ವಾರಕ್ಕೊಮ್ಮೆ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಹೆಚ್ಚಾಗಿ ಇವರು ನ್ಯಾಚುರಲ್ ಉತ್ಪನ್ನಗಳಿಂದ ತುಂಬಿದ ಫೇಸ್ ಪ್ಯಾಕ್ (natural facepack) ಮಾತ್ರ ಬಳಕೆ ಮಡ್ತಾರಂತೆ.
ಹೈಡ್ರೇಟ್ ಆಗಿರುತ್ತಾರೆ
ಪ್ರಿಯಾಂಕ ತನ್ನ ಚರ್ಮವನ್ನು ಹೈಡ್ರೇಟ್ (hydrate) ಆಗಿಡಲು ಪ್ರತಿದಿನ ಸಾಕಷ್ಟು ನೀರು ಕುಡಿಯುತ್ತಾರೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಚರ್ಮವನ್ನು ಹೆಚ್ಚು ತಾಜಾವಾಗಿ ಕಾಣುವಂತೆ ಮಾಡುತ್ತೆ.
ವಿಟಮಿನ್ ಸಿ ಹಣ್ಣುಗಳು
ಪ್ರಿಯಾಂಕಾ ಮೋಹನ್ ಅವರ ದೈನಂದಿನ ಆಹಾರದಲ್ಲಿ ಹಣ್ಣುಗಳು ಇದ್ದೆ ಇರುತ್ತೆ. ಅದರಲ್ಲೂ ವಿಶೇಷವಾಗಿ, ಚರ್ಮವನ್ನು ತುಂಬಾ ಯಂಗ್ ಆಗಿರಿಸಲು ಸಹಾಯ ಮಾಡುವ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನ ಹೆಚ್ಚಾಗಿ ಸೇವನೆ ಮಾಡ್ತಾರೆ.
ರೋಸ್ ವಾಟರ್ ಕ್ಲೆನ್ಸರ್
ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರಿಯಾಂಕಾ ಮೋಹನ್ ರೋಸ್ ವಾಟರ್ ಹೆಚ್ಚಾಗಿ ಬಳಕೆ ಮಾಡ್ತಾರೆ. ರೋಸ್ ವಾಟರ್ ಗೆ ಸ್ವಲ್ಪ ಗ್ಲಿಸರಿನ್ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಮುಖದ ಸೌಂದರ್ಯ ಮತ್ತಷ್ಟು ಹೆಚ್ಚುತ್ತೆ.