Mohini Dey Divorce News: ಎಆರ್ ರೆಹಮಾನ್ ವಿಚ್ಛೇದನದ ಬೆನ್ನಲ್ಲಿಯೇ ರೆಹಮಾನ್ ಟೀಮ್‌ನಲ್ಲಿ ಬಾಸಿಸ್ಟ್ ಆಗಿದ್ದ ಮೋಹಿನಿ ಡೇ ತನ್ನ ಪತಿ ಮಾರ್ಕ್ ಹಾರ್ಟ್ಸುಚ್‌ನಿಂದ ವಿಚ್ಛೇದನ ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ.
ಮುಂಬೈ (ನ.20): ಪ್ರಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ 29 ವರ್ಷದ ವಿವಾಹ ಮುರಿದುಬಿದ್ದ ಬೆನ್ನಲ್ಲಿಯೇ ರೆಹಮಾನ್ ಅವರ ಮ್ಯೂಸಿಕ್ ಟೀಮ್‌ನಲ್ಲಿ ಬಾಸಿಸ್ಟ್ ಆಗಿದ್ದ ಮೋಹಿನಿ ಡೇ ಕೂಡ ತನ್ನ ಗಂಡನಿಗೆ ವಿಚ್ಛೇದನ ನೀಡಿದ್ದಾರೆ. ಮ್ಯೂಸಿಕ್ ಕಂಪೋಸರ್ ಆಗಿರುವ ಮಾರ್ಕ್ ಹಾರ್ಟ್ಸುಚ್‌ನಿಂದ ವಿಚ್ಛೇದನ ಪಡೆದುಕೊಂಡಿರುವುದಾಗಿ ಮೋಹಿನಿ ಡೇ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ದಂಪತಿಗಳು ಇನ್ಸ್‌ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್‌ಅನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ತಿಳಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆ ಬೇರೆ ಆಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಎಆರ್ ರೆಹಮಾನ್ ಅವರಿಗೆ ಅವರ ಪತ್ನಿ ಸಾಯಿರಾ ಬಾನು ಡೈವೋರ್ಸ್ ನೀಡಿದ ಕೆಲವೇ ಘಂಟೆಗಳಲ್ಲಿ ಮೋಹಿನಿ ಡೇ ಈ ನಿರ್ಧಾರ ಪ್ರಕಟಿಸಿದ್ದಾರೆ.
ಇನ್ಸ್‌ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್ ಹಂಚಿಕೊಂಡಿರುವ ಮೋಹಿನಿ ಡೇ, 'ಭಾರವಾದ ಹೃದಯದಲ್ಲಿ ನಾನು ಹಾಗೂ ಮಾರ್ಕ್ ಬೇರೆ ಬೇರೆ ಆಗುತ್ತಿರುವುದನ್ನು ಘೋಷಿಸುತ್ತಿದ್ದೇವೆ. ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆ ಎನ್ನುವಂತೆ ಇದು ನಮ್ಮ ನಡುವಿನ ಪರಸ್ಪರ ಒಪ್ಪಿಗೆಯ ನಿರ್ಧಾರವಾಗಿದೆ. ನಾವಿಬ್ಬರೂ ಅದ್ಭುತ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ. ಆದರೆ, ನಾವು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ ಮತ್ತು ಪರಸ್ಪರ ಒಪ್ಪಂದದ ಮೂಲಕ ಬೇರ್ಪಡುವುದು ಮುಂದುವರೆಯಲು ಉತ್ತಮ ಮಾರ್ಗವಾಗಿದೆ ಎಂದು ನಾವಿಬ್ಬರೂ ನಿರ್ಧರಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
ವಿಚ್ಛೇದನದ ಹೊರತಾಗಿಯೂ, ಮೋಹಿನಿ ಮತ್ತು ಮಾರ್ಕ್ ತಮ್ಮ ಅಭಿಮಾನಿಗಳಿಗೆ ಮಾಮೊಗಿ ಮತ್ತು ಮೋಹಿನಿ ಡೇ ಗ್ರೂಪ್ಸ್ ಸೇರಿದಂತೆ ಯೋಜನೆಗಳಲ್ಲಿ ಸಹಕರಿಸುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಅಭಿಮಾನಿಗಳು ನಮ್ಮ ಪ್ರೈವಸಿಯನ್ನು ಗೌರವಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಬೇರೆ ನಿರ್ಧಾರಗಳು ಬರದಂತೆ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
undefined
'ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ' ಎಂದ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆದೇಶಿಸಿದ ಮಧು ಬಂಗಾರಪ್ಪ
29 ವರ್ಷದ ಮೋಹಿನಿ ಡೇ, ಕೋಲ್ಕತ್ತಾ ಮೂಲದ ಬಾಸ್ ಪ್ಲೇಯರ್ ಆಗಿದ್ದಾರೆ. ಗಾನ್ ಬಾಂಗ್ಲಾದ ವಿಂಡ್ ಆಫ್ ಚೇಂಜ್‌ನಲ್ಲಿ ಅವರ ನಿರ್ವಹಣೆಯಿಂದ ಮನೆಮಾತಾಗಿದ್ದರು. 2023ರ ಆಗಸ್ಟ್‌ನಲ್ಲಿ ಅವರ ಮೊದಲ ಆಲ್ಬಮ್ ರಿಲೀಸ್ ಆಗಿದೆ. ರೆಹಮಾನ್ ಅವರೊಂದಿಗೆ ವಿಶ್ವದಾದ್ಯಂತ 40 ಶೋಗಳನ್ನು ಮೋಹಿನಿ ಡೇ ನೀಡಿದ್ದಾರೆ.
ಸ್ಟಾರ್ಟ್‌ಅಪ್ ಕನಸಿದ್ಯಾ? ಹಾಗಿದ್ರೆ OTT ಅಲ್ಲಿ ನೀವು ಮಿಸ್ ಮಾಡದೇ ಈ ಚಿತ್ರಗಳನ್ನ ನೋಡ್ಲೇಬೇಕು
ಇದಕ್ಕೂ ಮುನ್ನ ನವೆಂಬರ್ 19 ರಂದು ಸಂಗೀತ ಮಾಂತ್ರಿಕ ಎಆರ್ ರೆಹಮಾನ್‌ಗೆ ಅವರ ಪತ್ನಿ ಸಾಯಿರಾ ಬಾನು ವಿಚ್ಛೇದನ ನೀಡಿದ್ದರು. ಮದುವೆಯಾಗಿ 29 ವರ್ಷಗಳ ಬಳಿಕ ದಾಂಪತ್ಯದಿಂದ ಬೇರ್ಪಡುವುದಾಗಿ ತಿಳಿಸಿದ್ದರು. 1995ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ಮೂರು ಮಕ್ಕಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಭಾವುಕ ಟಿಪ್ಪಣಿಯಲ್ಲಿ, ಸಾಯಿತಾ ತಮ್ಮ ನಿರ್ಧಾರಕ್ಕೆ 'ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡ' ಕಾರಣವೆಂದು ಹೇಳಿದ್ದಾರೆ.