ನಮ್ಮಲ್ಲಿ ಇದ್ದಿದ್ದು 54 ಸಾವಿರ ಎಕರೆ ಭೂಮಿ, ಆ ಪೈಕಿ 29 ಸಾವಿರ ಎಕರೆ ಕಬಳಿಕೆಯಾಗಿದೆ. ಹಾಗಿದ್ರೆ ಒಂದು ಲಕ್ಷದ ಅರವತ್ತು ಸಾವಿರ ಎಕರೆ ಎಲ್ಲಿಂದ ಬಂತು. ಅವರದ್ದು ಸತ್ಯವಾಗಿದ್ರೆ ಯಾಕೆ ವಾಪಸ್ ಪಡೆದ್ರು?. ಇದರಲ್ಲೇ ಸಿದ್ದರಾಮಯ್ಯ ಸರಕಾರ ಎಷ್ಟು ತಪ್ಪು ಮಾಡುತ್ತಿದೆ ಎಂದು ಗೊತ್ತಾಗುತ್ತಿದೆ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ
ಮಂಗಳೂರು(ನ.20): ನನ್ನ ವರದಿಯಲ್ಲೇ ವಕ್ಫ್ ಹಗರಣಗಳ ಬಗ್ಗೆ ಸಂಪೂರ್ಣ ಉಲ್ಲೇಖ ಇದೆ. ವಕ್ಫ್ ಬೋರ್ಡ್‌ಗೆ ಎಷ್ಟು ಭೂಮಿ ಇದೆ?. ಯಾರ್ಯಾರು ಭೂಮಿ ಕಬಳಿಕೆ ಮಾಡಿಕೊಂಡ್ರು?. ವಕ್ಫ್ ಬೋರ್ಡ್‌ನವರು ಯಾವ ರೀತಿ ಸಪೋರ್ಟ್ ಮಾಡಿದ್ರು?. NOC ಕೊಟ್ಟು ಯಾವ ರೀತಿ ಬೇರೆಯವರಿಗೆ ಮಾರಾಟ ಮಾಡಿದ್ರು. ನನ್ನ ವರದಿಗೂ ಸದ್ಯ ಸರಕಾರದ ಈಗಿನ ಒತ್ತುವರಿಗೂ ಸಂಪೂರ್ಣ ಭಿನ್ನತೆ ಇದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಅನ್ವರ್ ಮಾಣಿಪ್ಪಾಡಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅನ್ವರ್ ಮಾಣಿಪ್ಪಾಡಿ ಅವರು, ನಮ್ಮಲ್ಲಿ ಇದ್ದಿದ್ದು 54 ಸಾವಿರ ಎಕರೆ ಭೂಮಿ, ಆ ಪೈಕಿ 29 ಸಾವಿರ ಎಕರೆ ಕಬಳಿಕೆಯಾಗಿದೆ. ಹಾಗಿದ್ರೆ ಒಂದು ಲಕ್ಷದ ಅರವತ್ತು ಸಾವಿರ ಎಕರೆ ಎಲ್ಲಿಂದ ಬಂತು. ಅವರದ್ದು ಸತ್ಯವಾಗಿದ್ರೆ ಯಾಕೆ ವಾಪಸ್ ಪಡೆದ್ರು?. ಇದರಲ್ಲೇ ಸಿದ್ದರಾಮಯ್ಯ ಸರಕಾರ ಎಷ್ಟು ತಪ್ಪು ಮಾಡುತ್ತಿದೆ ಎಂದು ಗೊತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಸ್ಲಾಂ ಧರ್ಮಕ್ಕೂ ಭಾರತಕ್ಕೂ ಏನು ಸಂಬಂಧ? ಸಿಎಂ ಇಬ್ರಾಹಿಂ ಹೇಳಿಕೆಗ ಪ್ರತಾಪ್ ಸಿಂಹ ತಿರುಗೇಟು!
ಪ್ರಧಾನಿ ಮೋದಿ ವಕ್ಫ್ ತಿದ್ದುಪಡಿ ಮಾಡೋದಕ್ಕೆ ನನ್ನ ವರದಿಯೂ ಪ್ರೇರಣೆಯಾಗಿದೆ. ಸಿದ್ದರಾಮಯ್ಯ ಸರಕಾರದ್ದು ಮೊಂಡು ಧೈರ್ಯ. ತುಷ್ಟಿಕರಣ ಸೇಡಿನ ರಾಜಕಾರಣ ಹೊರತು ನಿಜವಾದ ನೋಟಿಸ್ ಅಲ್ಲ. ರೈತರ ಭೂಮಿ ದೇವಾಲಯದ ಭೂಮಿ ನ್ಯಾಯಯುತವಾಗಿ ವಕ್ಫ್ ಸಲ್ಲಬೇಕಿದ್ರೆ ಸಲ್ಲಲಿ. ಆದರೆ ಸರಿಯಾದ ತನಿಖೆ ನಡೆಸಿ ಇತ್ಯರ್ಥ ಮಾಡಲಿ ಎಂದು ಆಗ್ರಹಿಸಿದ್ದಾರೆ.
29 ಸಾವಿರ ಎಕರೆ ಕಬಳಿಕೆಯಾದ ಭೂಮಿಯನ್ನ ವಶಕ್ಕೆ ಪಡೆದುಕೊಳ್ಳಬೇಕಾಗುತ್ತೆ ಎಂದು ಹೇಳುವ ಮೂಲಕ ಮುಸ್ಲಿಂ ನಾಯಕರ ವಕ್ಫ್ ಭೂಮಿ ಕಬಳಿಕೆ ಬಗ್ಗೆ ಅನ್ವರ್ ಮನಪ್ಪಾಡಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಎನ್.ಎ. ಹ್ಯಾರಿಸ್ 24 ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆ. ಬೆಂಗಳೂರು ಏರ್ ಪೋರ್ಟ್ ರೋಡ್ ನಲ್ಲಿ ಕಬಳಿಕೆ ಮಾಡಿದ್ದಾರೆ. ರೆಹಮಾನ್ ಖಾನ್ ತಾನು ಮಾತ್ರವಲ್ಲದೆ ಬೇರೆಯವರಿಗೂ ಕಬಳಿಕೆ ಮಾಡಲು ಪ್ಲಾನ್ ಮಾಡಿಕೊಟ್ಟವರು ಎಂದು ಆರೋಪಿಸಿದ್ದಾರೆ.
ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ: ಸಚಿವ ಎಂಸಿ ಸುಧಾಕರ್ ಕಿಡಿ
ವಕ್ಫ್ ಆಸ್ತಿ ಕಬಳಿಕೆ ಬಗ್ಗೆ 2012-13ರಲ್ಲೇ ಅನ್ವರ್ ಮಾಣಿಪ್ಪಾಡಿ ವರದಿ ನೀಡಿದ್ದರು. ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನ್ವರ್ ಮಾಣಿಪ್ಪಾಡಿ ಅವರು ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು. ಹಲವು ಮಹತ್ವದ ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದರು. ರಾಜಕೀಯ ನಾಯಕರು, ಪ್ರಭಾವಿ ಮುಸ್ಲಿಂ ಮುಖಂಡರು ವಕ್ಫ್ ಆಸ್ತಿ ಕಬಳಿಕೆ ಮಾಡಿದ ಬಗ್ಗೆ ಉಲ್ಲೇಖಿಸಿದ್ದರು. ನಿಜವಾಗಿ ಆಸ್ತಿ ಕಬಳಿಕೆ ಮಾಡಿರುವವರ ವಿರುದ್ಧ ಕ್ರಮಕ್ಕೆ ಅನ್ವರ್ ಮಾಣಿಪ್ಪಾಡಿ ಹಾಗೂ ಪ್ರಮೋದ್ ಮುತಾಲಿಕ್ ಅವರು ಒತ್ತಾಯಿಸಿದ್ದಾರೆ.
ರೈತರ ಮೇಲೆ ಪ್ರಹಾರ ಮಾಡುವ ಬದಲು ಪ್ರಭಾವಿ ನಾಯಕರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ವಕ್ಫ್ ಭೂಮಿ ಕಬಳಿಕೆ ಮಾಡಿದ ಪ್ರಭಾವಿ ಮುಸ್ಲಿಂ ಮುಖಂಡರ ಹೆಸರುಗಳನ್ನ ಅನ್ವರ್ ಮಾಣಿಪ್ಪಾಡಿ ಬಿಚ್ಚಿಟ್ಟಿದ್ದಾರೆ.