Karnataka Election Results 2023: ಕರ್ನಾಟಕ ಅಖಾಡದಲ್ಲಿ ಜಿದ್ದಾಜಿದ್ದಿ: ಭಾರೀ ಕುತೂಹಲ ಮೂಡಿಸಿದ ಕ್ಷೇತ್ರಗಳಾವವು..?

May 12, 2023, 3:17 PM IST

ಬೆಂಗಳೂರು (ಮೇ.12): ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮತದಾನ ಪೂರ್ಣಗೊಂಡಿದ್ದು, ನಾಳೆ (ಮೇ.12) ಫಲಿತಾಂಶ ಹೊರ ಬೀಳಲಿದ್ದು, 7 ಕ್ಷೇತಗಳಲ್ಲಿ ಟೆನ್ಷನ್ ಜೋರಾಗಿದ್ದು, ಇಡೀ ರಾಜ್ಯದ ಕುತೂಹಲದ ಚಿತ್ತ ಈ 7 ಕ್ಷೇತ್ರಗಳ ಮೇಲಿದೆ. ಹೌದು! ಹೈವೋಲ್ಟೇಜ್ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಢವಢವ ಶುರುವಾಗಿದೆ. ಪುತ್ತೂರು, ಬೀಳಗಿ, ಅಥಣಿ, ಚಿಕ್ಕಮಗಳೂರು, ಹಾಸನ, ಹುಬ್ಬಳ್ಳಿ-ಧಾರವಾಡ ಹಾಗೂ ಗದಗ ಈ ಕ್ಷೇತ್ರಗಳ ಫಲಿತಾಂಶ ಕುತೂಹಲನ್ನು ಮೂಡಿಸುತ್ತಿದೆ. ಇನ್ನು ಪ್ರತಿಷ್ಠಿತ ಸಪ್ತ ಸಮರದಲ್ಲಿ ಅಧಿಕಾರ ಯಾರ ಪಾಲಾಗಿದೆ ಎನ್ನುವುದೇ ಬಹುದೊಡ್ಡ ಯಕ್ಷಪ್ರಶ್ನೆ. ಸದ್ಯ 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.