ಮಧ್ಯರಾತ್ರಿ 3 ಗಂಟೆಗೆ ಊಟ ಮಾಡುತ್ತಿದ್ದರು; ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್‌ ಬಗ್ಗೆ ರಾಮೇಶ್ವರಂ ಕೆಫೆ ಮಾಲೀಕರ ಮಾತು

First Published | May 16, 2024, 2:20 PM IST

ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ರಾಮೇಶ್ವರಂ ಕೆಫೆ ಊಟ. ಅಷ್ಟೂ ದಿನ ಏನೆಲ್ಲಾ ವೆರೈಟಿ ಇರುತ್ತಿತ್ತು......
 

ಓನ್ ಆಫ್‌ ದಿ ಬೆಸ್ಟ್‌ ಸೌತ್‌ ಇಂಡಿಯನ್ ಹೋಟೆಲ್‌ ಅನ್ನೋ ಕಿರೀಟ ಪಡೆದಿರುವ ರಾಮೇಶ್ವರಂ ಕೆಫೆ ಆಹಾರವನ್ನು ಅನಂತ್ ಅಂಬಾನಿ ಮದುವೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಂಪೂರ್ಣ ಕಾರ್ಯಕ್ರಮ ಜವಾಬ್ದಾರಿ ಹೊತ್ತಿದ್ದ ರಾಘವೇಂದ್ರ ರಾವ್ ಅವರ ಮಾತುಗಳಿದು....

ಅನಂತ್ ಅಂಬಾನಿ ಮದುವೆಯಲ್ಲಿ ಸೌತ್ ಇಂಡಿಯನ್ ಆಹಾರಕ್ಕೆ ರೆಡ್‌ ಕಾರ್ಪೆಟ್‌ ಸ್ವಾಗತ ಮಾಡಿದ್ದಾರೆ. ಅಲ್ಲಿದ್ದ ಪ್ರತಿಯೊಬ್ಬರು ಸೌತ್ ಇಂಡಿಯನ್ ಆಹಾರಕ್ಕೆ ಅಷ್ಟು ಗೌರವ ಕೊಡುತ್ತಿದ್ದರು. 

Tap to resize

ಮುಖೇಶ್ ಅಂಬಾರಿ ಅವರ ಇಡೀ ಕುಟುಂಬಕ್ಕೆ ನಮ್ಮ ಆಹಾರ ತುಂಬಾ ಇಷ್ಟವಾಗುತ್ತದೆ, ಅವರ ತಾಯಿ ಕೋಕಿಲಾ ಅವರಿಗೆ ನಮ್ಮ ಪೊಂಗಲ್ ಅಂದ್ರೆ ಅಚ್ಚು ಮೆಚ್ಚು. ನಮ್ಮ ಸೌತ್ ಇಂಡಿಯನ್ ಆಹಾರ ಏನೆಲ್ಲಾ ಇದೆ ಸಂಪೂರ್ಣವಾಗಿ ನೀಡಿದ್ವಿ. 

ಬೆಳಗ್ಗೆ ತಿಂಡಿ, ಮಧ್ಯಾಹ್ನ ತಾಲಿ ಹಾಗೂ ರಾತ್ರಿ ಊಟ. ಅವರೆಲ್ಲಾ ಲೇಟ್‌ ನೈಟ್‌ ಕೆಲಸ ಮಾಡುತ್ತಾರೆ ಹೀಗಾಗಿ ಮಲಗುವುದು ಬೆಳಗಿನಜಾವ ಈ ಲಿಸ್ಟ್‌ನಲ್ಲಿ ಅಂಬಾನಿ ಫ್ಯಾಮಿಲಿ ಮತ್ತು ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ಸೇರುತ್ತಾರೆ. 

 ರಾತ್ರಿ ಮೂರು ಗಂಟೆ ನಾಲ್ಕು ಗಂಟೆಗೆ ಊಟಕ್ಕೆ ಬರುತ್ತಿದ್ದರು ಆಗ ಬಿಸಿ ಬೇಳೆಬಾತ್, ಪೊಂಗಲ್, ರಸಂ ವಡೆ ಈ ರೀತಿ ಡಿಫರೆಂಟ್ ಆಗಿರುತ್ತಿತ್ತು. ತುಪ್ಪದ ದೋಸೆ ಖಾರ ಬಾತ್ ಕೇಸರಿ ಬಾತ್‌ನ ಸಖತ್ ಎಂಜಾಯ್ ಮಾಡುತ್ತಿದ್ದರು. 

ಮೂರು ದಿನದ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಕ್ಕೆ ಒಂದು ವಾರ ಮುಂಚಿತವಾಗಿ ಕರೆಸಿಕೊಂಡರು ನಾಲ್ಕನೇ ದಿನಕ್ಕೆ ನಮ್ಮ ಕೆಲಸ ಮುಗಿಯಬೇಕಿತ್ತು ಆದರೆ ಅನೇಕ ಸೆಲೆಬ್ರಿಟಿಗಳು ಕ್ರಿಕೆಟರ್‌ಗಳು ಇದ್ದ ಕಾರಣ 15 ದಿನ ಮುಂದೂಡಿದರು. 

ಅಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್‌ಗಳು ಇದ್ದರು. ಬಾಲಿವುಡ್ ಅಥವಾ ಹಾಲಿವುಡ್ ನಟರನ್ನು ನೆನಪು ಮಾಡಿಕೊಳ್ಳಿ ಅವರು ಅಲ್ಲಿದ್ದರು. ಅಲ್ಲಿ ಯಾರೂ ಕೌಂಟರ್‌ಗೆ ಬರುತ್ತಿರಲಿಲ್ಲ....ಅದು ಫೈನ್ ಡೈನ್‌ ಆಗಿತ್ತು ಅವರ ಟೇಬಲ್‌ಗೆ ತೆಗೆದುಕೊಂಡು ಹೋಗಿ ಕೊಡಬೇಕಿತ್ತು. 

ನನ್ನನ್ನು ಅನೇಕರಿಗೆ ಪರಿಚಯ ಮಾಡಿ ಕೊಡುತ್ತಿದ್ದರು. ಪುಟ್‌ಪಾತ್‌ನಲ್ಲಿ ಇದ್ದವರನ್ನು ಕರೆದು ಇಂತಹ ಕಡೆ ಸರ್ವ್‌ ಮಾಡಿಸುತ್ತಾರೆ ಅಂದ್ರೆ ಅದು ಪವರ್ ಆಫ್‌ ಸೌತ್‌ ಇಂಡಿಯನ್ ಫುಡ್ ಆಗಿರುತ್ತದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೀವಿ ಒಳ್ಳೆ ಸಮಯ ಸಿಕ್ಕಿತ್ತು ಎಂಜಾಯ್ ಮಾಡಿದ್ದೀವಿ. ಈ ಸಮಯದಲ್ಲಿ ನಮ್ಮ ಕೆಲಸದ ಮೌಲ್ಯತೆಯನ್ನು ತಿಳಿದುಕೊಂಡ್ವಿ. 

Latest Videos

click me!