ಪತ್ನಿ ಈ 6 ವರ್ತನೆಗಳನ್ನು ತೋರಿಸ್ತಿದ್ರೆ ಪತಿ ವಿಚ್ಚೇದನಕ್ಕೆ ಯೋಚಿಸೋದ್ರಲ್ಲಿ ತಪ್ಪಿಲ್ಲ..

First Published | May 16, 2024, 2:02 PM IST

ವೈವಾಹಿಕ ಜೀವನದಲ್ಲಿ ಪತಿ ಪತ್ನಿ ಇಬ್ಬರ ಗುಣನಡತೆಗಳೂ ಚೆನ್ನಾಗಿದ್ದರಷ್ಟೇ ಸಂಸಾರ ರಥ ಸರಾಗ. ಆದರೆ, ಪತ್ನಿ ವಿಷಪೂರಿತ ನಡೆ ತೋರುತ್ತಿದ್ದರೆ ಪತಿ ವಿಚ್ಚೇದನದ ಬಗ್ಗೆ ಯೋಚಿಸಿದರೂ ತಪ್ಪಿಲ್ಲ. ಟಾಕ್ಸಿಕ್ ಪತ್ನಿಯ 6 ಲಕ್ಷಣಗಳನ್ನು ಇಲ್ಲಿ ಕೊಡಲಾಗಿದೆ. 

ವೈವಾಹಿಕ ಜೀವನದಲ್ಲಿ ಪತಿ ಪತ್ನಿ ಇಬ್ಬರ ಗುಣನಡತೆಗಳೂ ಚೆನ್ನಾಗಿದ್ದಷ್ಟೇ ಸಂಸಾರ ರಥ ಸರಾಗ. ಆದರೆ, ಪತ್ನಿ ವಿಷಪೂರಿತ ನಡೆ ತೋರುತ್ತಿದ್ದರೆ ಪತಿ ವಿಚ್ಚೇದನದ ಬಗ್ಗೆ ಯೋಚಿಸಿದರೂ ತಪ್ಪಿಲ್ಲ. ಟಾಕ್ಸಿಕ್ ಪತ್ನಿಯ 6 ಲಕ್ಷಣಗಳನ್ನು ಇಲ್ಲಿ ಕೊಡಲಾಗಿದೆ. 

ಮಾತಿನಲ್ಲಿ ಹಿಡಿತ ಇಲ್ಲದವಳು
ಯೋಚಿಸದೆ ಮಾತಾಡುವ ಪತ್ನಿ - ಅತಿಯಾಗಿ ಚುಚ್ಚಿ ಮಾತಾಡುವುದು, ಗೌರವವಲ್ಲದ ಪದಗಳ ಬಳಕೆ ಮಾಡುವಂಥ ಪತ್ನಿ ಖಂಡಿತಾ ಸಂಬಂಧದಲ್ಲಿ ತಲೆನೋವಾಗ್ತಾಳೆ. ಮಾತುಗಳ ಶಕ್ತಿ ಅಗಾಧವಾಗಿದ್ದು, ಬೇಕಾಬಿಟ್ಟಿ ಆಡುವ ಪದಗಳು ಸಂಬಂಧದ ತೆಳುವಾದ ದಾರಗಳನ್ನು ಬಿಚ್ಚುತ್ತಾ ಸಾಗುತ್ತವೆ. 

Tap to resize

ಮನೆಯ ಜವಾಬ್ದಾರಿ ಪರಿಗಣಿಸದವಳು
ಮನೆಯ ಜವಾಬ್ದಾರಿ ತನ್ನದಲ್ಲ ಎಂಬಂತಿರುವ ಪತ್ನಿ ಕುಟುಂಬದ ಏಳ್ಗೆಗೆ ಕಾರಣವಾಗುವುದಿಲ್ಲ. ಪತ್ನಿಯಾದವಳು ಮನೆಯ ಹಾಗೂ ಮನೆಯಲ್ಲಿರುವವರ ಯೋಗಕ್ಷೇಮದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದು ಸಂಬಂಧಗಳನ್ನು ಬೆಸೆಯುತ್ತದೆ. ಜೊತೆಗೆ, ಆಕೆ ಪತಿಯನ್ನು ಸರಿ ದಾರಿಯಲ್ಲಿ ನಡೆಸುವುದು, ಹಣಕಾಸಿನ ಬಗ್ಗೆ ಯೋಚಿಸುವುದು ಕೂಡಾ ತನ್ನ ಜವಾಬ್ದಾರಿಯೆಂದು ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಆಕೆಯ ನಡೆ ಹಿಮ್ಮುಖ ಪ್ರಗತಿಗೆ ಕಾರಣವಾಗುತ್ತದೆ.

ಕುಟುಂಬದ ಶಾಂತಿ ಕೆಡಿಸುವವಳು
ಯಾವ ಮಹಿಳೆ ಕುಟುಂಬದವರೊಂದಿಗೆ ಸದಾ ಜಗಳ ಕಾಯುವುದು, ಅವರನ್ನು ಶತ್ರುಗಳಂತೆ ನೋಡುತ್ತಾಳೋ ಅದರಿಂದ ಕೌಟುಂಬಿಕ ವಾತಾವರಣ ಕೆಡುತ್ತದೆ. ಮಹಿಳೆಯ ಈ ಗುಣ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ವೈವಾಹಿಕ ಜೀವನದ ಸಂತೋಷ ಹಾಳಾಗುತ್ತದೆ. 

ಪತಿಯನ್ನು ಕೀಳಾಗಿ ಕಾಣುವುದು
ಉತ್ತಮ ಪತ್ನಿ ಪತಿಯನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತಾಳೆ, ಇಲ್ಲವೇ ಮುನ್ನಡೆವಂತೆ ಪ್ರೇರಣೆ ತುಂಬುತ್ತಾಳೆ. ಆತನಲ್ಲಿ ಸ್ಥೈರ್ಯ ತುಂಬುತ್ತಾಳೆ. ಆದರೆ, ಪತಿ ಕೆಲಸಕ್ಕೆ ಬಾರದವನು ಎಂಬಂತೆ ಆಕೆ ಪದೇ ಪದೇ ಮಾತಾಡುತ್ತಿದ್ದರೆ, ಆತನನ್ನು ಕಡೆಗಣಿಸುತ್ತಿದ್ದರೆ ಅದರಿಂದ ಆತ ಸೋಲುಗಳನ್ನೇ ಕಾಣುವ ಸಾಧ್ಯತೆ ಹೆಚ್ಚು. 

ವಿಪರೀತ ಕೋಪ
ಕೋಪ ಎಲ್ಲರಿಗೂ ಇರುತ್ತದೆ. ಆದರೆ, ಅದನ್ನು ನಿಭಾಯಿಸಿಕೊಳ್ಳಲಾಗದಂಥ ಸ್ವಭಾವ ಸಂಬಂಧದಲ್ಲಿ ತಲೆ ನೋವಾಗುತ್ತದೆ. ಇದು ಪದೇ ಪದೇ ಮನೆಯ ಶಾಂತಿ ಕೆಡಿಸುತ್ತದೆ. ಪತ್ನಿಯ ಕೋಪ ಪತಿಯ ಮನಸ್ಸನ್ನೂ ಕೆಡಿಸುತ್ತದೆ. ಇದರಿಂದ ಆತನ ಬೆಳವಣಿಗೆಯೂ ಕುಂಠಿತವಾಗುತ್ತದೆ. 

ಕುಟುಂಬವನ್ನು ಕಡೆಗಣಿಸುವುದು
ಪತ್ನಿಯು ಕುಟುಂಬವನ್ನು ಕಡೆಯಾಗಿ ಕಾಣುತ್ತಿದ್ದರೆ, ಅದು ತನ್ನ ಸ್ಟೇಟಸ್‌ಗಿಂತ ಕಡಿಮೆ ಎಂಬಂತೆ ನಡೆದುಕೊಳ್ಳುತ್ತಿದ್ದರೆ, ಕುಟುಂಬದಲ್ಲಿ ಯಾರೂ ಸರಿಯಿಲ್ಲ, ತಾನೇ ಸರಿ ಎಂಬ ಮೇಲರಿಮೆ ಅನುಭವಿಸುತ್ತಿದ್ದರೆ ಆಕೆಯ ಈ ನಡೆ ಸಂಬಂಧ ಹದಗೆಡಿಸೋದರಲ್ಲಿ ಅನುಮಾನವಿಲ್ಲ. 

Latest Videos

click me!