ಬೆಂಗಳೂರಲ್ಲಿ RCB VS CSK ಹೈವೋಲ್ಟೇಜ್ ಮ್ಯಾಚ್: ಬಿಗ್ ಮ್ಯಾಚ್ ಟಿಕೆಟ್‌ಗಾಗಿ ಫುಲ್ ಡಿಮ್ಯಾಂಡ್..!

By Suvarna News  |  First Published May 16, 2024, 2:50 PM IST

ಐಪಿಎಲ್‌ನಲ್ಲಿ RCB-CSK ಮ್ಯಾಚ್ ಅಂದ್ರೆ, ಇಂಡಿಯಾ-ಪಾಕಿಸ್ತಾನ ಮ್ಯಾಚ್ ಇದ್ದಂತೆ ಅಂದ್ರು ತಪ್ಪಿಲ್ಲ. ತಮ್ಮ ತಂಡ ಕಪ್ ಗೆಲ್ಲದಿದ್ರು ಪರ್ವಾಗಿಲ್ಲ, ಈ ಪಂದ್ಯ ಗೆಲ್ಲಲೇಬೇಕು ಅಂತ ಎರಡೂ ತಂಡಗಳ ಅಭಿಮಾನಿಗಳು ಪ್ರಾರ್ಥಿಸ್ತಾರೆ. ಈ ಬಾರಿಯ IPLನಲ್ಲಿ ಎರಡು ತಂಡಗಳು ಬಿಗ್‌ಫೈಟ್‌ಗೆ ರೆಡಿಯಾಗಿದ್ದು, ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ನೀಡಲು ಎದುರು ನೋಡ್ತಿವೆ.


ಬೆಂಗಳೂರು(ಮೇ.16): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಡು ಆರ್ ಮ್ಯಾಚ್‌ಗೆ ಕ್ಷಣಗಣನೆ ಶುರುವಾಗಿದೆ. ಮೇ 18ರಂದು ಬೆಂಗಳೂರಿನಲ್ಲಿ ಮಹಾಯುದ್ಧ ನಡೆಯಲಿದೆ. ಮತ್ತೊಂದೆಡೆ ಧೋನಿಗೆ ಬೆಂಗಳೂರಿನಲ್ಲಿ ಇದೇ ಲಾಸ್ಟ್ ಮ್ಯಾಚ್. ಇದ್ರಿಂದ ಫ್ಯಾನ್ಸ್ ಹೇಗಾದ್ರು ಮಾಡಿ ಈ  ಪಂದ್ಯವನ್ನ ಸ್ಟೇಡಿಯಂನಲ್ಲೇ ನೋಡ್ಬೇಕು ಅಂತ ಫಿಕ್ಸ್ ಆಗಿದ್ದಾರೆ. ಈ ಬಿಗ್ ಮ್ಯಾಚ್‌ನ ಟಿಕೆಟ್‌ಗಾಗಿ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. 

ಮೇ 18ರಂದು ಬೆಂಗಳೂರಿನಲ್ಲಿ ಮಹಾಯುದ್ಧ..!

Tap to resize

Latest Videos

ಐಪಿಎಲ್‌ನಲ್ಲಿ RCB-CSK ಮ್ಯಾಚ್ ಅಂದ್ರೆ, ಇಂಡಿಯಾ-ಪಾಕಿಸ್ತಾನ ಮ್ಯಾಚ್ ಇದ್ದಂತೆ ಅಂದ್ರು ತಪ್ಪಿಲ್ಲ. ತಮ್ಮ ತಂಡ ಕಪ್ ಗೆಲ್ಲದಿದ್ರು ಪರ್ವಾಗಿಲ್ಲ, ಈ ಪಂದ್ಯ ಗೆಲ್ಲಲೇಬೇಕು ಅಂತ ಎರಡೂ ತಂಡಗಳ ಅಭಿಮಾನಿಗಳು ಪ್ರಾರ್ಥಿಸ್ತಾರೆ. ಈ ಬಾರಿಯ IPLನಲ್ಲಿ ಎರಡು ತಂಡಗಳು ಬಿಗ್‌ಫೈಟ್‌ಗೆ ರೆಡಿಯಾಗಿದ್ದು, ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ನೀಡಲು ಎದುರು ನೋಡ್ತಿವೆ. ಈ ಹೈವೋಲ್ಟೇಜ್ ಮ್ಯಾಚ್ ನೊಡೋದಕ್ಕಾಗಿ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. 

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ ಕೇವಲ 1 ಅಭ್ಯಾಸ ಪಂದ್ಯ?

ಲೀಗ್‌ನಲ್ಲಿ 2ನೇ ಬಾರಿ ಎರಡೂ ತಂಡಗಳು ಮುಖಾಮುಖಿಯಾಗ್ತಿವೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸಿಎಸ್‌ಕೆ  6 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಈಗ ಎರಡನೇ ಪಂದ್ಯದಲ್ಲೂ ಗೆಲುವಿನ ಬಾವುಟ ಹಾರಿಸೋ ಪ್ಲಾನ್ನಲ್ಲಿದೆ. ಮತ್ತೊಂದೆಡೆ RCB ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಹಾಕಿದೆ. 

ಈ ಸೂಪರ್ ಶನಿವಾರದ ಮ್ಯಾಚ್‌ ಟಿಕೆಟ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆನ್ಲೈನ್ನಲ್ಲಿ ಟಿಕೆಟ್‌ಗಳು ಹಾಟ್‌ಕೇಕ್‌ನಂತೆ ಸೋಲ್ಡ್ ಔಟ್ ಆಗಿವೆ. ಧೋನಿಗೆ ಆಟಗಾರನಾಗಿ ಇದೇ ಲಾಸ್ಟ್ IPL ಅನ್ನೋ ಮಾತುಗಳು ಕೇಳಿಬರ್ತಿವೆ. ಒಂದು ವೇಳೆ CSK ಸೋತ್ರೆ, ಧೋನಿಗೆ ಇದೇ  ಲಾಸ್ಟ್ ಮ್ಯಾಚ್ ಆಗಲಿದೆ. ಇದ್ರಿಂದ ಅಭಿಮಾನಿಗಳು ಟಿಕೆಟ್‌ಗಾಗಿ ಪರದಾಡ್ತಿದ್ದಾರೆ. ಚೆನ್ನೈನಿಂದ ಬೆಂಗಳೂರು ಕಡೆ ದಂಡೆತ್ತಿ ಬರ್ತಿದ್ದಾರೆ. 2,500 ಬೆಲೆಯ ಟಿಕೆಟ್ 10 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗ್ತಿವೆ. 

ಧೋನಿ VS ವಿರಾಟ್ ಕೊಹ್ಲಿ ಮ್ಯಾಚ್..! 

ಯೆಸ್, ಈ ಮ್ಯಾಚ್‌ನ ಮೇನ್ ಅಟ್ರ್ಯಾಕ್ಷನ್ ಅಂದ್ರೆ ಅದು ವಿರಾಟ್ ಕೊಹ್ಲಿ ಮತ್ತು ಎಂ.ಎಸ್ ಧೋನಿ. ಇದ್ರಿಂದ ಇದು RCB ವರ್ಸಸ್ CSK ಮ್ಯಾಚ್ ಅಷ್ಟೇ ಅಲ್ಲ, ಧೋನಿ ವರ್ಸಸ್ ಕೊಹ್ಲಿ ಕಾದಾಟವಾಗಿದೆ. ಯಾಕಂದ್ರೆ, CSK ವಿರುದ್ಧ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ರೆ, ಧೋನಿ RCB ವಿರುದ್ಧ ಸೂಪರ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 

IPL 2024 ರಾಜಸ್ಥಾನ ರಾಯಲ್ಸ್‌ಗೆ ಸತತ 4ನೇ ಸೋಲು

ಡೇವಿಡ್ ವಾರ್ನರ್ ನಂತರ RCB ವಿರುದ್ಧ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಧೋನಿ ಹೆಸರಿನಲ್ಲಿದೆ. ಈವರೆಗೂ ಧೋನಿ ಬೆಂಗಳೂರು ಟೀಮ್ ವಿರುದ್ಧ 32 ಇನ್ನಿಂಗ್ಸ್‌ಗಳಿಂದ 141ರ ಸ್ಟ್ರೈಕ್ರೇಟ್ನಲ್ಲಿ 849 ರನ್ ಬಾರಿಸಿದ್ದಾರೆ. ಅಲ್ಲದೇ, 46 ಸಿಕ್ಸ್ ಸಿಡಿಸಿ, RCB ವಿರುದ್ಧ ಅತಿಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ CSK ವಿರುದ್ಧ 9 ಅರ್ಧಶತಕ ದಾಖಲಿಸಿದ್ದಾರೆ. ಅಲ್ಲದೇ, 1,006 ರನ್ ಬಾರಿಸೋ ಮೂಲಕ ಚೆನ್ನೈ ವಿರುದ್ಧದ ಹೈಯೆಸ್ಟ್ ರನ್ ಕಲೆಹಾಕಿದ ಎರಡನೇ ಬ್ಯಾಟರ್‌ ಅನ್ನೊ ದಾಖಲೆ ಬರೆದಿದ್ದಾರೆ. 

ಧೋನಿ ಅಬ್ಬರಿಸ್ಬೇಕು, RCB ಗೆಲ್ಬೇಕು..!

ಚೆನ್ನೈ ವಿರುದ್ಧ RCB ಗೆಲ್ಬೇಕು ಅಂತಿದ್ರು, ಆರ್ಸಿಬಿಗೆ ಸಪೋರ್ಟ್ ಮಾಡೋ ಧೋನಿ ಫ್ಯಾನ್ಸ್ ಧೋನಿಯನ್ನ ಬಿಟ್ಟುಕೊಡೋಕೆ ರೆಡಿ ಇಲ್ಲ. ಧೋನಿ ಅಬ್ಬರಿಸ್ಬೇಕು, ಜೊತೆಗೆ ನಮ್ಮ ತಂಡವೂ ಗೆಲ್ಲಬೇಕು ಅನ್ನೋದು ಅವರ ಆಸೆಯಾಗಿದೆ. 

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!