ರಾಖಿ ಸಾವಂತ್​ ಸ್ಥಿತಿ ಗಂಭೀರ? ಶಾಕಿಂಗ್​ ಹೇಳಿಕೆ ಕೊಟ್ಟ ಮಾಜಿ ಪತಿ- ನಟಿಗೆ ಆಗಿದ್ದೇನು?

By Suchethana D  |  First Published May 16, 2024, 2:01 PM IST

ನಟಿ ರಾಖಿ ಸಾವಂತ್​ ಅವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಿರುವ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ನಟಿಯ ಸಮಸ್ಯೆ ಹೇಳಿದ್ದಾರೆ. ಇನ್ನೋರ್ವ ಮಾಜಿ ಪತಿ ಆದಿಲ್​ ಖಾನ್​ ಪ್ರತಿಕ್ರಿಯೆ ಏನು?
 


'ರಾಖಿ ಸಾವಂತ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಯವಿಟ್ಟು ಡ್ರಾಮಾ ಅನ್ಬೇಡಿ. ರಾಖಿ ಸಾವಂತ್​ ಏನೇ ಮಾಡಿದ್ರೂ ಡ್ರಾಮಾ ಅಂತೀರಾ. ಆದರೆ ಈ ಸಲ ಅದು ನಾಟಕವಲ್ಲ. ಸೋಷಿಯಲ್​ ಮೀಡಿಯಾದಲ್ಲಿ ರಾಖಿ ಸಾವಂತ್​ ಆಸ್ಪತ್ರೆಗೆ ಸೇರಿರೋ ಕುರಿತು ಹಲವಾರು ಮಂದಿ ವ್ಯತಿರಿಕ್ತ ಟೀಕೆ ಮಾಡಿದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ಆಕೆಯ ಸ್ಥಿತಿ ಗಂಭೀರವಾಗಿದೆ. ಇದು ಸುಳ್ಳಲ್ಲ' ಎಂದು ರಾಖಿ ಸಾವಂತ್​ ಮೊದಲ ಪತಿ  ರಿತೇಶ್ ರಾಜ್ ಸಿಂಗ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ನಂತರ ರಾಖಿ ಅವರಿಗೆ ಆಗಿರುವ ಸಮಸ್ಯೆಗಳ ಕುರಿತು ಮಾತನಾಡಿರುವ ಅವರು, ರಾಖಿಯ ಗರ್ಭಕೋಶದಲ್ಲಿ ಗಡ್ಡೆ ಪತ್ತೆಯಾಗಿದೆ. ಅವರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ಹೇಳಿದ್ದಾರೆ.  ರಾಖಿಯವರ  ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿರುವ ರಿತೇಶ್​,  ಎದೆ ಮತ್ತು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಹಲವಾರು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ರಾಖಿಯ ಗರ್ಭಾಶಯದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ಇದು ಕ್ಯಾನ್ಸರ್ ಇರಬಹುದೆಂಬ ಶಂಕೆಗಳಿವೆ, ಆದರೆ ದೃಢೀಕರಿಸಲು ಹೆಚ್ಚಿನ ಪರೀಕ್ಷೆಯ ಫಲಿತಾಂಶಗಳು ಕಾಯುತ್ತಿವೆ. ರಾಖಿ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುವಂತೆ ರಿತೇಶ್ ಕೋರಿದ್ದಾರೆ.

Tap to resize

Latest Videos

ಕರೀನಾ ಹೆಸರಿನ ಟ್ಯಾಟೂ ಅಳಿಸಿ ಹಾಕಿದ ಸೈಫ್​! ಮೂರನೇ ಮದ್ವೆಗೆ ರೆಡಿನಾ ಕೇಳ್ತಿದ್ದಾರೆ ನೆಟ್ಟಿಗರು...

 ವೈದ್ಯರು ಅವಳನ್ನು ನೋಡಿಕೊಳ್ಳುತ್ತಿದ್ದಾರೆ.   ಆಕೆಯ ಗರ್ಭಾಶಯದಲ್ಲಿ ಗಡ್ಡೆಯನ್ನು ಕಂಡುಹಿಡಿದಿದ್ದಾರೆ. ಅವಳಿಗೂ ಹೊಟ್ಟೆ ನೋವು ಇತ್ತು. ಇದು ಕ್ಯಾನ್ಸರ್ ಇರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಪರೀಕ್ಷೆಗಳು ನಡೆಯುತ್ತಿವೆ. ವೈದ್ಯರು ಶಸ್ತ್ರಚಿಕಿತ್ಸೆಯನ್ನು ಪ್ರಸ್ತಾಪಿಸಿದ್ದಾರೆ. ಆದರೆ ಇದು ಕ್ಯಾನ್ಸರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು ಮೊದಲು ಪರೀಕ್ಷಿಸಲು ಬಯಸುತ್ತಾರೆ ಎಂದು ರಿತೇಶ್​ ಹೇಳಿದ್ದಾರೆ. 

ಅಷ್ಟಕ್ಕೂ ನಿನ್ನೆ ರಾಖಿ ಅವರನ್ನು ಎದೆನೋವಿನ ಸಲುವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾಖಿಗೆ ನಿಜವಾಗಿ ಏನಾಗಿದೆ ಎಂದು ತಿಳಿದಿರಲಿಲ್ಲ. ಆದರೆ ಸದಾ ಡ್ರಾಮಾ ಮೂಲಕವೇ ಫೇಮಸ್​ ಆಗಿರೋ ನಟಿ, ಅದರಲ್ಲಿಯೂ ಕಳೆದ ಒಂದೆರಡು ವಾರಗಳಿಂದ ಹುಚ್ಚುಚ್ಚಾಗಿ  ವರ್ತಿಸುತ್ತಿದ್ದ ನಟಿಯ ಫೋಟೋ ನೋಡಿದ ಹಲವು ನೆಟ್ಟಿಗರು ಇದು ಕೂಡ ಡ್ರಾಮಾ ಎನ್ನುತ್ತಿದ್ದಾರೆ. ಅಷ್ಟಕ್ಕೂ, ನಟಿ ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮಾಜಿ ಪತಿ ಆದಿಲ್​ ಖಾನ್​ರ  ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪ ಇವರ ಮೇಲಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಬಂಧನದ ಭೀತಿ ಇವರಿಗಿದೆ.  ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದುಕೊಂಡು  ಬುರ್ಖಾದಲ್ಲಿ ಕಾಣಿಸಿಕೊಂಡಿದ್ದ ರಾಖಿ ಈಚೆಗೆ, ಮೊದಲ ಪತಿ ರೀತೇಶ್​ ಬಳಿ ಓಡಿ ಹೋಗಿದ್ದರು.  ತಮ್ಮ ವಿರುದ್ಧ ಆದಿಲ್​ ಖಾನ್​ ದೂರು ದಾಖಲು ಮಾಡುತ್ತಿದ್ದಂತೆಯೇ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡಿದ್ದ ರಾಖಿ, ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಇವರ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸರೆಂಡರ್​ ಆಗುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ನಟಿ ಆಸ್ಪತ್ರೆಗೆ ಸೇರಿದ್ದರಿಂದ ಡ್ರಾಮಾ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಇನ್ನೋರ್ವ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ಕೂಡ ಜೈಲಿನಿಂದ ತಪ್ಪಿಸಿಕೊಳ್ಳಲು ಈಕೆ ಡ್ರಾಮಾ ಮಾಡುತ್ತಿದ್ದಾಳೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಬಾಯ್​ಫ್ರೆಂಡ್​​ ಜತೆ ಸಂಬಂಧ ಹೊಂದುವ ಮೊದ್ಲೇ ಎಗ್​ ಫ್ರೀಜ್​ ಮಾಡಿದ್ರಂತೆ ನಟಿ ಈಶಾ ಗುಪ್ತಾ!
 

click me!