ಆನ್‌ಲೈನ್‌ನಲ್ಲಿ ಇನ್ಮುಂದೆ ತರಕಾರಿ ಆರ್ಡರ್ ಮಾಡಿದ್ರೆ ಕೊತ್ತಂಬರಿ ಸೊಪ್ಪು ಫ್ರೀ!

By Vinutha Perla  |  First Published May 16, 2024, 2:01 PM IST

ತರಕಾರಿ ಖರೀದಿಸುವಾಗ ಅಂಗಡಿಯವನು ಉಚಿತವಾಗ ಕೊತ್ತಂಬರಿ ಸೊಪ್ಪು ನೀಡಿಲ್ಲವಾದರೆ ತಮ್ಮ ತರಕಾರಿ ಶಾಪಿಂಗ್ ಪೂರ್ಣಗೊಂಡಿಲ್ಲ ಎಂದು ಭಾರತೀಯ ಮಹಿಳೆಯರು ಭಾವಿಸುತ್ತಾರೆ. ಆದ್ರೆ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ನಲ್ಲಿ ಈ ವ್ಯವಸ್ಥೆ ಇರೋದಿಲ್ಲ. ಈ ಬಗ್ಗೆ ಮಹಿಳೆಯೊಬ್ಬರು ಪ್ರಶ್ನಿಸಿದ್ದಕ್ಕೆ ಬ್ಲಿಂಕಿಟ್‌ ಉಚಿತವಾಗಿ ಕೊತ್ತಂಬರಿ ಸೊಪ್ಪು ನೀಡ್ತಿದೆ.


ತರಕಾರಿ ಖರೀದಿಸುವಾಗ ಅಂಗಡಿಯವನು ಉಚಿತವಾಗ ಕೊತ್ತಂಬರಿ ಸೊಪ್ಪು ನೀಡಿಲ್ಲವಾದರೆ ತಮ್ಮ ತರಕಾರಿ ಶಾಪಿಂಗ್ ಪೂರ್ಣಗೊಂಡಿಲ್ಲ ಎಂದು ಅನೇಕ ಭಾರತೀಯರು ಭಾವಿಸುತ್ತಾರೆ. ಹೆಚ್ಚು ತರಕಾರಿ ಕೊಂಡಾಗ ವ್ಯಾಪಾರಿಯಿಂದ ಸ್ವಲ್ಪ ಕೊತ್ತಂಬರಿ ಸೊಪ್ಪನ್ನೂ ಹಾಕಿಸಿಕೊಳ್ಳುವುದು ಭಾರತೀಯ ಮಹಿಳೆಯರಿಗೆ ರೂಢಿಯಾಗಿದೆ. ಆದರೆ ಆನ್‌ಲೈನ್‌ ಗ್ರಾಸರಿ ಮಾರ್ಕೆಟ್‌ಗಳಲ್ಲಿ ಇಂಥವುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬ್ಲಿಂಕಿಟ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಕೊತ್ತಂಬರಿ ಸೊಪ್ಪನ್ನು ಖರೀದಿಸುವಾಗ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.

ಮುಂಬೈ ನಿವಾಸಿ ಅಂಕಿತ್ ಸಾವಂತ್, ತಮ್ಮ ತಾಯಿ ಬ್ಲಿಂಕಿಟ್‌ನಿಂದ ಆರ್ಡರ್ ಮಾಡುವಾಗ ಕೊತ್ತಂಬರಿ ಸೊಪ್ಪಿಗೆ ಪ್ರತ್ಯೇಕವಾಗಿ ಪಾವತಿಸಬೇಕಾಗಿರುವುದನ್ನು ತಿಳಿದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ ತಿಳಿಸಿದ್ದಾರೆ.'ತಮ್ಮ ತಾಯಿ ಬ್ಲಿಂಕಿಟ್‌ನಿಂದ ಆರ್ಡರ್ ಮಾಡುವಾಗ ಕೊತ್ತಂಬರಿ ಸೊಪ್ಪನ್ನು ಫ್ರೀಯಾಗಿ ಕೊಡುತ್ತಿಲ್ಲ ಎಂದಾದಾಗ ಮಿನಿ ಹಾರ್ಟ್‌ಅಟ್ಯಾಕ್‌ಗೆ ಒಳಗಾದರು; ಎಂದು ವ್ಯಕ್ತಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Tap to resize

Latest Videos

ಕ್ರಿಯೆಟಿವಿಟಿಗೆ ಸಿಕ್ತು ಮೆಚ್ಚುಗೆ, ಬ್ಲಿಂಕಿಟ್ ಮೂಲಕ ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ!

'ಆನ್‌ಲೈನ್ ಫ್ಲಾಟ್‌ಫಾರ್ಮ್‌ನಲ್ಲಿ ನೀವು ನಿರ್ದಿಷ್ಟ ಪ್ರಮಾಣದ ತರಕಾರಿಗಳನ್ನು ಖರೀದಿಸಿದಾಗ ಈ ರೀತಿಯ ಸೊಪ್ಪನ್ನು ಉಚಿತವಾಗಿ ನೀಡಬೇಕು' ಎಂದು ಅವರು ಸಲಹೆ ನೀಡಿದರು. ಈ ಪೋಸ್ಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಸೇರಿದಂತೆ ಹಲವರ ಗಮನ ಸೆಳೆಯಿತು. ಅಲ್ಬಿಂದರ್ ದಿಂಡ್ಸಾ, ವಿಲ್ ಡು ಎಂದು ಉತ್ತರಿಸಿದರು.

ನಂತರ, ದಿಂಡ್ಸಾ ಎಕ್ಸ್‌ನಲ್ಲಿ ತರಕಾರಿ ಶಾಪಿಂಗ್‌ನಲ್ಲಿ ಈ ಬದಲಾವಣೆಯನ್ನು ಅಳವಡಿಸಿಕೊಂಡಿರುವಾಗಿ ಬಹಿರಂಗಪಡಿಸಿದರು. ಬ್ಲಿಂಕಿಟ್ ಈಗ ಕೆಲವು ತರಕಾರಿ ಆರ್ಡರ್‌ಗಳೊಂದಿಗೆ 100 ಗ್ರಾಂ ಕಾಂಪ್ಲಿಮೆಂಟರಿ ಕೊತ್ತಂಬರಿ ಸೊಪ್ಪನ್ನು ನೀಡುತ್ತಿದೆ ಎಂದು ತೋರಿಸುವ ಸ್ಕ್ರೀನ್‌ಶಾಟ್‌ನ್ನು ಸಹ ಅವರು ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದೆ. 2.6 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದು, ಸುಮಾರು 3,900 ಮಂದಿ ಲೈಕ್‌ ಮಾಡಿದ್ದಾರೆ. ಮಾತ್ರವಲ್ಲ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಆನ್‌ಲೈನ್‌ ಫುಡ್‌ ಬುಕ್ಕಿಂಗ್‌ ಇನ್ನು ದುಬಾರಿ, ಫ್ಲಾಟ್‌ಫಾರ್ಮ್‌ ಫೀ ಏರಿಸಿದ Zomato!

'ಒಬ್ಬ ಬಳಕೆದಾರರು, 'ಬ್ಲಿಂಕಿಟ್ ಅತಿ ವೇಗವಾಗಿ ಜನರ ಸಮಸ್ಯೆಗೆ ಸ್ಪಂದಿಸಿದೆ' ಎಂದಿದ್ದಾರೆ. ಮತ್ತೊಬ್ಬರು, 'ಪ್ರತಿ ತಾಯಿಯೂ ಈ ಫ್ರೀ ಕೊತ್ತಂಬರಿ ಸೊಪ್ಪು ಸಿಗುವ ರೀತಿಯನ್ನು ಮೆಚ್ಚುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಉತ್ತಮ ತಂತ್ರ' ಎಂದು ಟೀಕಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಹೀಗೆಯೇ ಕೊತ್ತಂಬರಿ ಸೊಪ್ಪಿನ ಜೊತೆ ಉಚಿತವಾಗಿ ಹಸಿ ಮೆಣಸನ್ನು ನೀಡುವುದು ಸಹ ಒಳ್ಳೆಯದು' ಎಂದು ಸಲಹೆ  ನೀಡಿದ್ದಾರೆ.

It’s live! Everyone please thank Ankit’s mom 💛

We will polish the feature in next couple of weeks. https://t.co/jYm2hGm67a pic.twitter.com/5uiyCmSER6

— Albinder Dhindsa (@albinder)
click me!