ಹುಬ್ಬಳ್ಳಿಯ ಮತ್ತೊಬ್ಬ ಯುವತಿ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ಬಂಧಿಸಲಾಗದ ಪೊಲೀಸರು, ಆರೋಪಿ ಬಂಧನಕ್ಕೆ ಆಗ್ರಹಿಸಿದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ (ಮೇ 16): ಹುಬ್ಬಳ್ಳಿಯಲ್ಲಿ ನಿನ್ನೆ ಬೆಳ್ಳಂಬೆಳಗ್ಗೆ ವೀರಾಪುರ ಓಣಿಯಲ್ಲಿ ಯುವತಿ ಮನೆಗೆ ಹೊಕ್ಕು ಭೀಕರವಾಗಿ ಚಾಕು ಚುಚ್ಚಿ ಕೊಲೆಗೈದ ಆರೋಪಿಯನ್ನು ಬಂಧಿಸದ ಪೊಲೀಸರು, ಆರೋಪಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ 30 ಜನರನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಕಳೆದ ಒಂದು ತಿಂಗಳ ಅಂತರದಲ್ಲಿ ಇಬ್ಬರು ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಬರ್ಬರವಾಗಿ ಚಾಕು ಇರುದು ಕೊಲೆ ಮಾಡಲಾಗಿದೆ. ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ಮಗಳು ನೇಹಾಳನ್ನು ಕೊಲೆಗೈದ ಮಾದರಿಯಲ್ಲಿಯೇ ವೀರಾಪೂರ ಓಣಿಯಲ್ಲಿ ಬಡ ಕುಟುಂಬದ ಯುವತಿ ಅಂಜಲಿ ಅಂಬಿಗೇರಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಎರಡೂ ಘಟನೆಗಳಲ್ಲಿ ಯುವಕರ ಕ್ರೌರ್ಯವೇ ಮೆರೆದಿದೆ. ಇಲ್ಲಿ ಪೊಲೀಸರ ದಿವ್ಯ ನಿರ್ಲಕ್ಷ್ಯವೂ ಎದ್ದು ಕಾಣಿಸುತ್ತಿದೆ. ಇನ್ನು ಕೊಲೆ ಮಾಡಿದ ಆರೋಪಿ ಗಿರೀಶನನ್ನು 35 ಗಂಟೆಗಳು ಕಳೆದರೂ ಬಂಧಿಸಿಲ್ಲ. ಹೀಗಾಗಿ, ಸ್ಥಳೀಯ ಜನರು ಆರೋಪಿಯನ್ನು ಬಂಧಿಸಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಪೊಲೀಸರು ಆರೋಪಿ ಬಂಧಿಸುವುದನ್ನು ಬಿಟ್ಟು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೂರಿಸಿದ್ದಾರೆ.
undefined
ಹುಬ್ಬಳ್ಳಿಯ ಯುವತಿ ಅಂಜಲಿ ಹತ್ಯೆಗೈದ ಗಿರೀಶನಿಗೆ ಕೊಲೆಗಾರ ಸ್ನೇಹಿತ ಶೇಷ್ಯಾನೇ ರೋಲ್ ಮಾಡೆಲ್!
ಹುಬ್ಬಳ್ಳಿಯ ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ನೂರಾರು ಜನರು ಅಂಜಲಿ ಕೊಲೆ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು. ಮೃತ ಯುವತಿ ಅಂಜಲಿ ಮನೆಯಿಂದ ಹುಬ್ಬಳ್ಳಿಯ ಟೌನ್ ಪೋಲಿಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತಾ ಸಾಗಿದ್ದಾರೆ. ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಕೀಡಲೇ ಆರೋಪಿ ಗಿರೀಶನನ್ನು ಬಂಧಿಸಬೇಕು. ಪೊಲೀಸರು ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಲೇ ಯುವತಿಯರ ಕೊಲೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಾನೂನು ಸುವ್ಯವಸ್ಥೆ ಸರಯಾಗಿ ಕಾಪಾಡದ ಮುಖಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ನೇ ಹೊಣೆಗಾರರು ಎಂದು ಎಲ್ಲರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ 30ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಕೊಲೆ ಆರೋಪಿ ಗಿರೀಶನ ಮೇಲೆ ಎಷ್ಟೇ ದೂರು ಕೊಟ್ಟರೂ ನಿರ್ಲಕ್ಷ್ಯ ಮಾಡಿದ ಪೊಲೀಸರು: ಮೃತ ಅಂಜಲಿಯ ಸಂಬಂಧಿಕ ಮಹಿಳೆ ವಿಜಯಲಕ್ಷ್ಮಿ ಮಾತನಾಡಿ, ನಮ್ಮ ಅಂಜಲಿಯನ್ನು ಕೊಲೆ ಮಾಡುವ ಮುನ್ನವೇ ಆರೋಪಿ ಗಿರೀಶನ ಮೇಲೆ ಹವಲು ಬಾರಿ ಬೆಂಡಿಗೇರಿ ಪೊಲೀಸರಿಗೆ ದೂರು ನೀಡಿದ್ದೆವು. ಅಂಜಲಿಗೆ ಸೇರಿದ್ದ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನೂ ಗಿರೀಶ್ ಕಿತ್ತುಕೊಂಡು ಕಿರುಕುಳ ನೀಡಿದ್ದನು. ಹೀಗಾಗಿ, ಆರೋಪಿ ವಿರುದ್ಧ 6 ತಿಂಗಳ ಹಿಂದೆ ದೂರು ಕೊಟ್ಟಿದ್ದರೂ ಪೊಲೀಸರು ನಿರ್ಲಕ್ಷ್ಯ ಮಾಡಿದ್ದರು. ಸುಮಾರು ನಾಲ್ಕೈದು ಪ್ರಕರಣಗಳಲ್ಲಿ ಗಿರೀಶ್ ಆರೋಪಿಯಾಗಿದ್ದು, ಹೆಣ್ಣು ಮಕ್ಕಳಿಗೆ ತೀವ್ರ ಕಿರುಕುಳ ನೀಡುತ್ತಿದ್ದನು. ಈಗ ಅಂಜಲಿಯನ್ನೇ ಕೊಲೆ ಮಾಡಿದ್ದು, ಆತನನ್ನು ಜೀವಂತ ಬಿಡಬಾರದು. ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಹಿಳೆ ವಿಜಯಲಕ್ಷ್ಮೀ ಕಣ್ಣೀರಿಟ್ಟರು.
ಹುಬ್ಬಳ್ಳಿ ನೇಹಾ ಮರ್ಡರ್ ಮಾದರಿಯಲ್ಲೇ, ಅಂಜಲಿಗೂ ಚಾಕು ಚುಚ್ಚಿ ಕೊಲೆಗೈದ ಪಾಗಲ್ ಪ್ರೇಮಿ!
ಹುಬ್ಬಳ್ಳಿಯ ಮೂರು ಸಾವಿರ ಮಠದ ಸ್ವಾಮೀಜಿ ಮಾತನಾಡಿ, ಈ ನೆಲದ ಕಾನೂನು ಗೌರವವನ್ನ ಉಳಿಸಬೇಕಿದೆ. ಸರ್ಕಾರ ಇಂಥವರ ಮೆಲೆ ಕ್ರಮ ಕೈಗೊಳ್ಳಬೇಕು. ಅಂಜಲಿ ಕುಟುಂಬದವರ ಜೊತೆಗೆ ನಾವಿದ್ದೇವೆ. ಕೂಡಲೇ ಸರ್ಕಾರ ಕೊಲೆಗಾರರನ್ನು ಬಂಧಿಸಿ ಶಿಕ್ಷೆ ನೀಡುವ ದಿಸೆಯಲ್ಲಿ ಬದ್ದತೆಯನ್ನ ತೋರಿಸಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಬಡ ಕುಟುಂಬಕ್ಕೆ ಆಸರೆ ಆಗುತ್ತಿದ್ದ ಅಂಜಲಿಯನ್ನು ಕಳೆದುಕೊಂಡ ಕುಟುಂಬದಲ್ಲಿನ ಉಳಿದ ಹೆಣ್ಣು ಮಕ್ಕಳಿಗೆ ಮಠದಿಂದ ಉಚಿತ ಶಿಕ್ಷಣವನ್ನ ಕೊಡಲಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.