ಲೋಕಸಭೆಗೆ ಸಜ್ಜಾದ ಕಾಂಗ್ರೆಸ್‌, ಸೋತ ಪ್ರಭಾವಿಗಳಿಗೆ ಪ್ರಭಾವಿ ಹುದ್ದೆ!

Jul 8, 2023, 8:10 PM IST

ಬೆಂಗಳೂರು(ಜು.08): ಲೋಕಸಭೆ ಚುನಾವಣೆಗೆ ಇನ್ನೂ 7-8 ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದ್ರೂ ಕೂಡ ಸೋತವರ ಆತ್ಮಾವಲೋಕನ ಸಭೆಯನ್ನ ಕಾಂಗ್ರೆಸ್‌ನ ನಾಯಕರು ಮಾಡ್ತಾಯಿದಾರೆ. ವಿಧಾನಸಭೆ ಚುನಾವಣೆಯಲ್ಲಿ ಯಾರೆಲ್ಲ ಸೋತರೋ ಅವರೊಂದಿಗೆ ಕಾಂಗ್ರೆಸ್‌ ನಾಯಕರು ಮೀಟಿಂಗ್‌ ಮಾಡಿದ್ದಾರೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಸಭೆ ನಡೆದಿದೆ. 

ಬಿಜೆಪಿ ನಾಯಕರ ವಿರುದ್ಧ ಎಂ.ಬಿ.ಪಾಟೀಲ್‌ ಹೊಸ ಬಾಂಬ್‌: ವಿಪಕ್ಷ ನಾಯಕನ ಆಯ್ಕೆಗೆ ಕೋಟಿ ಕೋಟಿ ಡೀಲ್‌ ?