ಉಮನಾಥ್ ಘಾಟ್‌ನಿಂದ ದಿಯಾರಾಗೆ ತೆರಳುತ್ತಿದ್ದ ಭಕ್ತರ ದೋಣಿ ಗಂಗಾ ನದಿಯಲ್ಲಿ ಮುಳುಗಿದೆ. 17 ಭಕ್ತರ ಪೈಕಿ 6 ಮಂದಿ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರಿದಿದ್ದು,ತುರ್ತು ನೆರವಿನ ತಂಡಗಳು ಸ್ಥಳಕ್ಕೆ ಧಾವಿಸಿದೆ.
ಪಾಟ್ನ(ಜೂ.16) ದೇವರ ದರ್ಶನ ಮಾಡಿ ಮರಳುತ್ತಿದ್ದ ಭಕ್ತರ ದೋಣಿ ಗಂಗಾ ನದಿಯಲ್ಲಿ ಮುಳುಗಿ ಅನಾಹುತ ಸಂಭವಿಸಿದೆ. ಉಮನಾಥ್ ಘಾಟ್‌ನಿಂದ ದಿಯಾರಗೆ ತೆರಳುತ್ತಿದ್ದ 17 ಭಕ್ತರಿದ್ದ ದೋಣಿ ಬಿಹಾರದ ಪಾಟ್ನಾ ಸಮೀಪದ ಬಾರ್ಹ ವಲಯದಲ್ಲಿ ಮುಳುಗಿದೆ. 17 ಭಕ್ತರ ಪೈಕಿ 11 ಮಂದಿಯನ್ನು ರಕ್ಷಿಸಲಾಗಿದೆ. ಆದರೆ 6 ಮಂದಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಧಾವಿಸಿ ಶೋಧ ಕಾರ್ಯ ಆರಂಭಿಸಿದೆ.
ಉಮನಾಥ್ ಘಾಟ್ ಸಮೀಪದಲ್ಲೇ ದೋಣಿ ಮುಳುಗಿದೆ. ಒಂದೇ ಕುಟುಂಬದ 17 ಮಂದಿ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಬೆಳಗ್ಗೆ 9.15ರ ಸುಮಾರಿಗೆ ಘಟನೆ ನಡೆದಿದೆ. ದೋಣಿ ಮಗುಚಿ ಬಿದ್ದಿದೆ. ದೋಣಿಯಲ್ಲಿ ಯಾರಿಗೂ ಲೈಫ್ ಜಾಕೆಟ್ ಇರಲಿಲ್ಲ. ಕೆಲವರು ಈಜಿ ದಡ ಸೇರಿದ್ದಾರೆ. ಕೆಲವರನ್ನು ದೋಣಿಯಲ್ಲಿದ್ದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಆದರೆ 6 ಮಂದಿ ಪತ್ತೆಯಾಗಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್‌ಡಿಆರ್‌ಎಫ್ ಪಡೆ ಶೋಧ ಕಾರ್ಯ ಆರಂಭಿಸಿದೆ. ಆದರೆ 6 ಮಂದಿಯ ಸುಳಿವು ಪತ್ತೆಯಾಗಿಲ್ಲ.
ದೋಣಿ ಮಗುಚಿ ಪ್ರವಾಸಕ್ಕೆ ಬಂದ 6 ಮಕ್ಕಳು ಬಲಿ, 10 ಮಂದಿ ನಾಪತ್ತೆ!
17 ಮಂದಿ ಪೈಕಿ 11 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಬಾರ್ಹ ಪೊಲೀಸರು ಖಚಿತಪಡಿಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣಗಳು ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಸಣ್ಣ ದೋಣಿಯಲ್ಲಿ ಹೆಚ್ಚಿನ ಜನರನ್ನು ತುಂಬಿಕೊಂಡು ಪ್ರಯಾಣ ಮಾಡಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದೆ. ಕಾರ್ಯಾಚರಣೆಗೆ ಎಲ್ಲಾ ನೆರವು ನೀಡಿದೆ. ಈ ಮೂಲಕ ಶೋಧ ಕಾರ್ಯಕ್ಕೆ ವೇಗ ನೀಡಲಾಗಿದೆ. ನಾಪತ್ತೆಯಾಗಿರುವ 6 ಮಂದಿ ಬಕುಕಿ ಬರಲೆಂದು ಕುಟುಂಬಸ್ಥರು ಪ್ರಾರ್ಥಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ಇತ್ತೀಚೆಗೆ ಅವಘಢ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗ ಬದ್ರಿನಾಥ್ ಹೆದ್ದಾರಿಯಲ್ಲಿ ಬಸ್ ಪ್ರಪಾತಕ್ಕುರಳಿ 10 ಮಂದಿ ಮೃತಪಟ್ಟಿದ್ದರು. ನಿಯಂತ್ರಣ ತಪ್ಪಿದ ಬಸ್ ಅಲಕನಂದ ನದಿಗೆ ಉರುಳಿತ್ತು. ಈ ಘಟನೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿತ್ತು. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಿವಖೋರಿ ಮಂದಿರಕ್ಕೆ ತೆರಳಿ ವಾಪಸ್ ಆಗುತ್ತಿದ್ದ ಭಕ್ತರ ಮೇಲೆ ಉಗ್ರರು ದಾಳಿ ನಡೆಸಿ ಹಲವರನ್ನು ಹತ್ಯೆಗೈದಿದ್ದರು. ಬಸ್ ಪ್ರಪಾತಕ್ಕೆ ಬಿದ್ದಿತ್ತು. ಬಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು.
ಕಾಲರಾ ಹರಡುವ ಭೀತಿ, ಗುಳೆ ಹೊರಟ ಜನರ ದೋಣಿ ಮುಳುಗಿ 90 ಕ್ಕೂ ಹೆಚ್ಚು ಜನ ಸಾವು!