Latest Videos

ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ ಪವಿತ್ರಾ ಗೌಡ ಮಗಳು

By Shriram BhatFirst Published Jun 16, 2024, 3:35 PM IST
Highlights

ರೇಣುಕಾಸ್ವಾಮಿ  ಕೊಲೆ ಆರೋಪದಲ್ಲಿ ಪೊಲೀಸ್ ಕಸ್ಟಡಿ ಸೇರಿರುವ ಪವಿತ್ರಾ ಗೌಡಗೆ ಪುತ್ರಿ ಶುಭಾಶಯ ತಿಳಿಸಿದ್ದಾರೆ. ನನ್ನ ಎಲ್ಲಾ ಆಗಿರುವ ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯಗಳು ಎಂದು ಪವಿತ್ರಾ ಗೌಡ  ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ವಿಶ್ ಮಾಡಿದ್ದಾರೆ.

ರೇಣುಕಾಸ್ವಾಮಿ  ಕೊಲೆ ಆರೋಪದಲ್ಲಿ ಪೊಲೀಸ್ ಕಸ್ಟಡಿ ಸೇರಿರುವ ಪವಿತ್ರಾ ಗೌಡಗೆ (Pavithra Gowda) ಪುತ್ರಿ ಶುಭಾಶಯ ತಿಳಿಸಿದ್ದಾರೆ. ನನ್ನ ಎಲ್ಲಾ ಆಗಿರುವ ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯಗಳು ಎಂದು ಪವಿತ್ರಾ ಗೌಡ  ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ವಿಶ್ ಮಾಡಿದ್ದಾರೆ. ನಟಿ ಹಾಗು ದಶ್ನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಖುಷಿ ಹೆಸರಿನ ಮಗಳಿದ್ದಾಳೆ. ಪವಿತ್ರಾ ಗೌಡ ಹಾಗೂ ಅವರ ಮಾಜಿ ಗಂಡ ಸಂಜಯ್‌ ಸಿಂಗ್ ಅವರಿಬ್ಬರ ದಾಂಪತ್ಯದ ಫಲವಾಗಿ ಜನಿಸಿದ್ದು ಈ ಖುಷಿ ಎಂಬ ಮಗಳು ಎನ್ನಲಾಗಿದೆ. 

ಸದ್ಯ ನಟಿ ಹಾಗು ದರ್ಶನ್ (Actor Darshan) ಗೆಳತಿ ಪವಿತ್ರಾ ಗೌಡ ಅವರು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಒಂಬತ್ತು ದಿನಗಳ ವಿಚಾರಣೆ ನಡೆಯಲಿದ್ದು ಅದರಲ್ಲಿ ಈಗಾಗಲೇ ಐದು ದಿನಗಳನ್ನು ಕಳೆದಿದ್ದು, ಆರನೇ ದಿನದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಎಲ್ಲ ಆರೋಪಿಗಳನ್ನೂ ಕೋರ್ಟ್‌ಗೆ ಹಾಜರು ಪಡಿಸಲಾಗುವುದು. ಆ ಬಳಿಕ ಆರೋಪ ಸಾಬೀತಾದರೆ ಕಾನೂನಿನ ಪ್ರಕಾರ ಮುಂದಿನ ಶಿಕ್ಷೆ ವಿಧಿಸಲಾಗುವುದು. ಇದು ಈ ಕೊಲೆ ಕೇಸಿಗೆ ಸಂಬಂಧಿಸಿದ ಸದ್ಯ ಹಾಗು ಮುಂದಿನ ನಡೆಯ ಮಾಹಿತಿ. 

ಈ ಎರಡೇ ಸಂಗತಿಗಳು ನೀವೇನು ಎಂಬುದನ್ನು ಜಗತ್ತಿಗೆ ಹೇಳುತ್ತವೆ; ನಟ ದಳಪತಿ ವಿಜಯ್

ಇನ್ನು, ರೇಣುಕಾ ಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ನಟಿ ಪವಿತ್ರಾ ಗೌಡ ಹಾಗು ನಟ ದರ್ಶನ್ ಸೇರಿದಂತೆ ಹದಿನೇಳು ಜನರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೊದಲು ಐದು ದಿನಗಳ ಕಾಲ ವಿಚಾರಣೆ ನಡಸಲು ಹೇಳಿದ್ದ ನ್ಯಾಯಾಲಯ ಬಳಿಕ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಮುಂದುವರೆಸಿದ್ದು, ಬಳಿಕ ಅಗತ್ಯವಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎನ್ನಲಾಗಿದೆ. 

ಬಡಮಕ್ಕಳನ್ನು ಭೇಟಿಯಾದ ನಟ ಕಿಚ್ಚ ಸುದೀಪ್; ಮೈಸೂರಿನಲ್ಲಿ ಹೀಗೊಂದು ಮನಮುಟ್ಟಿದ ಸಂಭ್ರಮ!

ಪವಿತ್ರಾ ಗೌಡ ಹಾಗು ಸಂಜಯ್ ಸಿಂಗ್ ದಂಪತಿ ಮಗಳು ಖುಷಿ ಈಗ ತನ್ನ ಅಮ್ಮನನ್ನು ಸಹಜವಾಗಿಯೇ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸಂಜಯ್ ಸಿಂಗ ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಮಗಳು ಖುಷಿ ಅಮ್ಮನ ಜತೆಗೇ ಇದ್ದರು. ಆದರೆ, ಈಗ ಅವರಮ್ಮ ಪವಿತ್ರಾ ಗೌಡ ಮಗಳು ಖುಷಿಯ ಬಳಿ ಇಲ್ಲ. ಅದರಲ್ಲೂ ಮುಖ್ಯವಾಗಿ ಕೊಲೆ ಕೇಸ್ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ತನಗೆ ಅಪ್ಪ ಅಪ್ಪ-ಅಮ್ಮ ಎರಡೂ ಆಗಿದ್ದ ಅಮ್ಮ ಪವಿತ್ರಾ ಗೌಡ ಅವರನ್ನು ಮಗಳು ಖುಷಿ ಕೇವಲ ಅಮ್ಮ ಎಂದು ಅಂದುಕೊಂಡಿಲ್ಲ, ಅಮ್ಮನಲ್ಲೇ ಅಪ್ಪನನ್ನೂ ಕಾಣುತ್ತಿದ್ದಾಳೆ ಎಂಬುದು ಅವಳ ಮಾಡಿರುವ ಪೋಸ್ಟ್‌ನಲ್ಲಿಯೇ ತಿಳಿದುಬರುತ್ತದೆ. 

ಗಾಯತ್ರಿಗೂ ಮೊದಲು ಅನಂತ್‌ ನಾಗ್ ಲವ್ ಮಾಡಿದ್ದು ಪ್ರಿಯಾ ತೆಂಡೂಲ್ಕರ್; ಏನ್ ಪ್ರಾಬ್ಲಂ ಆಯ್ತು..?

ನಟಿ ಪವಿತ್ರಾ ಗೌಡ ಅವರು ಇತ್ತೀಚೆಗೆ ರೇಂಜ್ ರೋವರ್ ಕಾರನ್ನು ಕೂಡ ಕೊಂಡುಕೊಂಡಿದ್ದರು. ಅದರಲ್ಲಿ ಸಹಜವಾಗಿಯೇ ಅಮ್ಮ-ಮಗಳು ಇಬ್ಬರೂ ಹೋಗುತ್ತಿದ್ದರು. ಆದರೆ, ಈಗ ಮಗಳು ಖುಷಿಗೆ ತನ್ನ ಜತೆ ಅಮ್ಮನಿಲ್ಲ ಎಂಬ ಕೊರಗು ಕಾಡುತ್ತಿದೆ. ಅದನ್ನು ಯಾರೇ ಆದರೂ ಗ್ರಹಿಸಬಹುದು. ಅದರಲ್ಲೂ ಅಪ್ಪಂದಿರ ದಿನದಂದು ಅಮ್ಮನಿಗೆ ಮೆಸೇಜ್ ಪೋಸ್ಟ್ ಮಾಡುವ ಮೂಲಕ ಖುಷಿ 'ನನಗೆ ನೀನೇ ಅಪ್ಪ ಹಾಗೂ ಅಮ್ಮ ಎಲ್ಲವೂ' ಎಂಬ ಸಂದೇಶವನ್ನು ತನ್ನ ಅಮ್ಮನಿಗೆ ನೀಡಿದ್ದಾಳೆ. 

ಕೊಲೆ ಕೇಸ್‌ನಿಂದ ಮುಕ್ತಿ ಸಿಗಲೆಂದು ಕೈಗಾದಲ್ಲಿ ದರ್ಶನ್ ಬಾವ ಮಂಜುನಾಥ್ ಮಾಡಿದ್ದೇನು?

ಒಟ್ಟಿನಲ್ಲಿ, ನಟಿ ಪವಿತ್ರಾ ಗೌಡ ಬಾಳಿನಲ್ಲಿ ದೊಡ್ಡ ಬಿರುಗಾಳಿ ಬೀಸಿದೆ. ಕೊಲೆ ಆರೋಪದಲ್ಲಿ ಪೊಲೀಸ್ ವಿಚಾರಣೆ ಎದುರಿಸುವಂತಾಗಿದೆ. ಅದರಲ್ಲೂ ಮುಖ್ಯವಾಗಿ ಎ1 ಆರೋಪಿ ಎನಿಸಿಕೊಂಡಿರುವ ನಟಿ ಪವಿತ್ರಾ ಗೌಡ ಅವರು ಆರೋಪ ಸಾಬೀತಾದರೆ ಜೈಲು ಕಂಬಿಯ ಹಿಂದೆ ಹೋಗಬೇಕಾಗುತ್ತದೆ. ಹಾಗಾದರೆ, ಏನೂ ತಪ್ಆಪು ಮಾಡದ ಮಗಳು ಖುಷಿಯ ಬದುಕು ಅಯೋಮಯವಾಗಬಹುದು. ಹೀಗಾಗಿ ಸಹಜವಾಗಿಯೇ ನಾಗರೀಕ ಸಮಾಜ ಮಗಳ ಬಗ್ಗೆ ಮರುಕ ಪಡುತ್ತಿದೆ. ಖುಷಿಯ ಬಾಳಿಗೆ ಅಪ್ಪ-ಅಮ್ಮ ಎರಡೂ ಆಗಿರುವ ಪವಿತ್ರಾ ಗೌಡ ನಿರಪರಾಧಿ ಎಂಬ ಪಟ್ಟದೊಂದಿಗೆ ಹಿಂದಿರುಗುತ್ತಾರಾ? ಸದ್ಯಕ್ಕೆ ಇದು ಉತ್ತರವಿಲ್ಲದ ಪ್ರಶ್ನೆ ಎನ್ನಬಹುದು.

ಕೊಲೆ ಕೇಸ್‌ ಆರೋಪಿ ದರ್ಶನ್‌ ಬಗ್ಗೆ ಬಾವ ಮಂಜುನಾಥ್ ಹೇಳಿದ್ದೇನು? ಜನ ಏನಂತ ರಿಯಾಕ್ಟ್ ಮಾಡ್ಬಹುದು?

click me!