ಉತ್ತರ ಪ್ರದೇಶ ಮೂಲದ ಆದ್ರೆ, ತೆಲುಗು ಸಿನಿಮಾದಲ್ಲಿ ಫೇಮಸ್ ಆಗಿರೋ ನಟಿ ಲಾವಣ್ಯ ತ್ರಿಪಾಠಿ (Lavanya Tripathi) ವರುಣ್ ತೇಜ್ ಅವರೊಂದಿಗೆ ಹಲವು ವರ್ಷಗಳಿಂದ ಸಿಕ್ರೇಟ್ ಆಗಿ ರಿಲೇಶನ್ ಶಿಪ್ ನಲ್ಲಿದ್ದು, ಮದ್ವೆನೂ ಆಗಿದ್ದಾರೆ ಈ ಜೋಡಿ. ಮಿಸ್ಟರ್ ಚಿತ್ರದಲ್ಲಿ ಇಬ್ಬರು ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಮತ್ತೊಂದು ಚಿತ್ರದಲ್ಲಿ ಜೊತೆಯಾಗಿದ್ದರು, ಈ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಬದಲಾಯ್ತು, ಆದ್ರೆ ಮದುವೆಯಾಗೋವರೆಗೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸೈಲೆಂಟ್ ಆಗಿಯೇ ಇದ್ದರು.