ಡಿಕೆಶಿ-ಸಿದ್ಧರಾಮಯ್ಯರಿಂದಲೇ ಕಾಂಗ್ರೆಸ್‌ ಪತನ ಆಗುತ್ತೆ ಅಂದಿದ್ದ ಶೆಟ್ಟರ್‌, ಅವರನ್ನೇ ತಬ್ಬಿಕೊಂಡರಲ್ಲ!

Apr 18, 2023, 7:41 PM IST

ಬೆಂಗಳೂರು (ಏ.18): ಕಾಂಗ್ರೆಸ್‌ ಸೇರೋರು ಮೂರ್ಖರು ಎಂದು ಹೇಳಿದ್ದ ಜಗದೀಶ್‌ ಶೆಟ್ಟರ್‌ ಇಂದು ಅದೇ ಕಾಂಗ್ರೆಸ್‌ ಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ನಲ್ಲಿ ಹುಬ್ಬಳ್ಳಿ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಈ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅಂದು ಕಾಂಗ್ರೆಸ್‌ ವಿರುದ್ಧ ಮಾತಿನ ಯುದ್ಧ ಮಾಡಿದವರು ಇಂದು ಅದೇ ಪಕ್ಷದೊಂದಿಗೆ ಹೊಸ ಸಖ್ಯ ಬೆಳೆಸಿದ್ದಾರೆ. ರಾಜಕಾರಣಲ್ಲಿ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಇದು ಮತ್ತೊಂದು ಜ್ವಲಂತ ಉದಾಹರಣೆಯಷ್ಟೇ.

ಶೆಟ್ಟರ್‌ರನ್ನು ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸಿದೆ: ಜೋಶಿ ಬೇಸರ