vuukle one pixel image

ದಚ್ಚುಗೆ ವಿಪರೀತ ಬೆನ್ನು ನೋವು, ಇಷ್ಟಕ್ಕೇ ಸುಮ್ಮನೆ ಬಿಡಲ್ಲ ರೇಣುಕಾಸ್ವಾಮಿ ಆತ್ಮ!

Oct 31, 2024, 12:43 PM IST

ನಟ ದರ್ಶನ್ ತೂಗುದೀಪ ಮೂಳೆ ರೋಗಕ್ಕಷ್ಟೇ ಚಿಕಿತ್ಸೆ ಪಡೆಯಲು ಕೋರ್ಟ್‌ನಿಂದ ಸವಲತ್ತು ನೀಡಲಾಗಿದೆ. ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ದರ್ಶನ್ ಇದೀಗ ವಿಪರೀತ ಬೆನ್ನುನೋವಿನಿಂದ ಬಳಲುತ್ತಿದ್ದು, ಆತನಿಂದ ಕೊಲೆಯಾಗಿದೆ ಎನ್ನಲಾದ ರೇಣುಕಾಸ್ವಾಮಿ ಆತ್ಮ ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಟ ದರ್ಶನ್ ಬಿಡುಗಡೆ ಮಧ್ಯಂತರ ಜಾಮೀನಿನಮೇಲೆ ಜೈಲಿನಿಂದ ಹೊರಗೆ ಬದಿದ್ದಾರೆ. ಇದೊಂದು ಕಾರಣ ಇಟ್ಟುಕೊಂಡು ಸಂಭ್ರಮಿಸುತ್ತಿದೆ ಅವರ ಅಭಿಮಾನಿಗಳ ಒಂದು ಗುಂಪು. ಆದರೆ ನ್ಯಾಯಾಲಯ ಜಾಮೀನು ಕೊಡಲು ಏನೇನು ಕಾರಣ ನೀಡಿತು? ಹೊರ ಹೋದ ಮೇಲೆ ಯಾವ್ಯಾವ ನಿಯಮ ಪಾಲಿಸಬೇಕೆಂದು ವಿವರಿಸಿತು? ಆಸ್ಪತ್ರೆಯಲ್ಲೂ ಕೊಬ್ಬು ತೋರಿಸಿದರೆ ಏನು ಮಾಡಲಿದೆ ಖಾಕಿ ಪಡೆ? ಅದರ ಕಥನ ನಿಮ್ಮ ಮುಂದೆ.. ಇನ್ನು ದರ್ಶನ್ ಬೇಲ್ ಬಗ್ಗೆ ಯಾರ್ಯಾರು ಏನೇನಿ ರಿಯ್ಯಾಕ್ಟ್ ಮಾಡಿದ್ದಾರೆ ನೋಡಿ.

ಭೀಕರವಾಗಿ ಹೊಡೆತ ತಿಂದು ಬಳಲಿ ಪ್ರಾಣ ಬಿಟ್ಟಿರುವ ರೇಣುಕಾಸ್ವಾಮಿ ಆತ್ಮ ಈಗಲೂ ಅಳುತ್ತಿದೆ. ಅವರ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಈ ಸಮಯದಲ್ಲಿ ದರ್ಶನ್ ಹೊರ ಬಂದಿದ್ದಾನೆ. ಇದಕ್ಕೆ ಏನೆಂದು ಹೇಳಿತು ದರ್ಶನ್ ಕುಟುಂಬ? ಕೆಲವು ರಾಜಕಾರಣಿಗಳು ಹೆಂಗೆಂಗೆ ದರ್ಶನ್ ಜಾಮೀನಿಗೆ ಹೋರಾಟ ಮಾಡಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.