ವಜ್ರ ವ್ಯಾಪಾರಿ ಪುತ್ರನ ಮದುವೆಯಲ್ಲಿ ಪ್ರಧಾನಿ ಭಾಗಿ, ಮೋದಿ ಉಡುಗೆ ಮೇಲೆ ಎಲ್ಲರ ಕಣ್ಣು!

First Published Oct 31, 2024, 12:07 PM IST

ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಜ್ರ ವ್ಯಾಪಾರಿ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ನವ ಜೋಡಿಗಳಿಗೆ ಆಶೀರ್ವದಿಸಿದ ಪ್ರಧಾನಿ ಮೋದಿ ಎಲ್ಲರ ಕೇಂದ್ರ ಬಿಂದುವಾಗಿದ್ದರು, ಇದು ಪ್ರಧಾನಿಯಾಗಿ ಮಾತ್ರವಲ್ಲ, ಮೋದಿಯ ಉಡುಗೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದ ವೇಳಾಪಟ್ಟಿ ನಡುವೆ ಸಮವಿದ್ದರೆ ಆಹ್ವಾನಿಸಿದ ಮದುವೆಗೆಯಲ್ಲಿ ಭಾಗಿಯಾಗುತ್ತಾರೆ. ಮೋದಿ ಕೆಲವೇ ಕೆಲವು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಪ್ರಧಾನಿ ಮೋದಿ ಗುಜರಾತ್ ವಜ್ರ ವ್ಯಾಪಾರಿ ಸಾವ್ಜಿ ಧೋಲಕಿಯಾ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಬರೋಬ್ಬರಿ 12,000 ಕೋಟಿಯ ಒಡೆಯ ಸಾವ್ಜಿ ಧೋಲಕಿಯಾ ಅದ್ಧೂರಿ ಮದುವೆಗೆ ಮೋದಿ ಉಪಸ್ಥಿತಿ ಹೊಸ ಕಳೆ ನೀಡಿತ್ತು.

ಸೂರತ್‌ನ ಶ್ರೀಮಂತ ಉದ್ಯಮಿ ಎಂದೇ ಜನಪ್ರಿಯವಾಗಿರುವ ಸಾವ್ಜಿ ಧೋಲಕಿಯಾ ಪುತ್ರ ದ್ರವ್ಯ ಧೋಲಕಿಯಾ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಜಾಹ್ನವಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ದ್ರವ್ಯ ಧೋಲಕಿಗೆ ಪ್ರಧಾನಿ ಮೋದಿ ಆಶೀರ್ವಾದ ಮಾಡಿದ್ದರೆ. ಸೂರತ್‌ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮೋದಿ ಕೆಲ ಹೊತ್ತು ಮದುವೆ ಮಂಟಪದಲ್ಲಿ ಕಳೆದಿದ್ದಾರೆ.

Latest Videos


 ಪ್ರಧಾನಿ ಮೋದಿ ಸರಳ ಶೆರ್ವಾನಿ ತೊಟ್ಟಿದ್ದರು. ಕ್ರೀಮ್ ಹಾಗೂ ಗೋಲ್ಡನ್ ಶೈನಿ ಬಣ್ಣದ ಶೆರ್ವಾನಿಯಲ್ಲಿ ಮೋದಿ ಮಿಂಚಿದ್ದರು. ಮೋದಿಯ ಉಡುಗೆ ತೊಡುಗೆ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ಉಡುಗೆ ತೊಡುಗೆಯಲ್ಲಿ ನವ ಜೋಡಿಗಳಿಗಿಂತ ಮೋದಿ ಆಕರ್ಷಕ ಕೇಂದ್ರ ಬಿಂದುವಾಗಿದ್ದರು. ಮೋದಿ ಸರಳ ಹಾಗೂ ಅತ್ಯಾಕರ್ಷಕ ಉಡುಗೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಗುಜರಾತ್‌ನ ದುಧಲಾ ಗ್ರಾಮದಲ್ಲಿ ಈ ಅದ್ಧೂರಿ ವಿವಾಹ ಮಹೋತ್ಸವ ಆಯೋಜಿಸಲಾಗಿತ್ತು. ಹರಿ ಕೃಷ್ಣ ಡೈಮಂಡ್ ರಫ್ತು ಕಂಪನಿಯ ಸಿಇಒ ಆಗಿರುವ ಸಾವ್ಜಿ ಅತೀ ದೊಡ್ಡ ವಜ್ರ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದಾರೆ. ಸಾವ್ಜಿ ಧೋಲಕಿಯಾ ದೇಶಾದ್ಯಂತ ಭಾರಿ ಜನಪ್ರಿಯರಾಗಿದ್ದಾರೆ. ಕಾರಣ ತಮ್ಮ ಸಿಬ್ಬಂದಿಗಳಿಗೆ ದೀಪಾವಳಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಕಾರು, ಬೈಕ್ ಉಡುಗೊರೆ ನೀಡುತ್ತಾರೆ.

ಪುತ್ರನ ಮದುವೆಗೆ ಪ್ರಧಾನಿ ಮೋದಿ ಆಗಮಿಸಿ ಆಶೀರ್ವಾದ ಮಾಡಿದ ಸುಂದರ ಕ್ಷಣವನ್ನು ಸಾವ್ಜಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರೆ. ಪುತ್ರ ದ್ರವ್ಯ ಹಾಗೂ ಜಾಹ್ನವಿ ಹೊಸ ಬದುಕಿನ ಸುಂದರ ಕ್ಷಣಗಳಲ್ಲಿ ಭಾಗಿಯಾದ ಪ್ರಧಾನಿ ಮೋದಿ, ನವ ಜೋಡಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಮೋದಿ ಆಗಮನ ಆಶೀರ್ವಾದ ನವ ಜೋಡಿಗೆ ಮಾತ್ರವಲ್ಲ ಕುಟುಂಬದ ಹೆಮ್ಮೆಯ ಪ್ರತೀಕವಾಗಿದೆ. ಈ ಕ್ಷಣ ನಮ್ಮ ಕುಟುಂಬದಲ್ಲಿ ಹಚ್ಚಹಸುರಾಗಿ ಇರಲಿದೆ ಎಂದಿದ್ದಾರೆ.

ನಮ್ಮ ಮನವಿಗೆ ಸ್ವಂದಿಸಿ ಮದುವೆಗೆ ಆಗಮಿಸಿದ ಭಾರತದ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅನಂತ ಅನಂತ ಧನ್ಯವಾದ ಎಂದು ಸಾವ್ಜಿ ಧೋಲಕಿಯಾ ಹೇಳಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ಕುಟುಂಬ ಸದಸ್ಯರಂತೆ ಕಂಡಿದ್ದಾರೆ. ಹಿರಿಯರ ಮಾತುಕತೆ, ಕಿರಿಯರೊಂದಿಗೆ ಬೆರೆತು ಮೋದಿ ಅತ್ಯಾಪ್ತವಾಗಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಕೇವಲ ನಾಲ್ಕನೇ ತರಗತಿ ಓದಿರುವ ಸಾವ್ಜಿ ವಜ್ರ ವ್ಯಾಪರ ಉದ್ಯಮದಲ್ಲಿ ತೊಡಗಿಸಿಕೊಂಡು ಇಂದು ಭಾರತದ ಅತೀ ದೊಡ್ಡ ವಜ್ರ ವ್ಯಾಪಾರಿಯಾಗಿ ಬೆಳೆದು ನಿಂತಿದ್ದಾರೆ.  ಸಂಬಂಧಿಕರ ಉದ್ಯಮದಲ್ಲಿ ಉದ್ಯೋಗಿಯಾಗಿ ಸೇರಿಕೊಂಡ ಸಾವ್ಜಿ ಬಳಿಕ ಸ್ವಂತ ಕಂಪನಿ ಆರಂಭಿಸಿದ ಛಲಗಾರ. 

click me!