ಅಂದೇ ಒಂದು ದಿಟ್ಟ ನಿರ್ಧಾರ ಕೈಗೊಂಡೆ. ನನ್ನನ್ನು ಮಾಂಸದ ತುಂಡಿನಂತೆ ನೋಡಲು ಬಯಸುವವರ ಆಸೆಯನ್ನು ಪೂರೈಸಲು ನಾನು ಬಯಸುವುದಿಲ್ಲ. ನಾನು ಪಾತ್ರಕ್ಕೆ ತಕ್ಕ ಡ್ರೆಸ್ ಧರಿಸಿದರೂ ಮೈ ಕಾಣುವಂತೆ ಯಾವತ್ತೂ ಬಟ್ಟೆ ಧರಿಸಬಾರದು..
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿ ಇದೀಗ ಬಾಲಿವುಡ್ 'ರಾಮಾಯಣ'ಕ್ಕೂ ಕಾಲಿಟ್ಟಿರುವ ನಟಿ ಸಾಯಿ ಪಲ್ಲವಿ! ಸ್ಟಾರ್ ನಟಿಯಾಗಿ ಬೆಳೆದಿರುವ ಸಾಯಿ ಪಲ್ಲವಿ (Sai Pallavi) ತಮ್ಮ ವೃತ್ತಿ ಜೀವನದ ಶುರುವಿನಲ್ಲಿ ರಿಯಾಲಿಟಿ ಶೋಗಳು ಹಾಗೂ ಡಾನ್ಸ್ ಕಾರ್ಯಕ್ರಮದ ಮೂಲಕ ಪ್ರಪಂಚ ಪರ್ಯಟನೆ ಕೂಡ ಮಾಡಿದ್ದವರು. ಒಮ್ಮೆ ವಿದೇಶದಲ್ಲಿ ಮಾಡಿರುವ ಡಾನ್ಸ್ ಕಾರ್ಯಕ್ರಮಕ್ಕೆ ಸಂಬಂಧಿಸಿ ತಾವು ಟ್ರೋಲ್ ಆಗಿ ಮಾನಸಿಕ ಚಿತ್ರಹಿಂಸೆ ಅನುಭವಿಸಿದ್ದರ ಬಗ್ಗೆ ಅವರಿಲ್ಲಿ ಹೇಳಿಕೊಂಡಿದ್ದಾರೆ.
'ನನ್ನ ಪ್ರೇಮಂ ಸಿನಿಮಾ ರಿಲೀಸ್ ಆದ ಸಮಯವದು. ನಾನು ಅದಕ್ಕೂ ತುಂಬಾ ಮೊದಲು ಜಾರ್ಜಿಯಾದಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ನನ್ನ ಹಳೆಯ ವಿಡಿಯೋ ಮುಂದಿಟ್ಟುಕೊಂಡು ಆ ನೃತ್ಯಕ್ಕೆ ಅಗತ್ಯವಿದ್ದ ಬಟ್ಟೆಯನ್ನು ಧರಿಸಿದ್ದ ಒಂದೇ ಕಾರಣಕ್ಕೆ ಮನಬಂದಂತೆ ಮಾತನಾಡಿದರು. ಅದರಿಂದ ನನಗೆ ತುಂಬಾ ಬೇಸರ ಹಾಗೂ ದುಃಖವಾಗಿತ್ತು. 'ನಾನು ಮಾಂಸದ ತುಂಡಲ್ಲ, ನನಗೆ ಪ್ರಚಾರದ ಅವಶ್ಯಕತೆ ಕೂಡ ಇಲ್ಲ.
undefined
ದರ್ಶನ್‌ಗೆ ಒಳ್ಳೆಯ ಭವಿಷ್ಯವಿದೆ, 2025ರಲ್ಲಿ ಮತ್ತೆ ಸಿನಿಮಾದಲ್ಲೂ ನಟಿಸುತ್ತಾರೆ: ಅರ್ಜುನ್ ಗುರೂಜಿ!
ಹೀಗಾಗಿ, ನಾನು ಅಂದೇ ಒಂದು ದಿಟ್ಟ ನಿರ್ಧಾರ ಕೈಗೊಂಡೆ. ನನ್ನನ್ನು ಮಾಂಸದ ತುಂಡಿನಂತೆ ನೋಡಲು ಬಯಸುವವರ ಆಸೆಯನ್ನು ಪೂರೈಸಲು ನಾನು ಬಯಸುವುದಿಲ್ಲ. ನಾನು ಪಾತ್ರಕ್ಕೆ ತಕ್ಕ ಡ್ರೆಸ್ ಧರಿಸಿದರೂ ಮೈ ಕಾಣುವಂತೆ ಯಾವತ್ತೂ ಬಟ್ಟೆ ಧರಿಸಬಾರದು ಎಂದು ನಿರ್ಧರಿಸಿದ್ದೇನೆ. ಅದನ್ನು ಇಲ್ಲಿಯವರೆಗೂ ಪಾಲಿಸಿಕೊಂಡು ಬಂದಿದ್ದೇನೆ. ಯಾವತ್ತೋ ಆ ಬಗ್ಗೆ ಅನಿವಾರ್ಯತೆ ಬಂದರೆ, ಮತ್ತೆ ಅಂದು ಅದರ ಬಗ್ಗೆ ನಿರ್ಧರಿಸುತ್ತೇನೆ, ಈಗಂತೂ ಹೀಗೇ ಇರುತ್ತೇನೆ' ಎಂದಿದ್ದಾರೆ.
ಅಂದರೆ, ನಟಿ ಸಾಯಿ ಪಲ್ಲವಿ ಕೂಡ ತುಂಡು ಬಟ್ಟೆಯನ್ನು ಒಮ್ಮೆ ಧರಿಸಿ ಟ್ರೋಲ್‌ಗೆ ಒಳಗಾಗಿದ್ದರು ಎಂದಹಾಗಾಯ್ತು. ಆದರೆ, ಬಳಿಕ ಎಚ್ಚೆತ್ತ ನಟಿ ಸಾಯಿ ಪಲ್ಲವಿ ಇಂದು ಮೈ ತುಂಬಾ ಬಟ್ಟೆ ಧರಿಸಿ ಚಿತ್ರರಂಗದಲ್ಲಿ ಹಲವರಿಗೆ ಮಾದರಿ ಆಗಿದ್ದಾರೆ. ನಟಿ ಸೌಂದರ್ಯ ಹಾಗೂ ಸಾಯಿ ಪಲ್ಲವಿ ಸೇರಿದಂತೆ ಹಲವು ನಟಿಯರು ಮೈ ತುಂಬಾ ಬಟ್ಟೆ ಧರಿಸಿಯೇ ಎಲ್ಲ ಬಗೆಯ ಪಾತ್ರ ಮಾಡುತ್ತಾರೆ.
ನಟ ದರ್ಶನ್ ಮಧ್ಯಂತರ ಬೇಲ್‌ಗೆ ಶ್ಯೂರಿಟಿ ಕೊಟ್ಟ 'ಆಪದ್ಭಾಂಧವ' ಧನ್ವೀರ್ ಗೌಡ!
ಅದ್ಯಾಕೆ ಉಳಿದವರಿಗೆ ಅನೇಕರಿಗೆ ಮಾತ್ರ ಸರಿಯಾಗಿ ಬಟ್ಟೆ ಹಾಕಿಕೊಳ್ಳಲು ತೊಂದರೆಯಾಗುತ್ತದೆಯೋ ಗೊತ್ತಿಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಅವರೇ ಉತ್ತರ ಕೊಡಬೇಕು ಎಂಬುದೇ ಉತ್ತರ ಆಗಬಹುದು! ಒಟ್ಟಿನಲ್ಲಿ, ನಟಿ ಸಾಯಿ ಪಲ್ಲವಿಗೆ ಈಗಲೂ ಕೂಡ ಅವರ ಹಳೆಯ ವಿಡಿಯೋಗಳೇ ಆಗಾಗ ತೊಂದರೆ ಕೊಡುತ್ತಲೇ ಇರುತ್ತವೆ. ಅವರು ಇನ್ನಾದರೂ ಹೊಸ ವಿಡಿಯೋ ಆಗುವಾಗ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಅದು ಹಳೆಯದಾದಾಗ ಮತ್ತೆ ಅವರಿಗೇ ತೊಂದರೆ ಕೊಡುವುದು ಕಟ್ಟಿಟ್ಟ ಬುತ್ತಿ!