ರಾಜ್ಯದ ಜನತೆಗೆ ಸರ್ಕಾರ, ಪೊಲೀಸ್ ಇಲಾಖೆ ಪರವಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ದೀಪಾವಳಿ ಹಬ್ಬದ ಶುಭಾಶಯಗಳು ಕೋರಿದರು.
ಬೆಂಗಳೂರು (ಅ.31): ರಾಜ್ಯದ ಜನತೆಗೆ ಸರ್ಕಾರ, ಪೊಲೀಸ್ ಇಲಾಖೆ ಪರವಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ದೀಪಾವಳಿ ಹಬ್ಬದ ಶುಭಾಶಯಗಳು ಕೋರಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾವೇರಿಯ ಸವಣೂರಿನಲ್ಲಿ ಗಲಾಟೆಯಾಗಿದೆ. ಹೊಡೆದಿದ್ದಾರೆ ಅಂತಾ ಯಾರೂ ದೂರು ಕೊಟ್ಟಿಲ್ಲ. ಸ್ವಯಂ ಪ್ರೇರಿತವಾಗಿ ಪೊಲೀಸರು ದೂರು ದಾಖಲಿಸಿಕೊಂಡು ಘಟನೆ ಸಂಬಂಧ 20 ಜನರನ್ನ ಬಂಧಿಸಿದ್ದಾರೆ. ಬೆಳವಣಿಗೆ ನೋಡಿ ಮುಂದಿನ ಕ್ರಮವನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ. ಆದರೆ ಸದ್ಯಕ್ಕೆ ಯಾವುದೇ ಗಲಾಟೆ ಆಗುತ್ತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
undefined
ಎಸ್.ಬಂಗಾರಪ್ಪ ಹಿಂದುಳಿದ ವರ್ಗಗಳ ಏಳ್ಗೆ ಬಯಸಿದ ರಾಜಕಾರಣಿ: ಗೃಹ ಸಚಿವ ಪರಮೇಶ್ವರ್
ವಕ್ಫ್ ಆಸ್ತಿ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಪರಭಾರೆ ಮಾಡಬಾರದು. ಬೇರೆ ಜಿಲ್ಲೆಯಲ್ಲೂ ಇದೇ ರೀತಿ ಪ್ರಶ್ನೆ ಇದೆ. ಅದಷ್ಟು ಶೀಘ್ರವಾಗಿ ಇದನ್ನ ಪರಿಹರಿಸಲಾಗುತ್ತೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಲಾ ಡಿಸಿಗೂ ಸೂಚನೆ ಕೊಟ್ಟಿದ್ದಾರೆ. ಯಾವುದಕ್ಕೂ ನೋಟಿಸ್ ಕೊಡಬಾರದು, ಮುಂದುವರಿಯಬಾರದು ಎಂದು ಹೇಳಿದ್ದಾರೆ. ಜಮೀರ್ ವಿರುದ್ಧ ಈ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ ಮಾಡಲಿ. ವಿರೋಧ ಪಕ್ಷವಾಗಿ ಅವರು ಇರೋದೇ ಪ್ರತಿಭಟನೆ ಮಾಡಲಿಕ್ಕೆ. ಅವರು ಮಾಡೋದು ಮಾಡಲಿ, ನಾವು ಮಾಡೋದನ್ನ ನಾವು ಮಾಡುತ್ತೇವೆ. ಆಡಳಿತಾತ್ಮಕವಾಗಿ ರೈತ ಸಮುದಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಡಿಸಿಎಂ ವಿರುದ್ದ ರಾಜ್ಯಪಾಲರಿಗೆ ದೂರು ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ರಾಜ್ಯಪಾಲರಿಗೆ ದೂರು ಕೊಟ್ಟಿರೋದರ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಡಿಸಿಎಂ ನಾವು ಯಾವುದನ್ನೂ ಆ ರೀತಿ ಮಾಡಿಲ್ಲ ಎಂದು ನಿನ್ನೆಯೇ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಶಾಸಕರಿಗೆ ಬಜೆಟ್ ನಂತೆ ಎಷ್ಟು ಹಣ ಕೊಡಬೇಕು ಅಷ್ಟು ಪಕ್ಷಾತೀತವಾಗಿ ಕೊಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡರು.
ಮಾದಕ ವಸ್ತು ಮಾರಾಟ ಜಾಲ ಬುಡ ಸಹಿತ ಕೀಳುತ್ತೇವೆ: ಗೃಹ ಸಚಿವ ಪರಮೇಶ್ವರ್
ಶಕ್ತಿ ಯೋಜನೆ ಪರಿಷ್ಕರಣೆ ಮಾಡಬೇಕು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆ ಮಾಡಿಲ್ಲ. ಕ್ಯಾಬಿನೆಟ್ ಇರಲಿ. ಬೇರೆ ವೇದಿಕೆ ಇರಲಿ ಶಕ್ತಿ ಯೋಜನೆ ನಿಲ್ಲಿಸೋ ಬಗ್ಗೆ ಚರ್ಚೆ ಮಾಡಿಲ್ಲ. ಯಾರೋ ಅದನ್ನ ಗಮನಕ್ಕೆ ತಂದಿದ್ರೆ ಅದನ್ನ ಹೇಳಿರಬಹುದು. ಪರ ವಿರೋಧ ಯಾವಾಗಲೂ ಇರುತ್ತದೆ. ನನಗೂ ಖಾಸಗಿಯಾಗಿ ಮಾತಾಡೋವಾಗ. ಯಾಕೇ ಬೇಕಿತ್ತು, ಎಲ್ಲರಿಗೂ ಯಾಕೆ ಕೊಡ್ತಿರಿ, ಬಡವರಿಗೆ 2000 ರೂ ಕೊಡಿ ಕೇಳ್ತಿರ್ತಾರೆ. ಆದರೆ ಗ್ಯಾರಂಟಿ ನಿಲ್ಲಿಸೋ ಚರ್ಚೆ ಸರ್ಕಾರದ ಬಳಿ ಇಲ್ಲ ಎಂದರು.