ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ಶಕ್ತಿ ಯೋಜನೆ ಸ್ಥಗಿತವಾಗುತ್ತದೆಯೇ ಎಂಬ ಸುದ್ದಿಗಳ ಬೆನ್ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಅ.31): ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸ್ಥಗಿತವಾಗುತ್ತದೆಯೇ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜೆ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾರಿಯಲ್ಲಿರುವ ಮಹಿಳೆಯರ ಶಕ್ತಿ ಯೋಜನೆ ಪರಿಷ್ಕರಣೆ ಉದ್ದೇಶ ಇಲ್ಲ. ಸದ್ಯದಲ್ಲಿ ಅಂತಹ ಯಾವುದೇ ಸರ್ಕಾರದ ಹಂತದಲ್ಲಿ ಇಲ್ಲ. ಕೆಲ ಮಹಿಳೆಯರು ಹಾಗೇ (ಯೋಜನೆ ಸವಲತ್ತುಗಳು ಬೇಡ) ಹೇಳಿದ್ದಾರೆ ಅಂತ ಹೇಳಿಕೆ ನೀಡಿದ್ದಾರೆ. ನಾನು ಇರಲಿಲ್ಲ ಆವಾಗ. ಆದ್ದರಿಂದ ರಾಜ್ಯದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಶಕ್ತಿ ಯೋಜನೆಯನ್ನು ಪರಿಷ್ಕರಣೆಗೆ ಒಳಪಡಿಸುವ ಉದ್ದೇಶವಾಗಲಿ, ಪ್ರಸ್ತಾವನೆಯಾಗಲೀ ಸರ್ಕಾರದ ಮುಂದೆ ಇಲ್ಲ. pic.twitter.com/ExjwIkzmOw
— Siddaramaiah (@siddaramaiah)
ವಕ್ಫ್ ಆಸ್ತಿ ಗೊಂದಲವನ್ನು ಮುಂದಿಟ್ಟುಕೊಂಡು ನ.4ರಂದು ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತುಭಟನೆ ಮಾಡುತ್ತಿದ್ದಾರೆ. ಅವರ ಕಾಲದಲ್ಲೂ ನೋಟೀಸ್ ಕೊಟ್ಟಿದ್ದರು ಅದಕ್ಕೆ ಏನು ಹೇಳ್ತಾರೆ.? ಅವರ ಕಾಲದಲ್ಲಿ 200ಕ್ಕೂ ಹೆಚ್ಚು ನೋಟೀಸ್ ಕೊಟ್ಟಿದ್ದರು. ಈ ಇಬ್ಬಂದಿ ರಾಜಕೀಯ ಮಾಡಬಾರದು. ಅವರ ಕಾಲದಲ್ಲಿ ನೋಟೀಸ್ ಕೊಟ್ಟು ಪ್ರಾರಂಭ ಮಾಡಿದ್ದರು. ಆದರೆ, ಈಗ ನಾನು ಹೇಳಿದ್ದೇನೆ ನೋಟೀಸ್ ವಾಪಸ್ ತಗೋತೀವಿ ಅಂತ. ಹಾಗಿದ್ದಾಗ ಸಮಸ್ಯೆ ಎಲ್ಲಿದೆ ಹೇಳಿ. ಒಂದು ವೇಳೆ ನೋಟೀಸ್ ಕೊಟ್ಟಿದ್ದರೂ ವಾಪಸ್ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಯಾರನ್ನೂ ಒಕ್ಕಲೆಬ್ಬಿಸಲ್ಲ ಅಂತ ಹೇಳಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಅಕ್ರಮ ಕಟ್ಟಡ ತಡೆಗೆ ಶೀಘ್ರದಲ್ಲೇ ಪ್ರಬಲ ಕಾನೂನು: ಸಿಎಂ ಸಿದ್ದರಾಮಯ್ಯ
ಇನ್ನು ವಿಜಯಪುರ ಜಿಲ್ಲೆ ಬಿಟ್ಟು ಬೇರೆ ಬೇರೆ ಜಿಲ್ಲೆಗಳಲ್ಲಿ ನೋಟೀಸ್ ಕೊಟ್ಟ ವಿಚಾರದ ಬಗ್ಗೆ ಮಾತನಾಡಿ, ಯಾವ ಜಿಲ್ಲೆಯಾದರೂ ಇರಲಿ ಬಿಡಿ. ಅವರು ನೋಟೀಸ್ ಕೊಟ್ಟಿರಲಿಲ್ವಾ? ಯಾಕೆ ಕೊಟ್ಟಿದ್ದರು ಅವರು.? ಅನೇಕ ಜಿಲ್ಲೆಗಳಲ್ಲಿ ಅವರೂ ನೋಟೀಸ್ ಕೊಟ್ಟಿದ್ದರು. ನ.4ರಂದು ಪ್ರತಿಭಟನೆ ಮಾಡ್ತಾ ಇರೋದು ರಾಜಕೀಯಕ್ಕಾಗಿ. ಬೈ ಎಲೆಕ್ಷನ್, ಹಾಗೂ ಮಹಾರಾಷ್ಟ್ರ ಚುನಾವಣೆಗಾಗಿ ಈ ರೀತಿ ಮಾಡ್ತಾ ಇದ್ದಾರೆ. ನೋಟೀಸ್ ಕೊಟ್ಟಿರೋದನ್ನ ವಾಪಸ್ ಪಡೀತಾ ಇದ್ದೀವಿ. ಬಿಜೆಪಿ ಇರೋದೇ ರಾಜಕೀಯಕ್ಕಾಗಿ ಬರೀ ಸುಳ್ಳೇ ಹೇಳೋದು. ಇಶ್ಯೂ ಇಲ್ಲದೇ ಹೋದ್ರೂ ಇಶ್ಯೂ ಮಾಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ರಾಜಕಾರಣಕ್ಕಾಗಿ 'ಟಾಕ್ಸಿಕ್' ಸಿನಿಮಾಗೆ ತೊಂದ್ರೆ ಕೊಟ್ರಾ ಸಚಿವ ಈಶ್ವರ ಖಂಡ್ರೆ; ಕುಮಾರಸ್ವಾಮಿ ಕಿಡಿ
ಶಿಗ್ಗಾಂವಿಯಲ್ಲಿ ಖಾದ್ರಿ ನಾಮಪತ್ರ ವಾಪಸ್ ವಿಚಾರದ ಬಗ್ಗೆ ಮಾತನಾಡಿ, ನಾವೇ ಹೇಳಿದ್ದೇವೆ ಅವರು ವಾಪಸ್ ಪಡೆದಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿ ಅವರು. ಪಕ್ಷ ಹೇಳಿದ ಹಾಗೆ ಕೇಳಿದ್ದಾರೆ.. ಒಪ್ಪಿಕೊಂಡು ವಾಪಸ್ ಪಡೆದಿದ್ದಾರೆ. ಜಮೀರ್ ಕೂಡ ಅಲ್ಲೇ ಇದ್ದುಕೊಂಡು ಅವರನ್ನ ವಾಪಸ್ ತೆಗೆಸಿದ್ದಾರೆ. ಅದರಿಂದ ಶಿಗ್ಗಾಂವಿನಲ್ಲೂ ಗೆಲ್ತೀವಿ, ಚನ್ನಪಟ್ಟಣ ಮತ್ತು ಸಂಡೂರಲ್ಲೂ ಗೆಲ್ತೀವಿ. ಖಾದ್ರಿಯವರನ್ನ ಕಿಡ್ನಾಪ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಸುಳ್ಳೇಳೋದು ಬಿಟ್ರೆ ಇನ್ನೇನು ಹೇಳ್ತಾರೆ..? ಬಿಜೆಪಿ ಅವರು, ಕುಮಾರಸ್ವಾಮಿ ಬರೀ ಸುಳ್ಳೇ ಹೇಳೋದು. ಯಾವುದಾದ್ರೂ ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿರೋದು ತೋರಿಸಿ. ಯಾವುದಾದ್ರೂ ನೋಡಿದಿರಾ ನೀವು. ಬರೀ ಸುಳ್ಳು ಹೇಳ್ತಾರೆ. ಬರೀ ಸುಳ್ಳು ಆರೋಪ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.