Nov 14, 2022, 4:01 PM IST
ಕೋಲಾರದಲ್ಲಿ ಸಿದ್ದರಾಮಯ್ಯ ಮುಂದೆ ಸವಾಲುಗಳ ಬೆಟ್ಟವಿದ್ದು, ಅಲ್ಲಿ ಅವರಿಗೆ ಅನೇಕ ಮೈನಸ್ ಪಾಯಿಂಟ್ಗಳಿವೆ. ಕೋಲಾರದಿಂದ ಸಿದ್ದು ಸ್ಪರ್ಧಿಸಿದರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ ಕೆಲವರು. ಅಲ್ಲಿ ಸ್ಥಳೀಯ ನಾಯಕರ ಆಂತರಿಕ ಮುನಿಸು ಕಮ್ಮಿಯಾಗಿಲ್ಲ. ಮುಸ್ಲಿಮರು ಕೂಡಾ ಕಾಂಗ್ರೆಸ್ ಮೇಲೆ ಸಿಟ್ಟಾಗಿದ್ದಾರೆ. ಹಾಗೂ ಒಕ್ಕಲಿಗರ ಮತಗಳು ಸಿದ್ದರಾಮಯ್ಯ ಲೆಕ್ಕಾಚಾರ ಉಲ್ಟಾ ಮಾಡುವ ಸಾಧ್ಯತೆಗಳಿವೆ. ನಿನ್ನೆ ಸಿದ್ದರಾಮಯ್ಯ ಪ್ರವಾಸದಲ್ಲಿ ಮುನಿಯಪ್ಪ, ರೂಪಾ ಶಶಿಧರ್ ಗೈರಾಗಿದ್ದರು. ರಮೇಶ್- ಮುನಿಯಪ್ಪ ಕಚ್ಚಾಟದಿಂದ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು, ಹಾಗೂ ಅಲ್ಪಸಂಖ್ಯಾತರು ಸಿದ್ದು ಪರ ನಿಲ್ತಾರಾ ಅನ್ನೋದೇ ಪ್ರಶ್ನೆಯಾಗಿದೆ.