ಮಂಜು ಒಂದು ಬಗೆದರೆ ಬಿಗ್‌ಬಾಸ್‌ ಮತ್ತೊಂದು ಬಗೆದರು ಕ್ಯಾಪ್ಟನ್ಸಿಗೆ ಸೋತ ತಂಡವೂ ಸೇರ್ಪಡೆ!

By Gowthami K  |  First Published Nov 7, 2024, 12:01 AM IST

ಬಿಗ್‌ಬಾಸ್‌ ಕನ್ನಡ 11ರ 38ನೇ ದಿನದಲ್ಲಿ ಹಲವು ರೋಚಕ ಟಾಸ್ಕ್‌ಗಳು ನಡೆದವು. ಜೋಡಿ ಹಕ್ಕಿ, ನಿಲ್ಲೇ ನಿಲ್ಲೇ ಕಾವೇರಿ ಟಾಸ್ಕ್‌ಗಳಲ್ಲಿ ತಂಡಗಳು ತಮ್ಮ ತಮ್ಮ ಶಕ್ತಿ, ಚಾಣಾಕ್ಷತನ ಪ್ರದರ್ಶಿಸಿದವು. ಕೆಲವು ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.


ಬಿಗ್‌ಬಾಸ್‌ ಕನ್ನಡ 11ರ 38ನೇ ದಿನ ಈ ವಾರದ ಮೂರನೇ ಟಾಸ್ಕ್‌ ಕೊಟ್ಟರು. ಜೋಡಿ ಹಕ್ಕಿ ಟಾಸ್ಕ್‌ ನಲ್ಲಿ ಕೆಂಪು, ಹಳದಿ, ಹಸಿರು, ನೀಲಿ ತಂಡದಿಂದ ಇಬ್ಬಿಬ್ಬರು ಬಂದು ಬಿಗ್‌ಬಾಸ್‌ ಮನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ಈ ಟಾಸ್ಕ್‌ ನಲ್ಲಿ ಶಿಶಿರ್ ನಾಯಕತ್ವದ ಹಳದಿ ತಂಡದವರು ಗೆದ್ದು, ಪನಿಷ್‌ಮೆಂಟ್‌ ಕಾರ್ಡ್ ಅನ್ನು ಬಳಸಿಕೊಂಡಿತು. ಕ್ಯಾಪ್ಟನ್‌ ಹನುಮಂತ ಆಯ್ಕೆಯ ಪ್ರಕಾರ ಮಂಜು ಅವರ ಹಸಿರು ಟೀಂ ಹಳದಿ ಟೀಂ ಅವರ ಸೇವೆ ಮಾಡಬೇಕಿತ್ತು. ಈ ಅವಕಾಶದಲ್ಲಿ ಹಳದಿ ಟೀಂ ಅವರು ಹಸಿರು ಟೀಂ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡಿತು. ಹಸಿರು ಟೀಂ ನ ಭವ್ಯ ಹುಡುಗನ ವೇಷ ಮತ್ತು ಮಂಜು ಹಾಗೂ ಸುರೇಶ್ ಹುಡುಗಿಯರ ವೇಷ ಹಾಕಿ ಮನೋರಂಜನೆ ಕೊಟ್ಟರು.

ಯಾವುದಕ್ಕೂ ಕ್ಯಾರೇ ಅನ್ನದ ಹನುಮಂತ, ಫ್ರೆಂಡ್‌ ಧನ್‌ರಾಜ್‌ರನ್ನೇ ನಾಮಿನೇಟ್‌ ಮಾಡಿದ್ರು!

Tap to resize

Latest Videos

undefined

ವಾರದ ನಾಲ್ಕನೇ ಟಾಸ್ಕ್‌ ಆಗಿ ನಿಲ್ಲೇ ನಿಲ್ಲೇ ಕಾವೇರಿ ನೀಡಲಾಗಿತ್ತು ಪ್ರತಿಯೊಂದು ತಂಡವೂ ಡ್ರಮ್‌ ನಲ್ಲಿ ಇರುವ ನೀರನ್ನು ಎದುರಾಳಿ ತಂಡದಿಂದ ರಕ್ಷಣೆ ಮಾಡಿ ಉಳಿಸಬೇಕಿತ್ತು. ಮೊದಲ ಸುತ್ತಿನಲ್ಲಿ ಉಗ್ರಂ ಮಂಜು ಅವರ ಹಸಿರು ಟೀಂ ಗೆಲುವು ಕಂಡಿತು ಮತ್ತು ಚೈತ್ರಾ ನಾಯಕತ್ವದ ನೀಲಿ ತಂಡವನ್ನು ಹೊರಗಿಟ್ಟರು. ಈ ಟಾಸ್ಕ್‌ ನಲ್ಲಿ ಸುರೇಶ್ ಆಟ ಸರಿ ಇಲ್ಲ ಅಂತ ಅನುಷಾ ಅವರು ರೇಗಾಡಿದರು. ಆಟದ ವೈಖರಿಗೆ ಎಲ್ಲರೂ ಸುರೇಶ್ ಅವರನ್ನು ಬೈದುಕೊಂಡರು. ತ್ರಿವಿಕ್ರಮ್‌ ಕೂಡ ಸುರೇಶ್ ಅವರನ್ನು ಏರುದನಿಯಲ್ಲಿ ಪ್ರಶ್ನಿಸಿದರು.

ಎರಡನೇ ಸುತ್ತಿನಲ್ಲಿ ಕೂಡ ಮಂಜು ಅವರ ಟೀಂ ಗೆಲುವು ಸಾಧಿಸಿತು. ಆದರೆ ಆಟದಲ್ಲಿ ಕೆಂಪು ತಂಡದಿಂದ ತ್ರಿವಿಕ್ರಮ್ ಅವರು ಸುರೇಶ್ ಅವರನ್ನು ತಡೆದು ಲಾಕ್‌ ಮಾಡುವಾಗ ನೀರಿದ್ದ ಡ್ರಂ ಉರುಳಿ ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಗಂಭೀರವಾದ ಪೆಟ್ಟು ಬಿದ್ದಿಲ್ಲ. ಆರೋಗ್ಯವಾಗಿದ್ದಾರೆಂದು ಮನೆಮಂದಿಗೆ ಬಿಗ್‌ಬಾಸ್‌ ತಿಳಿಸಿದ್ದಾರೆ. ಇನ್ನು ಎರಡನೇ ಸುತ್ತಿನಲ್ಲೂ ಮಂಜು ಅವರ ಹಸಿರು ಟೀಂ ಗೆಲುವು ಕಂಡಿತು. ಹೀಗಾಗಿ ಕೆಂಪು ತಂಡದ ಗೌತಮಿ, ತ್ರಿವಿಕ್ರಮ್ ಮತ್ತು ಅನುಷಾ ಅವರನ್ನು ಹೊರಗಿಟ್ಟರು.

ವೇದಿಕೆಯಲ್ಲಿ ಸೊಳ್ಳೆಗಳನ್ನು ನುಂಗಿದ ಗಾಯಕಿ ನೀತಿ ಮೋಹನ್!

ಉಳಿದ ಹಳದಿ ತಂಡದೊಂದಿಗೆ ಮೂರನೇ ಸುತ್ತಿನಲ್ಲಿ ಹಸಿರು ತಂಡ ಆಡಬೇಕಿತ್ತು ಒಂದು ತಂಡದಿಂದ ಇಬ್ಬರು ಮಾತ್ರ ಆಡಬೇಕಿತ್ತು. ಈ ಆಟದಲ್ಲಿ ಹಸಿರು ತಂಡದ ಭವ್ಯಾ ಅವರು ಹಳದಿ ತಂಡದಿಂದ ರಕ್ಷಕರಾಗಿದ್ದ ಶಿಶಿರ್ ಅವರನ್ನು ಬೇದಿಸಿ ನೀರನ್ನು ಹೊರಹಾಕಿದ್ದು, ಅದ್ಭುತವಾಗಿ ಆಡಿ ತಂಡದ ಗೆಲುವಿಗೆ ಕಾರಣರಾದರು.

ಗೆದ್ದ ಹಸಿರು ತಂಡ ಕ್ಯಾಪ್ಟನ್ಸಿ ಟಾಸ್ಕ್  ಆಡುವ ಕಾರ್ಡ್ ಅನ್ನು ಆಯ್ಕೆ ಮಾಡಿತು. ತಂಡದಲ್ಲಿದ್ದ ಮೂವರು ಅಂದರೆ ಭವ್ಯಾ, ಸುರೇಶ್ ಮತ್ತು ಮಂಜು ಅವರು ನೇರವಾಗಿ ಕ್ಯಾಪ್ಟನ್ಸಿ ಆಡಲು ಅರ್ಹತೆ ಪಡೆದಿದೆ. ಆದರೆ ಬಿಗ್‌ಬಾಸ್‌ ಸೋತ ತಂಡಗಳಿಗೂ ಕ್ಯಾಪ್ಟನ್ಸಿ ಆಡಲು ಅವಕಾಶ ನೀಡಿ ಮೂರು ತಂಡಗಳಿಂದ ಒಬ್ಬೊಬ್ಬರನ್ನು ಹೊರಗಿಡುವಂತೆ ಕ್ಯಾಪ್ಟನ್‌ ಗೆ ತಿಳಿಸಿದೆ. ಮನೆಯ ನಾಯಕ ಹುನುಮಂತ ಹಳದಿ ತಂಡದಿಂದ ಐಶ್ವರ್ಯಾ, ಕೆಂಪು ತಂಡದಿದ ಗೌತಮಿ ಮತ್ತು ನೀಲಿ ತಂಡದಿಂದ ಚೈತ್ರಾ ಕುಂದಾಪುರ ಅವರನ್ನು ಹೊರಗಿಟ್ಟರು.  ಹೀಗಾಗಿ ಮನೆಯ ನಾಯಕ ಹನುಮಂತ  ಸಹಿತ ನಾಲ್ವರು ಕ್ಯಾಪ್ಟನ್ಸಿ ಟಾಸ್ಕ್‌ ನಲ್ಲಿ ಇಲ್ಲ.  ಕ್ಯಾಪ್ಟನ್ಸಿ ಆಟ ಯಾವುದಿರಲಿದೆ. ಯಾರು ಗೆಲ್ಲಲಿದ್ದಾರೆ ಎಂಬುದು ನಾಳಿನ ಸಂಚಿಕೆಯಲ್ಲಿ ತಿಳಿಯಲಿದೆ.

click me!