ಸುದರ್ಶನ್ ಭಂಡಾರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ರಶ್ಮಿತಾ ಚೆಂಗಪ್ಪ

Published : Nov 06, 2024, 10:02 PM ISTUpdated : Nov 07, 2024, 07:34 AM IST

ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಶ್ಮಿತಾ ಚೆಂಗಪ್ಪ ಸುದರ್ಶನ್ ಭಂಡಾರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.   

PREV
17
ಸುದರ್ಶನ್ ಭಂಡಾರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ರಶ್ಮಿತಾ ಚೆಂಗಪ್ಪ

ಕನ್ನಡ ಕಿರುತೆರೆಯಲ್ಲಿ ತಮ್ಮ ನೆಗೆಟಿವ್ ಪಾತ್ರಗಳಿಂದಲೇ ಜನಪ್ರಿಯತೆ ಗಳಿಸಿರುವ ನಟಿ ರಶ್ಮಿತಾ ಚೆಂಗಪ್ಪ (Rashmitha Chengappa), ಇದೀಗ ಸುದರ್ಶನ್ ಭಂಡಾರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ವಿವಾಹ ಸಂಭ್ರಮದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

27

ರಶ್ಮಿತಾ ಚೆಂಗಪ್ಪ ನವಂಬರ್ 3 ರಂದು ಸಪ್ತಪದಿ ತುಳಿದಿದ್ದಾರೆ. ಮಿಸ್ ಟು ಮಿಸಸ್ ಎಂದು ಬರೆದುಕೊಂಡಿರುವ ರಶ್ಮಿತಾ ಮಾಂಗಲ್ಯ ಧಾರಣೆಯಿಂದ ಹಿಡಿದು ವಿವಿಧ ವಿಶೇಷ ಸಂದರ್ಭಗಳ ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 
 

37

ನಟಿ ರಶ್ಮಿತಾ ಕ್ರೀಂ ಬಣ್ಣದ ಸೀರೆಯುಟ್ಟು, ಅದಕ್ಕೆ ಪಿಂಕ್ ಬಣ್ಣದ ಬ್ಲೌಸ್ ಧರಿಸಿದ್ದಾರೆ. ಇನ್ನು ಅವರ ಪತಿ ಸುದರ್ಶನ್ ಐವರಿ ಬಣ್ಣದ ಪಂಚೆ ಚಲ್ಯ ಧರಿಸಿದ್ದಾರೆ. ಸುದರ್ಶನ್ ಅವರ ಸೋಶಿಯಲ್ ಮೀಡೀಯಾ ಪ್ರೊಫೈಲ್ ನೋಡಿದ್ರೆ ಅವರು ಮಂಗಳೂರಿನಲ್ಲಿ ತಮ್ಮದೇ ಆದ ರೆಸಾರ್ಟ್ ನಡೆಸುತ್ತಿರುವಂತಿದೆ. 
 

47

ಕನ್ನಡ ಕಿರುತೆರೆಯಲ್ಲಿ  ಬಹಳ ವರ್ಷದಿಂದ ಗುರುತಿಸಿಕೊಂಡಿರುವ ರಶ್ಮಿತಾ, ಮಹಾರಾಣಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ ಗಟ್ಟಿಮೇಳ, ಮತ್ತೆ ವಸಂತ, ಯಾರಿವಳು, ಮೂರುಗಂಟು ಸೀರಿಯಲ್ ಗಳಲ್ಲಿ ಇವರು ವಿಲನ್ ಆಗಿ ಅಬ್ಬರಿಸಿದ್ದರು. 
 

57

ಇನ್ನು ‘ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಚರಿತಾ ಎನ್ನುವ ಅತಿಥಿ ಪಾತ್ರದಲ್ಲಿ ನಟಿಸಿದ ನಟಿ, ಮುಂದೆ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಊರ್ಮಿಳಾ' ಧಾರಾವಾಹಿಯಲ್ಲಿ ನಾಯಕಿಯಾಗಿ  ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೂ ಇವರು ಹೆಚ್ಚು ಜನಪ್ರಿಯತೆ ಪಡೆದರ್ರು ಮಾತ್ರ ವಿಲನ್ ಆಗಿದೆ. 
 

67

ಸದ್ಯ ರಶ್ಮಿತಾ ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ನಲ್ಲಿ ಬೃಂದಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ವಿಲನ್ ಪಾತ್ರವಾಗಿದ್ದು, ಈ ಹಿಂದೆ ಸುಕೃತಾ ನಾಗ್ ಈ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಇದೀಗ ಆ ಪಾತ್ರದಲ್ಲಿ ರಶ್ಮಿತಾ ನಟಿಸುತ್ತಿದ್ದಾರೆ. 
 

77

ರಶ್ಮಿತಾ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮುಂದೆ ಸೀರಿಯಲ್ ನಲ್ಲಿ ನಟಿಸುತ್ತಾರೋ ಇಲ್ಲವೋ ಅನ್ನೋದು ಗೊತ್ತಿಲ್ಲ. ನಟಿಸೋದಿಲ್ಲ ಅಂದ್ರೆ, ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ನಲ್ಲಿ ಬೃಂದಾ ಪಾತ್ರಧಾರಿ ಬದಲಾಗುತ್ತಾರೋ? ಅಥವಾ ಬೃಂದಾ ಪಾತ್ರವನ್ನೇ ಮುಗಿಸಲಾಗುತ್ತೋ ಕಾದು ನೋಡಬೇಕು. 
 

Read more Photos on
click me!

Recommended Stories